ಜಿಲ್ಲಾ ವಾರ್ಷಿಕ ಸಾಲ ಯೋಜನೆ ಬಿಡುಗಡೆ

Source: S O News service | By Staff Correspondent | Published on 27th March 2017, 6:03 PM | Coastal News | Don't Miss |

ಕಾರವಾರ  : ೨೦೧೭-೧೮ ನೇ ಸಾಲಿನ ಉತ್ತರ ಕನ್ನಡ ಜಿಲ್ಲಾ ವಾರ್ಷಿಕ ಸಾಲ ಯೋಜನೆಯನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರು ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿದರು.
ಪ್ರಸ್ತಕ ಸಾಲಿನ ಸಾಲ ಯೋಜನೆಯ ಬಹುಪಾಲು ಕೃಷಿ ಹಾಗೂ ಕೃಷಿ ಸಂಬಂಧಿತ ಕ್ಷೇತ್ರಗಳ ಅಭಿವೃದ್ಧಿಗೆ ಮೀಸಲಿರಿಸಲಾಗಿದೆ. ಒಟ್ಟಾರೆಯಾಗಿ ೩೯೮೧.೧೨ ಲಕ್ಷ ರೂ. ಸಾಲ ಗುರಿ ಅಂದಾಜಿಸಲಾಗಿದೆ. ಬೆಳೆ ಅಭಿವೃದ್ಧಿ, ನಿರ್ವಹಣೆ ಮತ್ತು ಮಾರುಕಟ್ಟೆ ಮತ್ತು ಕೃಷಿ ಸಂಬಂಧಿತ ಕಾರ್ಯಗಳಿಗೆ ಒಟ್ಟು ೧೫೫೮.೯೯ ಲಕ್ಷ ರೂ,  ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ೧೪೪೧.೧೪ ಲಕ್ಷ ರೂ, ರಫ್ತು ಸಾಲ ೫.೭೦ ಲಕ್ಷ ರೂ, ಶೈಕ್ಷಣಿಕ ಸಾಲ ೯೧.೦೫ ಲಕ್ಷ ರೂ, ವಸತಿ ೩೪೨.೮೭ ಲಕ್ಷ ರೂ, ನವೀಕರಿಸಬಹುದಾದ ಇಂಧನ ೬.೨೦ ಲಕ್ಷ ರೂ, ಇತರ ೧೮೫.೯೭ ಲಕ್ಷ ರೂ, ಸಾಮಾಜಿಕ ಮೂಲಸೌಲಭ್ಯ ೭.೬೮ ಲಕ್ಷ ರೂ ಸಾಲ ಅಂದಾಜಿಸಲಾಗಿದೆ. 
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಜಿ‌ಎಂ ಬಿ.ಎನ್.ಗೋಪಿನಾಥ ಅವರು ಆರ್.ಬಿ.ಐ ಇತ್ತೀಚಿನ ಮಾರ್ಗಸೂಚಿ ಬಗ್ಗೆ ಮಾತನಾಡಿ ಡಿಜಿಟಲ್ ವ್ಯವಹಾರದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾಗಿದೆ. ಡಿಜಿಟಲ್ ವ್ಯವಹಾರಕ್ಕೆ ಬ್ಯಾಂಕುಗಳು ಗ್ರಾಹಕರನ್ನು ಶಿಕ್ಷಿತರನ್ನಾಗಿ ಮಾಡಬೇಕು. ಇದಕ್ಕೆ ಸಂಭಂಧಪಟ್ಟಂತೆ ಮುಖ್ಯವಾಗಿ ಗ್ರಾಮೀಣ ಭಾಗದ ಬ್ಯಾಂಕಗಳು ಪ್ರತಿ ತಿಂಗಳು ಶಿಬಿರ ಮತ್ತು ಕಾರ್ಯಗಾರಗಳನ್ನು ಮಾಡಿ ಡಿಜಿಟಲ್ ವ್ಯವಹಾರಕ್ಕೆ ಉತ್ತೇಜಿಸಬೇಕು. ಆಧಾರ ಜೋಡಣೆ ಭವಿಷ್ಯದಲ್ಲಿ ಪ್ರಯೋಜನಕಾರಿಯಾಗಿರುವದರಿಂದ ಎಲ್ಲಾ ಖಾತೆದಾರರಿಗೂ ಆಧಾರ ಜೋಡಣೆ ಬಗ್ಗೆ ಅರಿವು ಮೂಡಿಸಿ ಎಂದು ತಿಳಿಸಿದರು. 
ಕೆಲವು ಬ್ಯಾಂಕ್‌ಗಳು ಫಲಾನುಭವಿಗಳಿಗೆ ಸಾಲ ನೀಡಲು ನಿರಾಕರಿಸುತ್ತವೆ ಎಂಬ ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿ ಆಕ್ಷೇಪ ವ್ಯಕ್ತಪಡಿಸಿದರು. ಎಲ್ಲಾ ಇಲಾಖೆಗಳು ಫಲಾನುಭವಿಯ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ ಸಲ್ಲಿಸಬೇಕು. ನಿರಾಕರಿಸಿದ ಸಂದರ್ಭಗಳಲ್ಲಿ ಲೀಡ್ ಬ್ಯಾಂಕ್ ಗಮನಕ್ಕೆ ತನ್ನಿ, ಒಂದು ಅಥವಾ ಒಂದೂವರೆ ತಿಂಗಳಲ್ಲಿ ಬ್ಯಾಂಕುಗಳು ಫಲಾನುಭವಿಗಳಿಗೆ ಸಾಲವನ್ನು ನೀಡುತ್ತವೆ ಎಂದು ಚಂದ್ರಶೇಖರ ನಾಯಕ್ ತಿಳಿಸಿದರು.
ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಆರ್.ಜಿ.ನಾಯಕ್ ಅವರು ಜಿಲ್ಲೆಯ ವಿವಿಧ ಯೋಜನೆಗಳ ಪ್ರಗತಿ ಕುರಿತು ಮಾಹಿತಿ ನೀಡಿ, ರಾಷ್ಟ್ರೀಯ ಗ್ರಾಮೀಣ ಜಿವನೋಪಾಯ ಮಿಶನ್‌ನ ೨೦೧೬-೧೭ ಸಂಜೀವಿನಿ ಸ್ಕಿಮ್ ದಲ್ಲಿ ೮,೯೨೪ ಫಲಾನುಭವಿಗಳನ್ನು  ಅಂದಾಜಿಸಲಾಗಿದೆ, ೮,೩೧೫ ಅರ್ಜಿಗಳನ್ನು ಕಳುಹಿಸಿದ್ದು ೮,೨೫೮ ಅರ್ಜಿಗಳು ಮಂಜೂರುಗೊಂಡು ೧೦,೩೨೨ ಲಕ್ಷ ರೂ ಬಿಡುಗಡೆಯಾಗಿರುತ್ತದೆ ಎಂದು ತಿಳಿಸಿದರು. 
ಜಿಲ್ಲಾ ನಬಾರ್ಡ್ ಅಧಿಕಾರಿ ಎಸ್.ಎಲ್.ಯೋಗೇಶ್, ಸಿಂಡಿಕೇಟ್ ಬ್ಯಾಂಕ್ ರೀಜನಲ್ ಮ್ಯಾನೇಜರ್ ರಾಮಾ ನಾಯ್ಕ, ಲೀಡ್ ಬ್ಯಾಂಕ್ ಮ್ಯಾನೇಜರ್ ರೇವಣ ಗೌಡ್ ಮತ್ತಿತರರು ಉಪಸ್ಥಿತರಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...