ಭಟ್ಕಳ: ವಿವಿ ಪ್ಯಾಟ್ ಯಂತ್ರ ಬಳಕೆ; ಮತದಾರರಿಗೆ ಮಾಹಿತಿ

Source: sonews | By Staff Correspondent | Published on 11th April 2018, 7:03 PM | Coastal News | Don't Miss |


ಭಟ್ಕಳ: ಮೇ.12 ರಂದು ನಡೆಯುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ವಿವಿ ಪ್ಯಾಟ್ ಬಳಕೆಯ ಕುರಿತು ಮಾಹಿತಿಯನ್ನು ಮದೀನಾ ಕಾಲೋನಿಯ ಮದೀನಾ ವೆಲ್ಫೇರ್ ಸೂಸೈಟಿ ಸಭಾಂಗಣದಲ್ಲಿ ನೀಡಲಾಯಿತು. 

ಸೆಕ್ಟರ್ ಅಧಿಕಾರಿ ಯಲ್ಲಮ್ಮ ಮರಿಸ್ವಾಮಿ ಮತದಾರರಿಗೆ ವಿವಿ ಪ್ಯಾಟ್ ಬಳಕೆ ಕುರಿತಂತೆ ಪ್ರತ್ಯಾಕ್ಷಿಕೆಯ ಮೂಲಕ ವಿವರಿಸಿ ನೀವು ಯಾವ ಅಭ್ಯರ್ಥಿಗೆ ಮತ ಹಾಕುತ್ತಿರೋ ಆ ಅಭ್ಯರ್ಥಿಯ ವಿವರ ವಿವಿಪ್ಯಾಟ್ ಪರದೆಯ ಮೇಲ ಮೂಡಿ ಬರುತ್ತದೆ ಅದು 7ಸೆಕೆಂಡ್ ಕಾಲ ಪರದೆಯ ಮೇಲೆ ಇದ್ದು ನಂತರ ಮಾಯವಾಗುತ್ತದೆ. ಈ ಸಂದರ್ಭದಲ್ಲಿ ನಿಮಗೆ ನಿಮ್ಮ ಮತ ಬೇರೆ ಅಭ್ಯರ್ಥಿಗೆ ಹೋಗಿದೆ ಎಂಬ ಸಂದೇಹ ಮೂಡಿದ್ದಲ್ಲಿ ಅಧಿಕಾರಿಗಳಿಗೆ ದೂರನ್ನು ನೀಡಬಹುದಾಗಿದ್ದು ಒಂದು ವೇಳೆ ನೀವು ನೀಡಿದ ಮಾಹಿತಿ ತಪ್ಪಾಗಿದ್ದಲ್ಲಿ ಅದಕ್ಕಾಗಿ ಶಿಕ್ಷೆಗೆ ಗುರಿಯಾಗಬಹುದು ಎಂದು ತಿಳಿಸಿದರು. 
ಮತದಾರರು ಹಾಗೂ ಸೂಸಟಿಯ ಪ್ರಮುಖರು ತಮ್ಮ ಅನುಮಾನ ಸಂದೇಹಗಳನ್ನು ಅಧಿಕಾರಿಗಳ ಮುಂದಿಟ್ಟರು. ಅದಕ್ಕೆ ಅಧಿಕರಿಗಳು ಸೂಕ್ತ ಉತ್ತರವನ್ನು ನೀಡಿದರು. 
ಈ ಸಂದರ್ಭದಲ್ಲಿ ಮದೀನಾ ವೆಲ್ಫೇರ್ ಸೂಸೈಟಿಯ ಅಧ್ಯಕ್ಷ ಫ್ರೋ.ಹಾಷಿಮ್ ಝರ್‍ಝರಿ, ಜಾಲಿ ಪ.ಪಂ ಸದಸ್ಯ ಆಫ್ತಾಬ್ ದಾಮೂದಿ, ಡಾ.ಆರಿಫ್ ಮೊಹತೆಶಮ್, ಸೇರಿದಂತೆ ಮಹಿಳಾ ಮತದಾರರು ಉಪಸ್ಥಿತರಿದ್ದರು. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...