ಜ. ೬,೭,೮ಕ್ಕೆ ಅಂತರ್ ಜಿಲ್ಲಾ ಹೊನಲುಬೆಳಕಿನ ಕಬಡ್ಡಿ ಪಂದ್ಯಾವಳಿ ; ಟಿಪ್ಪು ಸುಲ್ತಾನ್ ಟ್ರೋಫಿ

Source: s o news | By Manju Naik | Published on 31st December 2016, 3:43 PM | Coastal News | Sports News | Don't Miss |

ಭಟ್ಕಳ; ಜ.೬,೭,೮ ರಂದು ಭಟ್ಕಳದ ಸುಲ್ತಾನ್  ಯೂಥ್ ವೆಲ್ಪೇರ್ ಅಸೋಶಿಯೇಶನ್ ಅಂತರ್ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ ಆಯೋಜಿಸಿದ್ದು ಟಿಪ್ಪು ಸುಲ್ತಾನ್ ಆಕರ್ಷಕ ಟ್ರೋಫಿ ಸೇರಿದಂತೆ ಲಕ್ಷಕ್ಕೂ ಅಧಿಕ ನಗದು ಬಹುಮಾನ ನೀಡಲಾಗುವುದು ಎಂದು ಪ್ರಧಾನ ಕಾರ್ಯದರ್ಶಿ ಅಬ್ದುಸ್ಸಮಿ ಮೆಡಿಕಲ್ ಹೇಳಿದರು. 

ಅವರು ಅಸೋಸಿಯೇಶನ್ ಕಾರ್ಯಾಲಯದಲ್ಲಿ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿ ಮಾತನಾಡಿದರು.  

ಸುಲ್ತಾನ್ ವೆಲ್ಫೇರ್ ಅಸೋಸಿಯೇಶನ್ ಕಳೆದ ೨೯ ವರ್ಷಗಳಿಂದ  ಸಾಮಾಜಿಕ, ಶೈಕ್ಷಣಿಕ  ಹಾಗೂ ಕ್ರೀಡಾ ಕ್ಷೇತದಲ್ಲಿ ತನನ್ನು ತೊಡಗಿಸಕೊಂಡಿದ್ದು ಯಾವುದೇ ಜಾತಿ, ಭಾಷೆ, ಧರ್ಮಬೇಧ ಮಾಡದೆ ಎಲ್ಲರಿಗೂ ವೇದಿಕೆಯನ್ನು ನೀಡುತ್ತಿದೆ. ಈಗ ತಾಲೂಕಿನ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಕಲ್ಪಿಸಬೇಕಾಗಿದೆ ಎಂದರು.  

ಬೆಂಗಳೂರು, ತುಮಕುರು, ಹಾವೇರಿ, ದಾವಣಗೆರೆ, ಶಿವಮೊಗ್ಗ, ಮಂಗಳುರು, ಉಡುಪಿ, ಕಾರವಾರ ಸೇರಿದಂತೆ ಇನ್ನಿತರ ಜಿಲ್ಲೆಗಳಿಂದ ಒಟ್ಟು ೨೦ಕ್ಕೂ ಅಧಿತ ತಂಡಗಳು ಭಾಗವಹಿಸಲಿದ್ದು, ಇವುಗಳಲ್ಲಿ ಪ್ರಮುಖ ಆಕರ್ಷಣೆಯೆಂದರೆ ಪ್ರತಿಷ್ಠಿತ ಪ್ರೋ ಕಬಡ್ಡಿಯ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಅದೇ ರೀತಿ ೩ ಜನ ಅಂತರ ರಾಜ್ಯ ಕಬಡ್ಡಿ ಆಟಗಾರರು ಈ ಕಬಡ್ಡಿ ಪಂದ್ಯದಲ್ಲಿ ಆಡಬಹುದು ಎಂದು ತಿಳಿಸಿದರು. ಪಂದ್ಯಾವಳಿಯ ವಿಜೇತ ಪ್ರಥಮ ತಂಡಕ್ಕೆ ೫೫೫೫೫ರೂ ನಗದು ಹಾಗೂ  ಟ್ರೋಪಿ, ದ್ವೀತಿಯ ತಂಡಕ್ಕೆ ೩೩೩೩೩ರೂ ನಗದು ಸೇರಿ ಟ್ರೋಪಿ ನೀಡಲಾಗುವುದು.

ಈ ಸಂದರ್ಭದಲ್ಲಿ ಸುಲ್ತಾನ್ ಯೂಥ್ ವೇಲ್ಪೇರ್ ಅಸೋಶಿಯೇಶನ್ ಅಧ್ಯಕ್ಷ ಅಬ್ದುಲ್ ಅಝೀಮ್ ಮೊಹತೆಶಮ್, ಜಂಟಿ ಕಾರ್ಯದರ್ಶೀ ಅಂಬರ್ ಕೋಬಟ್ಟೆ, ಕ್ರೀಡಾ ಕಾರ್ಯದರ್ಶಿ ಮೌಲಾನಾ ಅಬ್ಬೂಬಕ್ಕರ್ ತೋನ್ಸೆ ಜಿಲ್ಲಾ ಕಬಡ್ಡಿ ಅಸೋಶಿಯೇಶನ್ ಕೋಶಾಧ್ಯಕ್ಷ ರಾಜೇಶ ಮುಂಡಗೋಡ, ಭಟ್ಕಳ ತಾಲೂಕಾ ಕಬಡ್ಡಿ ಅಸೋಶಿಯೇಶನ್ ಅಧ್ಯಕ್ಷ ಶ್ರೀಧರ ನಾಯ್ಕ, ಮುಂತಾದವರು ಉಪಸ್ಥಿತರಿದ್ದರು.

Read These Next

ಹ್ಯಾಮರ್ ಥ್ರೋ; ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆ ವಿದ್ಯಾರ್ಥಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಭಟ್ಕಳ: ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಯಲ್ಲಿ ಬುಧವಾರ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯಮಟ್ಟದ ಅಥ್ಲೆಟಿಕ್ಸ್ ನಲ್ಲಿ ...

ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿ ವಹಿಸುವಂತೆ ಕ್ಷೇತ್ರಶಿಕ್ಷಣಾಧಿಕಾರಿ ಕರೆ

ಭಟ್ಕಳ:  ವಿದ್ಯಾರ್ಥಿಗಳು  ಪಟ್ಯಪುಸ್ತಕದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸಿದ್ದಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ...

ನಮ್ಮಲ್ಲಿನ ಅಸಮತೆಯ ನಡುವೆಯೂ ಸಮಾಜ ಕಟ್ಟುವ ಕಾರ್ಯದಲ್ಲಿ ಒಂದಾಗಬೇಕು- ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಕಾರವಾರ; ಎಲ್ಲ ಕಾಲದಲ್ಲೂ ಅಸಮಾನತೆ ಇದ್ದೇ ಇದೆ. ಐದು ಬೆರಳುಗಳು ಒಂದಕ್ಕೊಂದು ಸಮವಿಲ್ಲದಿದ್ದರೂ ಕೆಲಸ ಮಾಡುವಾಗ ಒಂದಾಗಿ ಕೆಲಸ ...