ಅಕ್ರಮ ಮದ್ಯ ಸಾಗಾಟ ವ್ಯಕ್ತಿ ಬಂಧನ

Source: so news | By MV Bhatkal | Published on 20th March 2019, 12:02 AM | Coastal News | Don't Miss |

 
ಯಲ್ಲಾಪುರ: ಅಕ್ರಮವಾಗಿ ಗೋವಾ ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯನ್ನು ತಾಲ್ಲೂಕಿನ ಕಿರವತ್ತಿಯ ತಾತ್ಕಾಲಿಕ ಅಬಕಾರಿ ಠಾಣೆಯ ಬಳಿ ಸ್ಥಿರ ಕಣ್ಗಾವಲು ಪಡೆಯ ಅಧಿಕಾರಿಗಳು ಬಂಧಿಸಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಯಲವಟ್ಟಿಯ ಫಕೀರೇಶ ಭೀಮಪ್ಪ ಸರವಿ ಬಂಧಿತ ವ್ಯಕ್ತಿ. ಈತ ಅಕ್ರಮವಾಗಿ ಗೋವಾ ಮದ್ಯ ಸಾಗಿಸುತ್ತಿರುವಾಗ ತನಿಖಾ ಠಾಣೆ ಬಳಿ ಅಧಿಕಾರಿಗಳು ತಪಾಸಣೆ ನಡೆಸಿದ್ದು, ₹ 3,720 ಮೌಲ್ಯದ 31.5 ಲೀಟರ್ ಮದ್ಯ ವಶಪಡಿಸಿಕೊಂಡಿದ್ದಾರೆ.
ಅಬಕಾರಿ ಉಪ ಆಯುಕ್ತ ಮಂಜುನಾಥ ಎಲ್.ಎ ಅವರ ಮಾರ್ಗ
ದರ್ಶನದಲ್ಲಿ ತಹಶೀಲ್ದಾರ್ ಶಂಕರ ಜಿ.ಎಸ್, ಅಬಕಾರಿ ಉಪ ಅಧೀಕ್ಷಕಿ ಸ್ವಪ್ನ ಆರ್.ಎಸ್, ನಿರೀಕ್ಷಕರಾದ ಶಂಕರಗೌಡ ಪಾಟೀಲ, ಉಪನಿರೀಕ್ಷಕ ಸಿದ್ದಪ್ಪ ಮೇಟಿ, ಎಸ್‍ಎಸ್‍ಟಿ ತಂಡದ ಶ್ರೀಧರ ನಾಯ್ಕ, ಸೂರ್ಯಕಾಂತ ಕಲಮನಿ, ನಾಗೇಂದ್ರ ಸಿದ್ದಿ, ಚೆನ್ನಕೇಶವ ಡಿ.ಕೆ, ಬಿ.ಎಸ್.ನಾಯ್ಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...