ಭಟ್ಕಳ: ಹೆಸ್ಕಾಂ ಮೀಟರ್ ರೀಡಿಂಗ್ ವಿಳಂಬ; ಸಾರ್ವಜನಿಕರಿಂದ ದೂರು

Source: S O News service | By Staff Correspondent | Published on 23rd September 2016, 6:41 PM | Coastal News | Don't Miss |

 

ಭಟ್ಕಳ: ಇಲ್ಲಿನ ಹೆಸ್ಕಾಂ ಇಲಾಖೆಯಲ್ಲಿ ಮನೆ ಮನೆಗೆ ತೆರಳಿ ವಿದ್ಯುತ್ ಬಿಲ್ ನೀಡುವಲ್ಲಿ ವಿಳಂಬ ಮಾಡುತ್ತಿದ್ದು ನಿಗದಿತ ದಿನಾಂಕದೊಳಗೆ ಮೀಟರ್ ರೀಡಿಂಗ್ ಆಗುತ್ತಿಲ್ಲ ಎಂದು ಆರೋಪಿಸಿ ಮದೀನಾ ಕಾಲೋನಿಯ ಮದೀನಾ ವೆಲ್ಫೇರ್ ಸೂಸೈಟಿಯ ಪದಾಧಿಕಾರಿಗಳು ಹೆಸ್ಕಾಂ ನ ಸಹಾಯಕ ಅಭಿಯಂತರರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿ ಕೂಡಲೆ ವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಆಗ್ರಹಿಸಿದರು.

ಮದೀನಾ ಕಾಲೋನಿ ಪ್ರದೇಶದಲ್ಲಿ ಪ್ರತಿ ತಿಂಗಳು ೯ನೇ ದಿನಾಂಕದಂದು ಮೀಟರ್ ರೀಡಿಂಗ್ ಮಾಡಿ ವಿದ್ಯುತ್ ಬಿಲ್ ನೀಡುವ ವ್ಯವಸ್ಥೆ ಇದ್ದು ಆದರೆ, ಮನಸ್ಸಿಗೆ ಬಂದಂತೆ ಸಮಯ ಸಿಕ್ಕಾಗ ಬರುವ ಮೀಟರ್ ರೀಡಿಂಗ್ ಮಾಡುವ ಸಿಬ್ಬಂಧಿಗಳು ೪-೫ ದಿನ ತಡವಾಗಿ ಬಂದು ೯ನೇ ತಾರೀಖಿನ ಬಿಲ್ ನೀಡುತ್ತಾರೆ. ಇದರಿಂದಾಗಿ ಗ್ರಾಹಕರಿಗೆ ಹೆಚ್ಚಿನ ಬಿಲ್ ಆಕರಿಸಿದಂತಾಗುತ್ತದೆ. ಅಲ್ಲದೆ ಬಿಲ್ ಪಾವತಿಸಲು ಕೊನೆಯ ದಿನಾಂಕದ ಗಡುವು ಕೂಡ ಬೇಗನೆ ಮುಗಿಯುತ್ತಿದ್ದು ಇದರಿಂದಾಗಿ ಸಾರ್ವಜನಿಕರು ತೊಂದರೆಯನ್ನು ಅನುಭವಿಸುವಂತಾಗಿದೆ ಎಂದು ಮನವಿಯಲ್ಲಿ ದೂರಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಮದೀನಾ ವೆಲ್ಫೇರ್ ಸೂಸೈಟಿಯ ಅಧ್ಯಕ್ಷ ಮೌಲಾನ ಮುಹಮ್ಮದ್ ಇರ್ಫಾನ್ ನದ್ವಿ ಎಸ್.ಎಂ, ಮದೀನಾ ಕಾಲೋನಿ ಸಾರ್ವಜನಿಕರು ಇಂತಹ ಸಮಸ್ಯೆಗಳನ್ನು ಹಲವು ತಿಂಗಳಿಂದ ಎದುರಿಸುತ್ತಿದ್ದಾರೆ. ಈ ಸಮಸ್ಯೆ ಮದೀನಾ ಕಾಲೋನಿಯಲ್ಲಿ ಗಮನಕ್ಕೆ ಬಂದಿದೆ. ಆದರೆ ಇಂತಹ ಸಮಸ್ಯೆಯೂ ಭಟ್ಕಳ ನಗರದಾದ್ಯಂತ ಇರಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಮಸ್ಯೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಹಾಯಕ ಅಭಿಯಂತ ಮಂಜುನಾಥ್ ಮೀಟರ್ ರೀಡಿಂಗ್ ಗಾಗಿ ಎಜೆನ್ಸಿಗೆ ವಹಿಸಿಕೊಡಲಾಗಿತ್ತು ಅವರ ಅವಧಿ ಮುಗಿದು ಮರು ಟೆಂಡರ್ ಮಾಡುವುದರಲ್ಲಿ ವಿಳಂಬವಾಗಿದ್ದರಿಂದ ಈ ಸಮಸ್ಯೆ ಉದ್ಭವಿಸಿದೆ. ಅಲ್ಲದೆ ಮೀಟರ್ ರೀಡಿಂಗ್ ಯಂತ್ರಗಳು ಮಳೆಗಾಲದಲ್ಲಿ ಕೆಟ್ಟು ಹೋಗಿದ್ದರಿಂದ ಮೀಟರ್ ರೀಡಿಂಗ್ ಮಾಡುವಲ್ಲಿ ವಿಳಂಬವಾಗಿದೆ. ಈಗ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಮುಂದಿನ ತಿಂಗಳಿನಿಂದ ಇಂತಹ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಈ ಸಂದರ್ಭದಲ್ಲಿ ನಯೀಮ್ ಕೋಕಾರಿ, ಅಬ್ದುಲ್ ಜಲೀಲ್ ಖತಿಬ್,  ಸಮಿಯುಲ್ಲಾ ಶೇಖ್ ಮುಂತಾದವರು ಉಪಸ್ಥಿತರಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...