ಹಾಲಿನ ಖರೀದಿ ದರ; ಪ್ರತಿ ಕೆ.ಜಿ.ಗೆ 1 ರೂಪಾಯಿಯಂತೆ ಹೆಚ್ಚಳ-ಹೆಚ್.ಡಿ.ರೇವಣ್ಣ

Source: sonews | By Staff Correspondent | Published on 15th March 2018, 12:41 AM | State News |

ಹಾಸನ : ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಾಳೆಯಿಂದ ಹಾಲಿನ ಖರೀದಿ ದರವನ್ನು ಪ್ರತಿ ಕೆ.ಜಿ.ಗೆ 1 ರೂಪಾಯಿಯಂತೆ ಹೆಚ್ಚಿಸಲಾಗಿದೆ ಎಂದು ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ಹೆಚ್.ಡಿ.ರೇವಣ್ಣ ಪ್ರಕಟಿಸಿದರು.

ಇಂದು ಸುಧ್ದಿಗೋಷ್ಠಿಯಲ್ಲಿ ಮಾತನಾಡಿ ಉತ್ಪಾದಕರಿಗೆ ತಿಂಗಳಿಗೆ ಸುಮಾರು 2.50 ಕೋಟಿ ಹೆಚ್ಚುವರಿ ಹಣ ಒಕ್ಕೂಟದಿಂದ ಪಾವತಿಸಲಾಗುವುದು ಎಂದರು.ಒಕ್ಕೂಟದಲ್ಲಿ "ಹಾಮೂಲ್ ರೈತ ಕಲ್ಯಾಣ ಟ್ರಸ್ಟ್" ಸ್ಧಾಪಿಸಿದ್ದು ಟ್ರಸ್ಟಿನ ಮೂಲಕ ಒಕ್ಕೂಟದ ವ್ಯಾಪ್ತಿಯ ಹಾಲು ಉತ್ಪಾದಕರು ಮತ್ತು ಹೈನುರಾಸುಗಳ ಆರೋಗ್ಯ ವಿಮೆ,ಉತ್ಪಾದಕರ ಮಕ್ಕಳ ಶಿಕ್ಷಣಕ್ಕೆ ಆಥಿ೯ಕ ನೆರವು,ಉತ್ಪಾದಕರು ಅಥವಾ ರಾಸುಗಳು ಮೃತಪಟ್ಟಲ್ಲಿ ಆಥಿ೯ಕ ನೆರವು ಕಲ್ಪಪಿಸಲಾಗುವುದು ಎಂದು ವಿವರಿಸಿದರು.ಸಕಾ೯ರಿ ಪದವಿ ಕಾಲೇಜುಗಲ್ಲಿ ಗ್ರಾಮೀಣ ಭಾಗದ ವಿದ್ಯಾಥಿ೯ಗಳು ವ್ಯಾಸಂಗ ಮಾಡುತ್ತಿರುವ ಕಾರಣ ಕಂಪ್ಯೂಟರ್ ಪಾಠ್ಯ ಬೋಧನೆಗೆ ಅಗತ್ಯವಿರುವ ಕಂಪ್ಯೂಟರ್ಗಳನ್ನು ಒಕ್ಕೂಟ ಒದಗಿಸಲು ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.ಒಕ್ಕೂಟದಲ್ಲಿ ನಿಮಾ೯ಣ ಮಾಡಿರುವ ಐಸ್ ಕ್ರೀಂ ಘಟಕದಿಂದ ಪ್ರಾಯೋಗಿಕವಾಗಿ ಐಸ್ ಕ್ರೀಮ್ ಉತ್ಪಾದಿಸಲು ಆರಂಭಿಸಿದ್ದು ಮಾರುಕಟ್ಟೆಗೆ ಪ್ರಾಯೋಗಿಕವಾಗಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.ಪ್ರತಿದಿನ 10 ಸಾವಿರ ಲೀಟರ್ಐಸ್ ಕ್ರೀಮ್ ಉತ್ಪಾದಿಸಿ 5 ಸಾವಿರ ಲೀಟರ್ ನಂದಿನಿ ಬ್ರಾಂಡ್ ನಡಿಯಲ್ಲಿ 5 ಸಾವಿರ ಲೀಟರ್ಅಮೂಲ್ ಬ್ರಾಂಡ್ನಲ್ಲಿ ಕೊ- ಪ್ಯಾಕಿಂಗ್ ಆಧಾರದಲ್ಲಿ ಉತ್ಪಾದನೆ ಮಾರುಕಟ್ಟೆಗೆ ಸರಬರಾಜು ಮಾಡಲಾಗುವುದು ಎಂದರು.ಪ್ರಸಕ್ತ ಸಾಲಿನಲ್ಲಿ ಒಕ್ಕೂಟವು ಸುಮಾರು 5 ಕೋಟಿ ನಿವ್ವಳ ಲಾಭಗಳಿಸುವ ನಿರೀಕ್ಷೆ ಇದೆ ಕಳೆದ ಸಾಲಿಗಿಂತ ಶೇ.12 ರಿಂದ 15 ರವರೆಗೆ ಪ್ರಗತಿ ಸಾಧಿಸಿದೆ ಎಂದು ತಿಳಿಸಿದರು.ಗೋಷ್ಠಿಯಲ್ಲಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲ್ ಯ್ಯ

ಮಾಚ್೯ 16 "ವೂಂಡ್ಕಾನ್" 2018 20 ನೇ ಅಂತರರಾಷ್ಟ್ರೀಯ ಸಮಾವೇಶ

ಹಾಸನ: ನಗರದ ಶ್ರೀ ಧಮ೯ಸ್ಧಳ ಮಂಜುನಾಥೇಶ್ವರ ಆಯುವೇ೯ದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಮಾಚ್೯ 16,17,18 ರಂದು "ವೂಂಡ್ಕಾನ್" 2018 20 ನೇ ಅಂತರರಾಷ್ಟ್ರೀಯ ಸಮಾವೇಶ ನಡೆಯಲಿದೆ ಎಂದು ಆಯುವೇ೯ದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪ್ರಾಶುಪಾಲ ಡಾ: ಪ್ರಸನ್ ಎನ್.ರಾವ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸಮಾವೇಶದಲ್ಲಿ ಇಟಲಿ,ರೋಮ್, ಮಲೇಶಿಯಾ,ದುಬೈ,ಆಸ್ಟ್ರೇಲಿಯಾ, ಇಂಗ್ಲೆಂಡ್ ಇತರೆ ದೇಶಗಳ ಖ್ಯಾತ ಶಸ್ತ್ರಚಿಕಿತ್ಸಾ ತಜ್ಞರು, ಪ್ಲಾಸ್ಟಿಕ್ ಸಜ೯ನ್ಸ್,ಕೀಲುಮೂಳೆ ಶಸ್ತ್ರ ಚಿಕಿತ್ಸಾತಜ್ಞರು,ಆಯುವೇ೯ದ ತಜ್ಞರು ಭಾಗವಹಿಸುವರು ಎಂದರು.ದೇಶ ವಿದೇಶಗಳಿಂದ 1 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಆಗಮಿಸಲಿದ್ದು ಸಮಾವೇಶಕ್ಕೆ ಕೇಂದ್ರ ಆಯುಷ್ ಸಚಿವಾಲಯ,ರಾಜ್ಯದ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿಮ್ಸ್ವ ವೈದ್ಯಕೀಯ ಮಹಾವಿದ್ಯಾಲಯ,ಗುಜರಾತಿನ ಆಯುವೇ೯ದ ವಿಶ್ವವಿದ್ಯಾಲಯ ಹಾಗೂ ಪಾರೂಲ್ ವಿಶ್ವವಿದ್ಯಾಲಯಗಳು ಸೇರಿದಂತೆ 23 ವಿವಿಧ ವೈದ್ಯಕೀಯ ಸಂಸ್ಥೆಗಳು ಸಹಭಾಗಿತ್ವ ವಹಿಸಿದ್ದಾರೆ ಎಂದು ವಿವರಿಸಿದರು. 60 ಮಂದಿ ಸಂಪನ್ಮೂಲ ವ್ಯಕ್ತಿಗಳು,60 ಮಂದಿ ಅನುಭವಿ ವೈದ್ಯರು 50 ವಿಶೇಷ ಉಪನ್ಯಾಸ ನೀಡಲಿದ್ದು 150 ಆಯ್ದ ಉತ್ತಮ ಸಂಶೋಧನಾ ಪ್ರಬಂಧಗಳು ಮಂಡನೆಯಾಗಲಿದೆ ಎಂದರು.ಶ್ರೀ ಧೂತಪಾಪೇಶ್ವರ ಸಂಸ್ಥೆಯ ವತಿಯಿಂದ ರಾಷ್ಟ್ರಮಟ್ಟದ "ಜೋತಿಷ್ಮತಿ" ರಸಪ್ರಶ್ನೆ ಸ್ಪರ್ಧೆ,ಅಂತರರಾಷ್ಟ್ರೀಯ ಖ್ಯಾತ ವೈದ್ಯರಿಂದ ಗಾಯಗಳ ಚಿಕಿತ್ಸೆಯ ಕುರಿತು 3 ಕಾರ್ಯಗಾರಗಳು ಸಿದ್ಧ,ಯೋಗ,ಸಸ್ಯವಿಜ್ಞಾನ, ಯುನಾನಿ,ಸಂವಾದ ತರಬೇತಿ ಚಚೆ೯ ನಡೆಯಲಿದೆ.ರಾಜೀವಗಾಂಧಿ ಆರೋಗ್ಯ ವಿಜ್ಞಾನ ಗಳ ವಿಶ್ವವಿದ್ಯಾಲಯದ ಕುಲಪತಿ ಡಾ:ಎಂ.ಕೆ.ರಮೇಶ್ ಅಂತರರಾಷ್ಟ್ರೀಯ ಸಮಾವೇಶ ಉದ್ಘಾಟಿಸಿದರು ಎಂದು ತಿಳಿಸಿದರು.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...