ಚುನಾವಣೆ ಘೋಷಣೆ ಹಿನ್ನೆಲೆ ಪ್ರತಿ ವಾಹನ ತಪಾಸಣೆ:ಅಧಿಕಾರಿಗಳಿ ಯಿಂದ ಕಟ್ಟುನಿಟ್ಟಿನ ಕ್ರಮ

Source: so news | By MV Bhatkal | Published on 12th March 2019, 1:05 AM | Coastal News | Don't Miss |

ಭಟ್ಕಳ:ಲೋಕಸಭಾ ಚುನಾವಣೆ ಘೋಷಣೆ ಹಿನ್ನಲೆಯಲ್ಲಿ ಭಟ್ಕಳ ತಾಲೂಕಿನ ಗೊರ್ಟೆ ಬಳಿಯಲ್ಲಿ ವಾಹನ ತಪಾಸಣೆ ಚುರುಕಾಗಿದ್ದು ತಹಸೀಲ್ದಾರ ಎನ್.ಬಿ.ಪಾಟೀಲ್ ನೇತೃತ್ವದಲ್ಲಿ ದಿನದ 24 ಗಂಟೆಗಳ ಕಾಲವೂ ಹಿರಿಯ ಅಧಿಕಾರಿಗಳ ತಂಡ ತಪಾಸಣೆ ಆರಂಬಿಸಿದೆ.
ಕುಂದಾಪುರ ಕಡೆಯಿಂದ ಆಗಮಿಸಿವ ಕಾರು, ಜೀಪು ಟೆಂಪೊ ಟ್ರಾವೆಲರ್ ಸೇರಿದಂತೆ ನಾಲ್ಕು ಚಕ್ರವಾಹನಗಳ ಮೇಲೆ ಪೊಲೀಸರು ವಿಶೇಷ ನಿಗಾ ವಹಿಸಿದ್ದಾರೆ. ವಾಹನದ ಮುಂಬಾಗ, ಡೆಸ್ ಬೋರ್ಡ, ಸೀಟ ಕವರ ಪರೀಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ ಎಲ್ಲಿಂದ ಬಂದಿದ್ದೀರಿ ಎಲ್ಲಿಗೆ ಹೋಗುತ್ತಿರುವ ಮಾಹಿತಿಯನ್ನು ಪೊಲೀಸರು ಪಡೆದುಕೊಳ್ಳುತ್ತಿದ್ದಾರೆ. 
ವಾಹನ ಡಿಕ್ಕಿಯನ್ನು ತೆರದು ತಪಾಸಣೆ ನಡೆಸುತ್ತಿದ್ದಾರೆ. ದಾಖಲೆ ಇಲ್ಲದ ಹಣ, ಹೊಸ ವಸ್ತ್ರಗಳ ಪೊಟ್ಟಣ ಹೀಗೆ ಎಲ್ಲವನ್ನು ವಿಚಾರಿಸುತ್ತಿರುವದನ್ನು ಗಮನಿಸುತ್ತಿರುವ ಸಾರ್ವಜನಿಕರು ಚುನಾವಣೆ ಇಲಾಖೆಯ ಕಟ್ಟುನಿಟ್ಟಿನ ಕ್ರಮದಕುರಿತು ಎಲ್ಲೆಲ್ಲೂ ಮಾತನಾಡಿಕೊಳ್ಳುತ್ತಿರುವದು ಕಂಡು ಬಂದಿದೆ. ಕುಂಟವಾಣಿ, ಶಿರಾಲಿ, ಸರ್ಪನಕಟ್ಟೆಗಳಲ್ಲೂ ಚೆಕ್ ಪೋಸ್ಟ ಆರಂಭಿಸಿ ತನಿಖೆ ಆರಂಭವಾಗಿದೆ. ಈ ಸಂದರ್ಬದಲ್ಲಿ ಗ್ರಾಮಲೆಕ್ಕಾಧಿಕಾರಿಗಳಾದ ಸನ್ಮಾನ ಖಾನ, ವಿಶ್ವನಾಥ ಗಾಂವಕರ್, ನಗರಠಾಣೆ ಪಿಎಸ್‍ಐ ರವಿ, ಎಸ್‍ಐ ನವೀನ ಬೋರ್ಕರ  ಸೇರಿದಂತೆ ಇತರರು ಇದ್ದರು

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...