ದುಬೈ: ಕೆಸಿಎಫ್ ದುಬೈ ಇಲಲ್ ಹಬೀಬ್ ಮೀಲಾದ್ ಕಾರ್ಯಕ್ರಮದ ಪ್ರಯುಕ್ತ ಪ್ರತಿಭೋತ್ಸವ

Source: kcf dubai | By Arshad Koppa | Published on 25th November 2016, 12:16 PM | Gulf News | Special Report |

ದುಬೈ, ನ ೨೪:  ಕರ್ನಾಟಕ ಕಲ್ಚರಲ್ ಫೌಂಡೇಶನ್ - ಕೆಸಿಎಫ್ ದುಬೈ ಸಮಿತಿ ವತಿಯಿಂದ ಪ್ರೀತಿಯ ಪ್ರವಾದಿ ಶಾಂತಿಯ ಹಾದಿ ಎಂಬ ಶೀರ್ಷಿಕೆಯಲ್ಲಿ ಡಿಸೆಂಬರ್ 23 ರಂದು ದುಬೈ ನಲ್ಲಿ ನಡೆಯುವ ಇಲಲ್ ಹಬೀಬ್ ಬೃಹತ್ ಮೀಲಾದ್ ಕಾರ್ಯಕ್ರಮದ ಪ್ರಯುಕ್ತ ಅನಿವಾಸಿ ಕನ್ನಡಿಗರಿಗೆ ಹಾಗೂ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರತಿಭೋತ್ಸವ ನಡೆಯಲಿದೆ.

ಖಿರಾಅತ್, ಕನ್ನಡ ಇಂಗ್ಲಿಷ್ ಮಲಯಾಳಂ ಭಾಷೆಗಳಲ್ಲಿ ಭಾಷಣಗಳು, ಪದ್ಯ, ಮಾಪಿಳಪ್ಪಾಟ್, ಅರೇಬಿಕ್ ಹಾಡು, ಕವನ ರಚನೆ, ಕ್ವಿಝ್ ಮುಂತಾದ ವಿಷಯಗಳಲ್ಲಿ ಮಕ್ಕಳು, ವಿದ್ಯಾರ್ಥಿಗಳು ಹಾಗು ಸಾಮಾನ್ಯ ಎಂಬ ವಿವಿಧ ವಿಭಾಗಗಳಲ್ಲಿ ಭಾಗವಹಿಸಿ ವಿಜೇತರಾದ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಹಾಗೂ ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರೋತ್ಸಾಹ ಬಹುಮಾನವನ್ನು ನೀಡಲಾಗುವುದು.  ಸ್ತ್ರೀಯರಿಗಾಗಿ "ಪ್ರವಾದಿ ಕುಟುಂಬ" ಎಂಬ ವಿಷಯದಲ್ಲಿ ವಿಶೇಷ ಪ್ರಭಂದ ಸ್ಪರ್ಧೆ ನಡೆಯಲಿದೆ. 

ಯುಎಇ ಯಲ್ಲಿರುವ  ಅನಿವಾಸಿ ಕನ್ನಡಿಗರಾದ ಪ್ರತಿಭೆಗಳು ವಿಶೇಷವಾಗಿ ಫ್ಯಾಮಿಲಿಗಳು ಇದರ ಸದುಪಯೋಗ ಪಡೆಯಬೇಕಾಗಿ ಮತ್ತು ಆಸಕ್ತ ಪ್ರತಿಭೆಗಳು ಹಾಗೂ ವಿದ್ಯಾರ್ಥಿಗಳು ಡಿಸೆಂಬರ್ 9 ರೊಳಗೆ ಹೆಸರನ್ನು ನೋಂದಾಯಿಸಬೇಕಾಗಿ ಕೆಸಿಎಫ್ ದುಬೈ ಪ್ರತಿಭೋತ್ಸವ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
050-7268155, 055-5271713, 055-2337484

Read These Next

ಪ್ರಜಾತಂತ್ರ ಮತ್ತು ವಿನಯ

ಆದರೆ ತಮ್ಮ ವಿರೋಧಿಗಳಲ್ಲಿ ಮಾತ್ರವಲ್ಲದೆ ಒಂದು ಸಭ್ಯ ಸಮಾಜವು ಪಸರಿಸಬೇಕೆಂಬ ಆಶಯವುಳ್ಳವರಲ್ಲೂ ಸಹ ಒಂದು ಬಗೆಯ ಹತಾಷ ಭಾವಗಳನ್ನು ...

ಗಡಿಯಾರ ವ್ಯಾಪಾರಿಯನ್ನು”ಭಯೋತ್ಪಾದಕ’ ಎಂದು ಬಿಂಬಿಸಿದ ಮಾಧ್ಯಮಗಳಿಗೆ ಛೀ,ಥೂ ಎನ್ನುತ್ತಿರುವ ಸಾರ್ವಜನಿಕರು

ಬೆಂಗಳೂರು: ಅಮಾಯಕ ಗಡಿಯಾರ ವ್ಯಾಪಾರಿಯೊಬ್ಬರನ್ನು ‘ಉಗ್ರ’ನೆಂದು ಬಿಂಬಿಸಿ ಕೆಲ ಸುದ್ದಿ ಚಾನೆಲ್ ಗಳು ಸುಳ್ಳು ವದಂತಿಗಳನ್ನು ...