ದುಬೈ : ಡಿ.ಕೆ.ಎಸ್.ಸಿ 20 ನೇ ವಾರ್ಷಿಕ ಸಮ್ಮೇಳನ ಬ್ರಹತ್ ಪ್ರಚಾರ ಸಭೆ

Source: dksc dubai | By Arshad Koppa | Published on 17th November 2016, 8:47 AM | Gulf News | Special Report |

ದುಬೈ . ಡಿ.ಕೆ.ಎಸ್.ಸಿ. ದೇರಾ,ಬಾರ್ ದುಬೈ , ಅಲ್ ಕ್ವಿಸಸ್ , ಯೂತ್ ವಿಂಗ್ ಜಂಟಿಯಾಗಿ ನಡೆಸಿದ ೨೦ ನೇ ವಾರ್ಷಿಕ ಸಮ್ಮೇಳನ ಇದರ ಪ್ರಚಾರ ಸಭೆಯು ದುಬೈಯ  PEARL CREEK HOTEL ನ ಬಾಲ್ ರೂಮ್ ನಲ್ಲಿ ವಿಜೃಂಭಣೆಯಿಂದ ನಡೆಯಿತು, ಸಭೆಯುನ್ನು  ಡಿ.ಕೆ.ಎಸ್.ಸಿ ಯು.ಎ.ಇ. ರಾಷ್ಟೀಯ ಸಮಿತಿ ಗೌರವಾಧ್ಯಕ್ಷರಾದ ಸಯ್ಯದ್ ತ್ವಾಹ ಭಾಪಕಿ ತಂಘಳ್ ರವರ ದುವಾದೊಂದಿಗೆ ಡಿ.ಕೆ.ಎಸ್.ಸಿ ಯು.ಎ.ಇ. ರಾಷ್ಟೀಯ ಸಮಿತಿ ಸಲಹೆಗಾರರಾದ ಸಯ್ಯದ್ ಅಸ್ಗರಲಿ ತಂಘಳ್ ರವರು ಉದ್ಘಾಟಿಸಿದರು. ಡಿ.ಕೆ.ಎಸ್.ಸಿ ಯು.ಎ.ಇ. ರಾಷ್ಟೀಯ ಸಮಿತಿ ಉಪಾಧ್ಯಕ್ಷರಾದ ಹಾಜಿ.ಎಂ.ಇ.ಮೂಳೂರು ರವರು ತನ್ನ ಪ್ರಸ್ತಾವಿಕ ಭಾಷಣದಲ್ಲಿ  ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ಡಿ.ಕೆ.ಎಸ್.ಸಿ) ಎಂಬುದು ಗಲ್ಫ್ ರಾಷ್ಟ್ರದ ಸುಮಾರು 14000 ಕ್ಕಿಂತಲೂ ಹೆಚ್ಚು ಸದಸ್ಯರನ್ನೊಳಗೊಂಡ  ಕನ್ನಡಿಗರ ಬ್ರಹತ್   ಸಂಘಟನೆ ಆಗಿರುತ್ತದೆ. ಇದು ಗಲ್ಫ್ ರಾಷ್ಟ್ರದ ಮೂಲೆ ಮುಲೆ ಗಳಲ್ಲಿ ಇದರ ಯುನಿಟ್ ಗಳು ಇದೆ. ಈ ಸಂಘಟನೆ ಯ ಅದೀನದಲ್ಲಿ ಮೂಳೂರು ನ ಅಲ್ ಇಹ್ಸಾನ್ ಎಜುಕೇಷನ್ ಸೆಂಟರ್ ಕಾರ್ಯಚರಿಸುತ್ತಿದ್ದು ಇಲ್ಲಿ 1450 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಲೌಕಿಕ ಹಾಗೂ ಧಾರ್ಮಿಕ ವಿದ್ಯಾಭ್ಯಾಸವನ್ನು ನೀಡುವುದರೊಂದಿಗೆ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ.  ಗಲ್ಫ್ ರಾಷ್ಟ್ರದಲ್ಲಿ ಸಂಘಟನೆಯನ್ನು ಕಟ್ಟಿ ಬ್ರಹತ್ತಾದ ವಿದ್ಯಾ  ಸ್ಥಾಪನೆಯನ್ನು ನಡೆಸುವ ಮೂಲಕ  ವಿದ್ಯಾವಂತ ಸಮಾಜದ ನಿರ್ಮಾಣ ದ ಉದ್ದೇಶದ ಗುರಿಯೊಂದಿಗೆ ನಡೆಸುವ  ಏಕೈಕ ಸಂಘಟನೆಯಾಗಿದೆ.   ಡಿ.ಕೆ.ಎಸ್.ಸಿ. 1985  ರಲ್ಲಿ  ಈ ಸಂಘಟನೆ   ಉಸ್ತಾದ್ ಹಸನುಲ್ ಫೈಝಿ ಅಜ್ಜಾವರ  ರವರ ನೇತೃತ್ವ ದಲ್ಲಿ ಪ್ರಾರಂಭ ಗೊಂಡು ಗಲ್ಫ್ ರಾಷ್ಟ್ರದಲ್ಲಿ ಇದನ್ನು ಪ್ರಚರಿಸಿ ಈಗ ಇದರ ನೇತೃತ್ವವನ್ನು ಕೇರಳ ಕರ್ನಾಟಕ ದಲ್ಲಿ ಆಧ್ಯಾತ್ಮಿಕ ನೇತಾರರಾದ ಕುಂಬೋಳ್ ಸಾದತ್ ಗಳ ನೇತೃತ್ವ  ಪ್ರತ್ಯೇಕವಾಗಿ  ಸಯ್ಯದ್ ಕೆ.ಎಸ್.ಆಟಕ್ಕೋಯ ತಂಘಳ್ ರವರ ಅದ್ಯಕ್ಷತೆಯಲ್ಲಿ ಸಂಘಟನೆ ಹಾಗೂ ಸ್ಥಾಪನೆಯು ಅವರ ಮಾರ್ಗದರ್ಶನದೊಂದಿಗೆ ನಡೆಯುತ್ತಾ ಬರುತ್ತಿದೆ. ಹಾಗೂ ಯಾವುದೇ ಸ್ವಾರ್ಥ ಇಲ್ಲದೆ  20 ವರ್ಷದ  ಪ್ರವರ್ತಕರ ಪ್ರವರ್ತನೆಯ ಫಲವೇ  ಅಲ್ ಇಹ್ಸಾನ್ ಎಜುಕೇಷನ್ ಸೆಂಟರ್ ಆಗಿರವುದಾಗಿ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ  ಬಿ.ಸಿ.ಎಫ್. ಇದರ ಪ್ರಧಾನ ಕಾರ್ಯದರ್ಶಿ ಡಾI  ಮುಹಮ್ಮದ್ ಕಾಪು ರವರು ಮರ್ಕಜ್ ಗೆ ಭೇಟಿ ನೀಡಿ ಅಲ್ಲಿಯ ಆಡಳಿತ ವರ್ಗಕ್ಕೆ ನೀಡಿದ ತರಬೇತಿ ಬಗ್ಗೆ ವಿವರಿಸಿ ಅಲ್ಲಿಯ ಅಧ್ಯಾಪಕ ಹಾಗೂ ವಿದ್ಯಾರ್ಥಿ ಗಳ ಬಗ್ಗೆ ಮೆಚ್ಚುಗೆ  ವ್ಯಕ್ತಪಡಿಸಿದರು ಹಾಗೂ ಇಂದಿನ ವಿದ್ಯಭ್ಯಾಸಗಳಲ್ಲಿ  ವಿದ್ಯಾರ್ಥಿಗಳ ಫಲಿತಾಂಶವನ್ನು  ಕೇವಲ ಗ್ರೇಡ್ ಗೆ ಮಿತಿಗೊಳಿಸದೆ ಸ್ವ ಅಭಿವುರ್ದಿ ಗೆ ಪ್ರಯತ್ನಿಸುವಂತೆ ಅಧ್ಯಾಪಕ ತಂಡವನ್ನು ತರಬೇತಿಗೊಳಿಸುವ ಅಗತ್ಯವಿದೆ ಎಂದು ಕಿವಿಮಾತು ಹೇಳಿದರು.

ಮುಖ್ಯ ಪ್ರಭಾಷಣಕಾರರಾಗಿ ಆಗಮಿಸಿದ ಡಿ.ಕೆ.ಎಸ್.ಸಿ ಯು.ಎ.ಇ. ರಾಷ್ಟೀಯ ಸಮಿತಿ ಸಲಹೆಗಾರರಾದ ಇಬ್ರಾಹಿಂ ಸಖಾಪಿ ಕೆದಂಬಾಡಿ ಯವರು ತಮ್ಮ ಭಾಷಣದಲ್ಲಿ 20 ವರ್ಷದ  ಹಿಂದೆ ಅನಿವಾಸಿಗಳ ಅಭಿವ್ರ್ದ್ಧಿಗಾಗಿ ಕೆಲ ಪರಿಶುದ್ಧ ಮನಸ್ಸಿನ ಯುವಕರು ಸಾಮಾಜಿಕ ಸೇವೆಯ ಉದ್ದೇಶದಿಂದ ಕಟ್ಟಿದ ಸಂಘಟನೆ ಅದು ಅಲ್ಲಾಹು ವಿನ ಅನುಗ್ರಹದಂತೆ ಈ ಸಂಘಟನೆಯು ಗಲ್ಫ್ ನಾಡಿನ ಮೂಲೆ ಮೂಲೆ ಗೆ ತಲುಪಿ ಅದರ ಅದೀನದಲ್ಲಿ ಬ್ರಹತ್ತಾದ ಸುನ್ನತ್ ಜಮಾಹತ್ ನ ಆಶಯದಿಂದ ನಡೆಯುವ ವಿದ್ಯಾಕೇಂದ್ರದ  ಬಗ್ಗೆ ವಿವರಿಸಿ  ಡಿ.ಕೆ.ಎಸ್.ಸಿ ಸಾಧಾರಣ ಸಂಘಟನೆ ಅಲ್ಲ. ಯಾವುದೇ ಸಂಘಟನೆ ಸಂಸ್ಥೆ ಗಳಲ್ಲಿ ಪ್ರವರ್ಥಕರಾಗಿದ್ದರೂ ಪ್ರತ್ಯಕವಾಗಿ ಡಿ.ಕೆ.ಎಸ್.ಸಿ ಗೆ  ಎಲ್ಲರು ಸಹಕರಿಸುವಂತೆ ಕರೆ ನೀಡುವುದರೊಂದಿಗೆ ಈ ಸಂದರ್ಭದಲ್ಲಿ 20 ನೇ ವಾರ್ಷಿಕ ಸಮ್ಮೇಳನ ದ ಅಂಗವಾಗಿ ಬಡ ಕುಟುಂಬದ 50  ಮಹಿಳೆಯರಿಗೆ ಸ್ವಉದ್ಯೋಗಕ್ಕಾಗಿ ಯು.ಎ.ಇ ಯಿಂದ ನೀಡಲ್ಪಡುವ ಹೊಲಿಗೆ ಯಂತ್ರ ಇದನ್ನು ನೀಡಿದವರಿಗೆ ಹಾಗೂ ಡಿ.ಕೆ.ಎಸ್.ಸಿ ಬೆಳೆವಣಿಗೆಗೆ ವಿವಿಧ ರೀತಿಯಲ್ಲಿ ಸಹಕರಿಸಿದ ಎಲ್ಲರಿಗೂ ದುವಾ ಮಾಡಲಾಯಿತು.  

ಕಾರ್ಯಕ್ರಮದ ಅಧ್ಯಕ್ಷತಾ ಭಾಷಣ ಮಾಡಿದ  ಪ್ರಚಾರ ಸಮಿತಿ ಚೆಯರ್ಮೆನ್ ಹಾಜಿ.ಮೊಯಿದ್ದೀನ್ ಕುಟ್ಟಿ ಕಕ್ಕಿಂಜೆ ಯವರು ಸಮ್ಮೇಳನದ ವಿವರಣೆಯನ್ನು ಸಭೆಯಲ್ಲಿ ವಿವರಿಸುವುದರೊಂದಿಗೆ ಮೂಳೂರು ಮರ್ಕಜ್ ನಲ್ಲಿ ಡಿಸಂಬರ್ 2,3,4 ರಂದು ನಡೆಯುವ 20 ನೇ ವಾರ್ಷಿಕ ಸಮ್ಮೇಳನಕ್ಕೆ ಎಲ್ಲರನ್ನು ಆಹ್ವಾನಿಸುತ್ತಾ ನಮ್ಮೆಳನವನ್ನು   ಯುಶಸ್ವಿಗೊಳಿಸಲು ಕರೆ ನೀಡಿದರು.

ಕೆ.ಸಿ.ಎಫ್. ದುಬೈ ಅಧ್ಯಕ್ಷರಾದ ಮಹಬೂಬ್ ಸಖಾಫಿ ಕಿನ್ಯ , ಕೆ.ಐ.ಸಿ ಯು.ಎ.ಇ. ಕಾರ್ಯಾಧ್ಯಕ್ಷರಾದ ಶರೀಫ್ ಕಾವು , ಸೆಂಟ್ರಲ್ ಕಮಿಟಿ ಸದಸ್ಯರಾದ ಜಮಾಲುದ್ದೀನ್ ಸ್ವಾಲಿ ಕಣ್ಣಂಗಾರ್ , ಡಿ.ಕೆ.ಎಸ್.ಸಿ ಮೀಲಾದ್ ಕಮಿಟಿ ಕೋಶಾಧಿಕಾರಿ ಜೈನುದ್ದೀನ್ ಬೆಳ್ಳಾರೆ ,  ಡಿ.ಕೆ.ಎಸ್.ಸಿ ಯು.ಎ.ಇ ರಾಷ್ಟೀಯ ಸಮಿತಿ ಸ್ಥಾಪಕ ಪ್ರಧಾನ ಕಾರ್ಯದರ್ಶಿ ಇ.ಕೆ.ಇಬ್ರಾಹಿಂ ಕಿನ್ಯ 20 ನೇ ವಾರ್ಷಿಕ ಸಮ್ಮೇಲನೆಕ್ಕೆ ಶುಭ ಹಾರೈಸುವುದರೊಂದೆಗೆ ಸಂಘಟನೆ ಯ ಬೆಳವಣಿಗೆಯ ಬಗ್ಗೆ ಪ್ರಶಂಸಿದರು.

ಕರಾವಳಿ ಗ್ರಾಂಡ್ ಪ್ಯಾಮಲಿ ಮುಲಾಖತ್ 2016 - 17  ಪ್ರವೇಶ ಪತ್ರ ಬಿಡುಗಡೆ

ಡಿ.ಕೆ.ಎಸ್.ಸಿ ಯು.ಎ.ಇ ರಾಷ್ಟೀಯ ಸಮಿತಿ ಅದೀನದಲ್ಲಿ ಸಂಘಟಿಸುತ್ತಿರುವ ಕರಾವಳಿ ಗ್ರಾಂಡ್ ಪ್ಯಾಮಲಿ ಮುಲಾಖಾತ್ 2016 - 17 ಜನವರಿ 01 , 2017 ರಂದು ನಡೆಯುವ ಬಗ್ಗೆ ದಿನಾಂಕ ಘೋಷಣೆ ಹಾಗೂ ವಿವರಣೆಯನ್ನು ರಾಷ್ಟ್ರಿಯ ಸಮಿತಿ ಪ್ರದಾನ ಕಾರ್ಯದರ್ಶಿ ಹಾಗೂ  ಮುಲಾಖಾತ್ ಇದರ ಸಂಚಾಲಕರಾದ ಇಕ್ಬಾಲ್ ಹೆಜಮಾಡಿ ನೀಡಿದರು. ಮುಲಾಖಾತ್ ಇದರ ಚೆಯರ್ಮೆನ್ ಅಬ್ದುಲ್ ಲತೀಫ್ ಮುಲ್ಕಿ ಯವರು ಎಲ್ಲರು ಸಹಕರಿಸುವಂತೆ ವಿನಂತಿಸುತ್ತಾ ಸಯ್ಯದ್ ತ್ವಾಹ ಭಾಪಕಿ ತಂಘಳ್ ರವರಿಂದ  ಪ್ರವೇಶ ಪತ್ರವನ್ನು ಬಿಡುಗಡೆ ಗೊಳಿಸಲಾಯಿತು.

ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉದ್ಯಮಿ ಬಷೀರ್ ಬೊಳ್ವಾರ್ , ಉಸ್ಮಾನ್ ಮೂಳೂರು , ಅಜೀಮ್ ಉಚ್ಚಿಲ , ಸುಲೈಮಾನ್ ಮೂಳೂರು , ಅಶ್ರಫ್ ಬಾಳೆಹೊನ್ನೂರು ,ಅಬ್ದುಲ್ ಖಾದರ್ ಕಾರ್ಕಳ , ಹಾಜಬ್ಬ ಮೂಳೂರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಡಿ.ಕೆ.ಎಸ್.ಸಿ ಅಜ್ಮಾನ್ ಯುನಿಟ್ ಅಧ್ಯಕ್ಷರಾದ ಹಸನಬ್ಬ ಕೊಳ್ನಾಡು, ಶಾರ್ಜಾ ಯುನಿಟ್ ಅಧ್ಯಕ್ಷರಾದ ಬಷೀರ್ ಕಾಪಿಕ್ಕಾಡ್ , ಹೋರ್ ಅಲ್ ಆನ್ಜ್ ಯುನಿಟ್ ಅಧ್ಯಕ್ಷರಾದ ರಪೀಕ್ ಆತೂರ್ , ಮದಾಮ್ ಯುನಿಟ್ ನ ಅಬ್ದುಲ್ ಖಾದರ್ ಉಚ್ಚಿಲ , ಅಬುದಾಬಿಯ ಹನೀಫ್ ಆರ್ಯಮೂಲೆ , ಅಬ್ದುಲ್ಲಾ ಹಾಜಿ ಬೀಜಾಡಿ , ಹಾಜಿ.ಅಬ್ದುಲ್ ರಹಿಮಾನ್ ಸಂಟ್ಯಾರ್ , ಅಬ್ಬಾಸ್ ಪಾಣಾಜೆ , ಬದ್ರುದ್ದೀನ್ ಹೆಂತಾರ್, ಅಬ್ದುಲ್ ಅಝೀಝ್ ಲತೀಫಿ, ಖಾಸಿಂ ಮದನಿ ತೆಕ್ಕಾರು, ಹಮೀದ್ ಸಖಾಫಿ ಮುಂತಾದ ಪ್ರಮುಖರು ಉಪಸ್ಥಿತರಿದ್ದರು

ಬಾರ್ ದುಬೈ ಯುನಿಟ್ ಅಧ್ಯಕ್ಷರಾದ ಇಸ್ಮಾಯಿಲ್ ಬಾಬಾ ಮೂಳೂರು , ಯೂತ್ ವಿಂಗ್ ಪ್ರದಾನ ಕಾರ್ಯದರ್ಶಿ ಜುಬೇರ್ ಆತೂರು , ಅಲ್ ಕ್ವಿಸಸ್ ಯುನಿಟ್ ಪ್ರದಾನ ಕಾರ್ಯದರ್ಶಿ ಶೇಖಬ್ಬ ಕಿನ್ಯ , ನವಾಜ್ ಕೋಟೆಕ್ಕಾರ್ , ಅಬ್ದುಲ್ ರಹಿಮಾನ್ ಸಜಿಪ, ಹಂಝ ಮೂಳೂರು ರವರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಡಿ.ಕೆ.ಎಸ್.ಸಿ 20 ವರ್ಷದ ಬೆಳೆವಣಿಗೆಯ ಚಿತ್ರಣವನ್ನು ಯೂತ್ ವಿಂಗ್ ಇದರ ರಿಜ್ವಾನ್ ಹಾಗೂ ರಿಯಾಜ್ ಕಿನ್ಯ ರವರು ಪ್ರೊಜಕ್ಟರ್ ಮೂಲಕ ಸಭೆಗೆ ತೋರಿಸಿದರು.

ಸಭೆಯು ಡಿ.ಕೆ.ಎಸ್.ಸಿ ದೇರಾ ಯುನಿಟ್ ಅಧ್ಯಕ್ಷರಾದ ಇಬ್ರಾಹಿಂ ಹಾಜಿ ಕಿನ್ಯ ರವರ ಕಿರಾಹತ್ ನೊಂದಿಗೆ ಪ್ರಾರಂಭ ಗೊಂಡು  ಡಿ.ಕೆ.ಎಸ್.ಸಿ ದೇರಾ ಯುನಿಟ್ ಪ್ರದಾನ ಕಾರ್ಯದರ್ಶಿ ಎಸ್.ಯೂಸುಫ್ ಅರ್ಲಪದವು ಸ್ವಾಗತಿಸಿ ಬಾರ್ ದುಬೈ ಯುನಿಟ್ ಪ್ರದಾನ ಕಾರ್ಯದರ್ಶಿ ಇಬ್ರಾಹಿಂ ಕಳತ್ತೂರ್ ಧನ್ಯವಾದ ಸಮರ್ಪಿಸಿ ಯೂತ್ ವಿಂಗ್ ನ ಕಮಲ್ ಅಜ್ಜಾವರ ರವರು ಕಾರ್ಯಕ್ರಮ ನಿರ್ವಹಿಸಿದರು.


ವರದಿ : ಯಸ್.ಯೂಸುಫ್ ಆರ್ಲಪದವು             
 

Read These Next

ಪ್ರಜಾತಂತ್ರ ಮತ್ತು ವಿನಯ

ಆದರೆ ತಮ್ಮ ವಿರೋಧಿಗಳಲ್ಲಿ ಮಾತ್ರವಲ್ಲದೆ ಒಂದು ಸಭ್ಯ ಸಮಾಜವು ಪಸರಿಸಬೇಕೆಂಬ ಆಶಯವುಳ್ಳವರಲ್ಲೂ ಸಹ ಒಂದು ಬಗೆಯ ಹತಾಷ ಭಾವಗಳನ್ನು ...

ಗಡಿಯಾರ ವ್ಯಾಪಾರಿಯನ್ನು”ಭಯೋತ್ಪಾದಕ’ ಎಂದು ಬಿಂಬಿಸಿದ ಮಾಧ್ಯಮಗಳಿಗೆ ಛೀ,ಥೂ ಎನ್ನುತ್ತಿರುವ ಸಾರ್ವಜನಿಕರು

ಬೆಂಗಳೂರು: ಅಮಾಯಕ ಗಡಿಯಾರ ವ್ಯಾಪಾರಿಯೊಬ್ಬರನ್ನು ‘ಉಗ್ರ’ನೆಂದು ಬಿಂಬಿಸಿ ಕೆಲ ಸುದ್ದಿ ಚಾನೆಲ್ ಗಳು ಸುಳ್ಳು ವದಂತಿಗಳನ್ನು ...