ನಿಯಂತ್ರಣ ಕಳೆದುಕೊಂಡ ಚಾಲಕ; ಬ್ರೀಜ್ ಕೆಳಗೆ ಇಳಿದ ಟ್ಯಾಂಕರ್ 

Source: sonews | By sub editor | Published on 24th August 2018, 11:11 PM | Coastal News | Don't Miss |

ಮುಂಡಗೋಡ : ಚಾಲಕನ ನಿಯಂತ್ರಣ ತಪ್ಪಿ ಪೇಟ್ರೋಲ್ ಟ್ಯಾಂಕರ ಬ್ರೀಜ್  ಕೆಳಗಡೆ ಇಳಿದ ಘಟನೆ ತಾಲೂಕಿನ ಹುಬ್ಬಳ್ಳಿ-ಶಿರಸಿ ರಸ್ತೆಯ ಕಾತೂರ ಗ್ರಾಮದ ಸಿದ್ದನಕೊಪ್ಪದ ಕ್ರಾಸ್ ಹತ್ತಿರದ ಬ್ರೀಜ್ ಹತ್ತಿರ ಗುರುವಾರ ರಾತ್ರಿ ಸಂಭವಿಸಿದೆ.

ಅಪಘಾತವಾದ ದೃಶ್ಯ ನೋಡಿದರೆ ಚಾಲಕನ ಸ್ಥಿತಿ ಗಂಭೀರವಾಗಬೇಕಾಗಿತ್ತು ಆದರೆ ಅದೃಷ್ಟವಶಾತ್ ಚಾಲಕ ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಚಾಲಕನನ್ನು ಗೋಪಾಲ ಎಂದು ಹೇಳಲಾಗಿದೆ.

ಮಳಗಿಯ ಪೇಟ್ರೋಲ್ ಬಂಕ್ ಒಂದಕ್ಕೆ ತೈಲ್‍ವನ್ನು ಪೂರೈಕೆ ಮಾಡಿ ಮಳಗಿಯಿಂದ ಮುಂಡಗೋಡ ದಿಕ್ಕಿಗೆ ಬರುತ್ತಿದ್ದ ಖಾಲಿ ಟ್ಯಾಂಕರ ಕಾತೂರ ಗ್ರಾಮದ ಬ್ರೀಜ್ ಹತ್ತಿರ  ಟ್ಯಾಂಕರ್ ಚಾಲಕನ ನಿಯಂತ್ರ ತಪ್ಪಿದೆ ಎಂದು ಹೇಳಲಾಗುತ್ತಿದೆ. ನಿಯಂತ್ರಣ ಕಳೆದುಕೊಂಡ ವಾಹನವು ಬ್ರೀಜ್ ನ ಕೆಳಗಡೆ ಇಳಿದಿದೆ ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಚಾಲಕನ ನಿಯಂತ್ರಣ ತಪ್ಪಲು  ರಸ್ತೆಯಲ್ಲಿ ಹೊಂಡಗಳು ನಿರ್ಮಾಣವಾಗಿರುವದರಿಂದ ಎಂದು ಹೇಳಲಾಗಿದೆ. ರಸ್ತೆಯಲ್ಲಿ ಹೊಂಡಬಿದ್ದ ಕುರಿತು ಹಲವಾರು ಬಾರಿ ಪತ್ರಿಕೆಗಳಲ್ಲಿ ಪ್ರಕಟಣೆಯಾದರೂ ಇಲಾಖೆಯು ತನಗೆ ಸಂಬಂದವಿಲ್ಲದಂತೆ ವರ್ತಿಸುತ್ತಿದೆ

Read These Next

ಸುಸೂತ್ರವಾಗಿ ಆರಂಭಗೊಂಡ ಐಸಿಎಸ್‍ಇ ಪರೀಕ್ಷೆ; ಮೊದಲ ದಿನ ಎಲ್ಲ ವಿದ್ಯಾರ್ಥಿಗಳು ಹಾಜರು

ಭಟ್ಕಳ: ಇದೇ ಪ್ರಥಮ ಬಾರಿಗೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹೆಬಳೆ ಪಂಚಾಯತ್ ವ್ಯಾಪ್ತಿಯಲ್ಲಿರುವ ನ್ಯೂ ಶಮ್ಸ್ ಸ್ಕೂಲ್ ...

ಹಿರಿಯ ಸ್ವಾತಂತ್ರ‍್ಯ ಹೋರಾಟಗಾರ ಖ್ಯಾತ ಸಾಹಿತಿ ಕೋ.ಚೆನ್ನಬಸ್ಸಪ್ಪನವರು ಇನ್ನಿಲ್ಲ

ಬೆಂಗಳೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ನಿವೃತ್ತ ನ್ಯಾಯಾಧಿಶ, ಕನ್ನಡದ ಖ್ಯಾತ ಸಾಹಿತಿ, ಚಿಂತಕ, ಕನ್ನಡದ ಸಾಕ್ಷಿ ಪ್ರಜ್ಞೆ ಎಂದೇ ...

ಸುಸೂತ್ರವಾಗಿ ಆರಂಭಗೊಂಡ ಐಸಿಎಸ್‍ಇ ಪರೀಕ್ಷೆ; ಮೊದಲ ದಿನ ಎಲ್ಲ ವಿದ್ಯಾರ್ಥಿಗಳು ಹಾಜರು

ಭಟ್ಕಳ: ಇದೇ ಪ್ರಥಮ ಬಾರಿಗೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹೆಬಳೆ ಪಂಚಾಯತ್ ವ್ಯಾಪ್ತಿಯಲ್ಲಿರುವ ನ್ಯೂ ಶಮ್ಸ್ ಸ್ಕೂಲ್ ...