ಸುಗಮ ಸಂಚಾರ ಸುರಕ್ಷತಾ ಕ್ರಮಕ್ಕೆ ಮುಂದಾದ ಜಿಲ್ಲಾಡಳಿತ: ನಿಯಮ ಉಲ್ಲಂಘಿಸಿದರೆ ದಂಡ: ಡಿಸಿ

Source: sonews | By Staff Correspondent | Published on 7th September 2018, 11:10 PM | Coastal News | Don't Miss |

ಕಾರವಾರದಲ್ಲಿನ್ನು ಏಕಮುಖ ಸಂಚಾರ, ನಿಗದಿತ ಕಡೆ ವಾಹನ ನಿಲುಗಡೆ

ಕಾರವಾರ: ಜಿಲ್ಲಾ ಕೇಂದ್ರ ಕಾರವಾರ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವುದರಿಂದ ಸುಗಮ ಸಂಚಾರ ಹಾಗೂ ಸುರಕ್ಷತೆ ದೃಷ್ಟಿಯಿಂದ ನಗರದ ವಿವಿಧ ರಸ್ತೆಗಳಲ್ಲಿ ಏಕಮುಖ ಸಂಚಾರ ಹಾಗೂ ರಸ್ತೆ ಬದಿಯಲ್ಲಿ ಪರ್ಯಾದಿನಗಳಲ್ಲಿ ವಾಹನಗಳ ನಿಲುಗಡೆ ವ್ಯವಸ್ಥೆಗೆ ಜಿಲ್ಲಾಡಳಿತ ಮುಂದಾಗಿದೆ.
    
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದು ಕಾರವಾರ ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ನಿಯಂತ್ರಣ ಹಾಗೂ ವ್ಯಾಪಕವಾಗಿ ರಸ್ತೆ ನಿಯಮಗಳ ಉಲ್ಲಂಘನೆಯಾಗುತ್ತಿರುವ ಹಿನ್ನೆಲೆಯಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಹಾಗೂ ನಿಗದಿಪಡಿಸಿದ ರಸ್ತೆಬದಿಯಲ್ಲಿ ಮಾತ್ರ ವಾಹನ ನಿಲುಗಡೆ ನಿಯಮ ಜರೂರು ಆಗಬೇಕಿರುವ ವಿಷಯಗಳ ಕುರಿತು ಚರ್ಚಿಸಲಾಯಿತು.
    
ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಹಾಗೂ ಶಾಲಾ ಮಕ್ಕಳು ಹೋಗುವಾಗ ರಸ್ತೆಗಳಲ್ಲಿ ವಾಹನಗಳ ವೇಗವಾಗಿ ಚಲಾಯಿಸುವುದು ಸೇರಿದಂತೆ ನಗರ ಭಾಗದಲ್ಲಿ ಅಪಘಾತಗಳು ಸಂಭವಿಸಿರುವುದರಿಂದ ಸಂಚಾರ ನಿಯಂತ್ರಣ ಕ್ರಮಗಳು ಅಗತ್ಯವಿದೆ. ನಿಯಮಗಳು ಜಾರಿಯಾದ ಮೇಲೂ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ನಿಯಮಾನುಸಾರ ದಂಡ ಹಾಕಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸಭೆಯಲ್ಲಿ ತಿಳಿಸಿದರು.
    
ಅದರಂತೆ ಗೀತಾಂಜಲಿ ಸರ್ಕಲ್‍ನಿಂದ ಸುಭಾಷ್‍ಚಂದ್ರ ಸರ್ಕಲ್‍ವರೆಗೆ (ಕೈಗಾ ರಸ್ತೆಯಿಂದ ಬರುವ ವಾಹನಗಳು) ಹಾಗೂ ಸುಭಾಷ್‍ಚಂದ್ರ ಸರ್ಕಲ್‍ನಿಂದ ಶಿವಾಜಿ ಚೌಕ-ಹೂವಿನಚೌಕ-ಗೀತಾಂಜಲಿ ಸರ್ಕಲ್ (ಕೈಗಾ ರಸ್ತೆಗೆ ಹೋಗುವ ವಾಹನಗಳು) ಏಕಮುಖ ಸಂಚಾರಕ್ಕಾಗಿ ನಿಗದಿಪಡಿಸಿದ ಮಾರ್ಗವಾಗಿದೆ.
    
ದ್ವಿಚಕ್ರ ವಾಹನಗಳ ನಿಲುಗಡೆ ಸ್ಥಳಗಳು:
ಗೀತಾಂಜಲಿ ಸರ್ಕಲ್‍ನಿಂದ ಸವಿತಾ ಸರ್ಕಲ್‍ವರೆಗೆ ವಾಹನ ನಿಲುಗಡೆ ನಿಷೇಧ, ಸವಿತಾ ಸರ್ಕಲ್‍ನಿಂದ ಸುಭಾಷ್ ಸರ್ಕಲ್ ಗಣಪತಿ ದೇವಸ್ಥಾನವರೆಗೆ ಒಂದು ಬದಿಗೆ(ಪರ್ಯಾಯ ದಿನಗಳು), ಸವಿತಾ ಹೋಟೆಲ್ ಹಿಂಭಾಗದ ರಸ್ತೆ ಒಂದು ಬದಿಗೆ (ಪರ್ಯಾಯ ದಿನಗಳು), ರಾಧಾಕೃಷ್ಣ ದೇವಸ್ಥಾನ ರಸ್ತೆ ಒಂದು ಬದಿಗೆ (ಪರ್ಯಾಯ ದಿನಗಳು), ಕೈಕಿಣಿ ರಸ್ತೆ ಒಂದು ಬದಿಗೆ (ಪರ್ಯಾಯ ದಿನಗಳು), ಕುಟಿನೋ ರಸ್ತೆ ಒಂದು ಬದಿಗೆ (ಪರ್ಯಾಯ ದಿನಗಳು), ಮಾರುತಿಗಲ್ಲಿ ಒಂದು ಬದಿಗೆ(ಪರ್ಯಾಯ ದಿನಗಳು), ಬ್ರಾಹ್ಮಣಗಲ್ಲಿ ರಸ್ತೆ (ಪರ್ಯಾಯ ದಿನಗಳು), ಸುಭಾಷ್‍ಸರ್ಕಲ್‍ದಿಂದ ಕೋಡಿಬೀರ ಕಮಾನುವರೆಗೆ ಎಡಬದಿಗೆ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಿಂದ ಕೋಡಿಬೀರ ಕಮಾನವರೆಗೆ ಬಲಬದಿಗೆ, ಸುಭಾಷ್ ಸರ್ಕಲ್‍ನಿಂದ ಶಿವಾಜಿ ಚೌಕ (ಗ್ರೀಸ್ ಸ್ಟ್ರೀಟ್) ಒಂದು ಬದಿಗೆ (ಪರ್ಯಾಯ ದಿನಗಳು), ಶಿವಾಜಿ ಚೌಕದಿಂದ ಹೂವಿನ ಚೌಕ (ಕೋರ್ಟ್ ರಸ್ತೆ) ಒಂದು ಬದಿಗೆ (ಪರ್ಯಾಯ ದಿನಗಳು), ಶಿವಾಜಿ ಚೌಕದಿಂದ ಅಂಬೇಡ್ಕರ್ ಸರ್ಕಲ್‍ವರೆಗೆ ಎರಡೂ ಬದಿಗೆ, ತೆಲಿರಮ್‍ಜಿ ರಸ್ತೆ ಒಂದು ಬದಿಗೆ, ಪಿಕಳೆ ರಸ್ತೆ ಅಪೊಲೊ ಮೆಡಿಕಲ್ ಹತ್ತಿರದಿಂದ ಕೋಡಿಬಾಗ ರಸ್ತೆವರೆಗೆ ಎರಡೂ ಬದಿಗೆ, ಎಂ.ಜಿ.ರಸ್ತೆ ಮಿತ್ರ ಸಮಾಜ ಮುಂದಿನಿಂದ ಹಳೆ ಕೋರ್ಟ್ ಕಾಂಪೌಂಡ್‍ವರೆಗೆ ಎಡಬದಿಗೆ, ಕಾರವಾರ ಕೋಡಿಬಾಗ ರಸ್ತೆ ಹೂವಿನಚೌಕದಿಂದ ಪೀಕಳೆ ರಸ್ತೆ ಕ್ರಾಸ್‍ವರೆಗೆ ಎರಡೂ ಬದಿಗೆ, ಕಾರವಾರ ಕೋಡಿಬಾಗ ರಸ್ತೆ ಚೋಗಳೆಕರ ಫೋಟೋ ಸ್ಟುಡಿಯೋದಿಂದ ಕೆಂಚಾ ರಸ್ತೆ ಕ್ರಾಸ್‍ವರೆಗೆ ಎಡಬದಿಗೆ,
ನಾಲ್ಕುಚಕ್ರ ವಾಹನಗಳ ನಿಲುಗಡೆ ಸ್ಥಳಗಳು:
ಎಂ.ಜಿ.ರಸ್ತೆ ಈಜುಕೊಳ ಮುಂದಿನಿಂದ ಕೋರ್ಟ್ ರಸ್ತೆವರೆಗೆ ಬಲಬದಿ, ಎಂ.ಜಿ.ರಸ್ತೆ ಕೋರ್ಟ್ ರಸ್ತೆ ಕ್ರಾಸ್‍ನಿಂದ ಜಿಲ್ಲಾ ಪಂಚಾಯ್ತ್ ಕಾರ್ಯಾಲಯದವರೆಗೆ ಎರಡೂ ಬದಿಯಲ್ಲಿ, ಗ್ರೀನ್‍ಸ್ಟ್ರೀಟ್ ಶಿವಾಜಿ ಚೌಕದಿಂದ ಪಿಕಳೆ ರಸ್ತೆವರೆಗೆ, ಕೋರ್ಟ್ ರಸ್ತೆಯಲ್ಲಿ ಎಂ.ಜಿ.ರಸ್ತೆಯಿಂದ ನಮನ ಬೇಕರಿವರೆಗೆ, ಲೈಬ್ರರಿ ರಸ್ತೆ ಎಂ.ಜಿ.ರಸ್ತೆಯಿಂದ ಗ್ರೀನ್ ಸ್ಟ್ರೀಟ್ ರಸ್ತೆವರೆಗೆ ಎಡಬದಿಗೆ (ಅಶೋಕ ಹೋಟೆಲ್ ಮುಂಭಾಗ) ಸುಭಾಷ್ ಸರ್ಕಲ್‍ದಿಂದ (ಸೀವ್ಯೂ ಹೋಟೆಲ್) ಮಾರುತಿಗಲ್ಲಿ ಗೋಪುರವರೆಗೆ, ಹೂವಿನಚೌಕದಿಂದ ಕೋಣೆನಾಲಾ ಸೇತುವೆವರೆಗೆ ಎಡಬದಿಗೆ, ಕೆಇಬಿ ರಸ್ತೆ ರಾಧಾಕೃಷ್ಣ ದೇವಸ್ಥಾನ ಮುಂದಿನಿಂದ ಭಟ್ಸ್ ಬೇಕರಿವರೆಗೆ, ಕಮಲಾಕರ ರಸ್ತೆ ಅಂಬೇಡ್ಕರ್ ಸರ್ಕಲ್‍ದಿಂದ ಕೋಡಿಬಾಗ ರಸ್ತೆಯವರೆಗೆ, ಪಿಕಳೆ ರಸ್ತೆ ಡಿಸಿ ಆಫೀಸ್ ಹಿಂದಿನಿಂದ ಕೋಡಿಬಾಗ ರಸ್ತೆಯ ಬಲಬದಿಗೆ, ಕಾರವಾರ ಕೋಡಿಬಾಗ ರಸ್ತೆ ಕಾಜುಬಾಗ ಸರ್ಕಲ್‍ನಿಂದ ಅರ್ಜುನ್‍ಟಕೀಸ್‍ವರೆಗೆ, ಕಾರವಾರ ಕೋಡಿಬಾಗ್ ರಸ್ತೆ ಅರ್ಜುನ್ ಟಾಕೀಸ್‍ನಿಂದ ಮಂಗಲಮ್ ಹೋಂಡಾ ಷೋರೂಮ್‍ವರೆಗೆ.
ಆಂಬುಲೆನ್ಸ್ ಅಥವಾ ತುರ್ತು ವಾಹನಗಳ ನಿಲುಗಡೆ ಸ್ಥಳಗಳು: ಪಿಕಳೆ ರಸ್ತೆ ಎಂ.ಜಿ.ರಸ್ತೆಯಿಂದ ಪಿಕಳೆ ನರ್ಸಿಂಗ್ ಹೋಮ್ ಮುಂಭಾಗ.
ಆರುಚಕ್ರ/ಹತ್ತುಚಕ್ರ ವಾಹನಗಳ ನಿಲುಗಡೆ ಸ್ಥಳಗಳು: ಕಮಲಾಕರ್ ರಸ್ತೆಯ ಎಂ.ಜಿ. ರಸ್ತೆಯಿಂದ ಅಂಬೇಡ್ಕರ್ ಸರ್ಕಲ್‍ವರೆಗೆ, ಕೋಡಿಬೀರ ದೇವಸ್ಥಾನ ಕಮಾನಿನಿಂದ ಕೋಣೆನಾಲವರೆಗೆ, ಬಿಲ್ಟ್ ಸರ್ಕಲ್ ಹತ್ತಿರ ಹೆದ್ದಾರಿ ಪಕ್ಕದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
    
ಅಲ್ಲದೆ, ನಾಗರಿಕರ ಹಾಗೂ ಸುಗಮ ವಾಹನ ಸಂಚಾರ ದೃಷ್ಟಿಯಿಂದ ನಗರ ವ್ಯಾಪ್ತಿಯ ಮುಖ್ಯ ರಸ್ತೆಗಳಾದ ಗೀತಾಂಜಲಿಯಿಂದ ಸುಭಾಷ್ ಸರ್ಕಲ್‍ವರೆಗೆ, ಗ್ರೀನ್‍ಸ್ಟ್ರೀಟ್ ರಸ್ತೆ, ಕೋರ್ಟ್ ರಸ್ತೆ, ಮಾರುತಿ ದೇವಸ್ಥಾನದಿಂದ ಪಿಕಳೆ ರಸ್ತೆ ಕ್ರಾಸ್‍ವರೆಗೆ, ಗಾಂಧೀ ಮಾರ್ಕೆಟ್, ಜನತಾ ಬಜಾರ್‍ನಿಂದ ಹೈಚರ್ಚ್ ರಸ್ತೆವರೆಗೆ (ದೋಬಿಘಾಟ್ ರಸ್ತೆ), ರಾಧಾಕೃಷ್ಣ ದೇವಸ್ಥಾನ ರಸ್ತೆ, ಕುಟಿನೋ ರಸ್ತೆ ಕ್ರಾಸ್‍ನಿಂದ ಕೈಗಾ ರಸ್ತೆವರೆಗಿನ ಹೈಚರ್ಚ್ ರಸ್ತೆಗಳಲ್ಲಿ ಮುಂಜಾನೆ 9ರಿಂದ ರಾತ್ರಿ 9ರವರೆಗೆ ಭಾರೀ ವಾಹನಗಳನ್ನು ನಿಲ್ಲಿಸಿ ಸಾಮಾನು ಸರಂಜಾಮುಗಳನ್ನು ಖಾಲಿ ಮಾಡುವುದು ಅಥವಾ ಲೋಡ್ ಮಾಡುವುದನ್ನು ನಿಷೇಧಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
    
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಗೋಪಾಲ್ ಬ್ಯಾಕೋಡ್, ನಗರಸಭೆ ಆಯುಕ್ತ ಯೋಗೇಶ್ವರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿರಕ್ತಮಠ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಆರ್.ಪಿ.ನಾಯ್ಕ್, ಮೋಹನ್‍ರಾಜ್, ಪೊಲೀಸ್ ನಿರೀಕ್ಷಕರಾದ ಶಿವಕುಮಾರ್, ವಿನಾಯಕ ಬಿಲ್ಲವ, ಪ್ರಾದೇಶಿಕ ಸಾರಿಗೆ ಆಯುಕ್ತ ರಾಮಕೃಷ್ಣ ರೈ, ಮೋಟಾರು ವಾಹನ ನಿರೀಕ್ಷಕ ರವಿ ಬಿಸರಳ್ಳಿ ಉಪಸ್ಥಿತರಿದ್ದರು.

 

Read These Next

ಜಿಲ್ಲೆಯಲ್ಲಿ ಮೇ 7 ರಂದು ಮತದಾನ, ತಕ್ಷಣದಿಂದಲೇ ನೀತಿ ಸಂಹಿತೆ ಜಾರಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಕಾರವಾರ : ಚುನಾವಣಾ ಆಯೋಗದ ನಿರ್ದೇಶನದಂತೆ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ಮತದಾನ ನಡೆಯಲಿದ್ದು, ಜಿಲ್ಲೆಯಲ್ಲಿ ...

ಭಟ್ಕಳ: ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೂಕ್ಷ್ಮ ಬೋಧನೆ, ಲಲಿತಕಲೆ ಮತ್ತು ರಂಗಭೂಮಿ ಕಾರ್ಯಾಗಾರ ಮುಕ್ತಾಯ

ಶಿಕ್ಷಕರಾದವರು ವಿದ್ಯಾರ್ಥಿಗಳಿಗೆ ಸಂಸ್ಕಾರ, ಮಾನವೀಯ ಮೌಲ್ಯ, ಪರಸ್ಪರ ಗೌರವ ನೀಡುವುದು ಮತ್ತು ರಾಷ್ಟ್ರಭಕ್ತಿಯನ್ನು ಹೆಚ್ಚಿಸುವ ...