ಮುಂಡಳ್ಳಿ ವಲಯ ಅಂಗನವಾಡಿ ಮಕ್ಕಳಿಂದ ಮಕ್ಕಳದಿನಾಚರಣೆ

Source: sonews | By Staff Correspondent | Published on 23rd November 2018, 10:46 PM | Coastal News | Don't Miss |

ಭಟ್ಕಳ: ಅಂಗನವಾಡಿಗಳ ವತಿಯಿಂದ ಮಕ್ಕಳ ದಿನಾಚರಣೆಯನ್ನು ಆಚರಿಸುವುದು ಅತ್ಯಂತ ಅರ್ಥಪೂರ್ಣವಾಗಿದ್ದು, ಮಕ್ಕಳ ಕಾರ್ಯಕ್ರಮ ನೋಡಲು ಅತ್ಯಂತ ಚೆಂದವಾಗಿತ್ತದೆ ಎಂದು ಶಾಸಕ ಸುನಿಲ್ ನಾಯ್ಕ ಹೇಳಿದರು. 

ಮುಂಡಳ್ಳಿ ವಲಯದ ಎಂಟು ಅಂಗನವಾಡಿಗಳ ಒಕ್ಕೂಟದ ವತಿಯಿಂದ ಎರ್ಪಡಿಸಲಾಗಿದ್ದ ಮಕ್ಕಳ ದಿನಾಚರಣೆಯನ್ನು ಇಲ್ಲಿನ ಕುದ್ರೆಬೀರಪ್ಪ ದೇವಸ್ಥಾನದ ಸಭಾ ಭವನದಲ್ಲಿ ಉದ್ಘಾಟಿಸಿ ಕೇಕ್ ಕತ್ತರಿಸುವ ಮೂಲಕ ಮಕ್ಕಳೊಂದಿಗೆ ಬರೆತು ಮಾತನಾಡುತ್ತಿದ್ದರು. 

ಅಂಗನವಾಡಿ ಶಿಕ್ಷಕಿಯರು ತಮ್ಮ ಕೆಲಸದ ವತ್ತಡಗಳ ನಡುವೆಯೂ ಕೂಡಾ ಸರಕಾರದ ಬೇರೆ ಬೇರೆ ಕೆಲಸಗಳನ್ನು ನಿಭಾಯಿಸಬೇಕಾಗುತ್ತದೆ. ಆದರೂ ಸಹ ತಮ್ಮ ಕರ್ತವ್ಯದಲ್ಲಿ ಉತ್ತಮ ಪ್ರಗತಿಯನ್ನು ತೋರಿಸುತ್ತಾ ಪುಟ್ಟ ಮಕ್ಕಳಲ್ಲಿರುವ ಪ್ರತಿಭೆಗಳಿಗೆ ಹೊಳಪು ಕೊಟ್ಟು ಅವರನ್ನು ತರಬೇತಿಗೊಳಿಸುವ ಕಾರ್ಯವನ್ನು ಮಾಡುವುದು ಶ್ಲಾಘನೀಯ ಕಾರ್ಯವಾಗಿದೆ. ನಮ್ಮ ಮಕ್ಕಳು ಕೇವಲ ಶೈಕ್ಷಣಿಕ ಪ್ರಗತಿಯತ್ತ ಮಾತ್ರವಲ್ಲ, ಅವರು ಕಲೆ, ಕ್ರೀಡೆ, ಸಾಂಸ್ಕøತಿಕ ಚಟುವಟಿಕೆಯತ್ತ ಕೂಡಾ ಗಮನ ನೀಡಬೇಕು ಎಂದು ಕರೆ ನೀಡಿದರು. 

ಅತಿಥಿಗಳಾಗಿ ಉಪಸ್ಥಿತರಿದ್ದ ಮುಂಡಳ್ಳಿ ಗ್ರಾಮ ಪಂಚಾಯತ್ ಸದಸ್ಯೆ ಶಿವಾನಿ ಶಾಂತಾರಾಮ ಭಟ್ಟಳ್ ಮಾತನಾಡಿ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಅಂಗನವಾಡಿಗೆ ಬರುವ ಮಕ್ಕಳನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಾ ಅವರ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಾರೆ. ಅಲ್ಲದೇ ಸರಕಾರ ವಹಿಸುವ ಎಲ್ಲಾ ಕೆಲಸಗಳನ್ನು ತುಂಬಾ ಅಚ್ಚುಕಟ್ಟಾಗಿ ಮಾಡುತ್ತಾರೆ.  ಅದರೆ ಸರಕಾರ ಅವರ ಗೌರವಧನವನ್ನು ಹೆಚ್ಚಿನ ಮೀನಮೇಷ ಮಾಡುತ್ತಿದೆ.  ಶಾಸಕರು ಕೇಂದ್ರ ಸಚಿವರ ಮೂಲಕ ಸರಕಾರದ ಮೇಲೆ ಒತ್ತಡ ಹೇರಿ ಅವರ ಗೌರವ ಧನ ಹೆಚ್ಚಿಸಲು ಆಸಕ್ತಿ ವಹಿಸಬೇಕು ಎಂದು ಕರೆ ನೀಡಿದರು. 

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತಾಲೂಕಾ ಪಂಚಾಯತ್ ಉಪಾಧ್ಯಕ್ಷೆ ರಾಧಾ ಮೊಗೇರ, ಮುಂಡಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗರತ್ನಾ ಮೊಗೇರ ಮಾತನಾಡಿದರು. 

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಸುಶೀಲಾ ಮೊಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. 

ವೇದಿಕೆಯಲ್ಲಿ ಮುಂಡಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ಲೋಕೇಶ ಆಚಾರ್ಯ, ಗೋವಿಂದ ಮೊಗೇರ, ಲಕ್ಷ್ಮೀ ಸೋಮಯ್ಯ ನಾಯ್ಕ, ಪೂರ್ಣಿಮಾ ಅನಂತ ನಾಯ್ಕ, ಮಂಜಮ್ಮ ಈರಾ ನಾಯ್ಕ, ಕುದ್ರಬೀರಪ್ಪ ದೇವಸ್ಥಾನದ ಅಧ್ಯಕ್ಷ ಚಂದ್ರು ನಾರಾಯಣ ನಾಯ್ಕ, ಕಾರ್ಯದರ್ಶಿ ಶನಿಯಾರ ಕೃಷ್ಣಪ್ಪ ನಾಯ್ಕ, ದೀಪಾ ಮೊಹನ ದೇವಡಿಗ ಮುಂತಾದವರು ಉಪಸ್ಥಿತರಿದ್ದರು.  

ಅಂಗನವಾಡಿ ಕಾರ್ಯಕರ್ತೆ ಹೇಮಾ ಸ್ವಾಗತಿಸಿದರು. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...