ಉಚಿತ  ಹೊಲಿಗೆ  ಮತ್ತು ಬ್ಯೂಟಿಷಿಯನ್ ತರಬೇತಿಯ ಪ್ರಮಾಣ ಪತ್ರ ವಿತರಣಾ  ಸಮಾರಂಭ

Source: sonews | By Staff Correspondent | Published on 12th September 2018, 5:04 PM | Coastal News | Don't Miss |

ಭಟ್ಕಳ: ಭಾರತ ಸರಕಾರ  ಪಾಲಿಟೆಕ್ನಿಕ್‍ಗಳ ಮೂಲಕ ಸಮುದಾಯ ಅಭಿವೃದ್ಧಿ ಯೋಜನೆ ಆರ್.ಎನ್.ಎಸ್ ಪಾಲಿಟೆಕ್ನಿಕ್ ಮುರ್ಡೆಶ್ವರ ಆಶ್ರಯದಲ್ಲಿ  6 ತಿಂಗಳ ಹೊಲಿಗೆ ತರಬೇತಿಯಲ್ಲಿ 2 ಬ್ಯಾಚನಲ್ಲಿ 60 ಜನ ಮಹಿಳೆಯರಿಗೆ ಮಂಡಲೇಶ್ವರ ದೇವಸ್ಥಾನ ಸೋನಾರಕೇರಿಯಲ್ಲಿ  ಮತ್ತು 3 ತಿಂಗಳ ಬ್ಯೂಟಿಷಿಯನ್ ತರಬೇತಿಯಲ್ಲಿ 20 ಜನ  ಮಹಿಳೆಯರಿಗೆ ಆರಾಧನಾ ಬ್ಯೂಟಿಪಾರ್ಲರ್ ಆಸರಕೇರಿಯಲ್ಲಿ ತರಬೇತಿಗಳನ್ನು ನೀಡಲಾಗಿತ್ತು

.ಇವುಗಳ ಪ್ರಮಾಣ  ಪತ್ರ ವಿತರಣಾ  ಸಮಾರಂಭವನ್ನು  ಮಂಗಳವಾರ ಮಂಡಲೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿತ್ತು, 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆರ್.ಎನ್.ಎಸ್ ಪಾಲಿಟೆಕ್ನಿಕ್ ನ ಉಪಪ್ರಾಚಾರ್ಯರು ಮತ್ತು ಸಿ.ಡಿ.ಟಿ.ಪಿ ಯೋಜನೆಯ ಸಂಯೋಜಾನಾಧಿಕಾರಿಯಾದ ಕೆ.ಮರಿಸ್ವಾಮಿ ಯವರು  ಮಾತನಾಡುತ್ತಾ ಕೇಂದ್ರ ಸರ್ಕಾರದ ಪಾಲಿಟೆಕ್ನಿಕ್  ಮೂಲಕ ಸಮುದಾಯ ಅಭಿವೃದ್ಧಿ ಯೋಜನೆ 2009-10 ರಿಂದ 2017-18 ರವರೆಗೆ ದಿವಂಗತ ಮಾಜಿ ಪ್ರದಾನಿ ಎ.ಬಿ ವಾಜಪೇಯ್ ಹಾಗೂ ಈಗೀನ ಪ್ರದಾನಿ ನರೇಂದ್ರ ಮೋದಿ ಹೆಚ್ಚಿನ ಮೂತುವರ್ಜಿ ವಹಿಸಿದರಿಂದ  ಹೆಚ್ಚಿನ ಅನುದಾನದೊಂದಿಗೆ ಕರ್ನಾಟಕದ 60 ಪಾಲಿಟೆಕ್ನಕ್ ಗಳಲ್ಲಿ ಹಾಗೂ ಉತ್ತರಕರ್ನಾಟಕ ಜಿಲ್ಲೆಯ 4 ಪಾಲಿಟೆಕ್ನಿಕ್ ಗಳಲ್ಲಿ ಈ ಯೋಜನೆ  ಯಶಸ್ವಿಯಾಗಿ ನಡೆಸಲಾಯಿತು. ಈ ಯೋಜನೆಯ ಮೂಲಕ  ಸಾವಿರಾರು ನಿರುದ್ಯೋಗ  ಯುವಕ ಯುವತಿಯರಿಗೆ ಉಚಿತ ಕೌಶಲ್ಯ ತರಬೇತಿ ನೀಡಿ ಸ್ವಾವಲಂಬಿಗಳಗಿ ಮಾಡಲಾಗಿದೆ ಹಾಗೂ ಈ ಯೋಜನೆಯ ಮೂಲಕ ಗ್ರಾಮೀಣ, ಪಟ್ಟಣ ಜನರ ಜೀವನ ಮಟ್ಟ ಅಭಿವೃಧ್ಧಿ ಹೊಂದಲು ಬೇಕಾದ ತಾಂತ್ರಿಕ ಸೇವೆ ,ತಾಂತ್ರಿಕ ವರ್ಗಾವಣೆ, ನೇರವು ಸೇವೆ ,ಮಾಹಿತಿ ಪ್ರಸರಣಾ ಸೇವೆ ಮುಂತಾದ ಸೇವೆಗಳ ಮೂಲಕ ಗ್ರಾಮೀಣ ಹಾಗೂ ಪಟ್ಟಣದ ಭಾಗದಲ್ಲಿ ಬಹಳ ಜನಪ್ರಿಯವಾದ ಯೋಜನೆಯಾಗಿದೆ.

ಕಳೆದ 2017-18 ಹಾಗೂ2018-19 ರಿಂದ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ವಿಭಾಗದಿಂದ ಕೌಶಲ್ಯ ಉದ್ಯಮಶೀಲತಾ ಇಲಾಖೆಗೆ ವರ್ಗಾಹಿದ ನಂತರ  ಈ ಯೋಜನೆಗೆ ಕೇಂದ್ರದಿಂದ  ಅನುದಾನ ಬಿಡುಗಡೆ ಮಾಡದ ಕಾರಣ ಕರ್ನಾಟಕದಲ್ಲಿ ಸಂಪೂರ್ಣವಾಗಿ ಯೋಜನೆಯ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಕೆಂದ್ರ ಸಚಿವರಾದ ಅನಂತ ಕುಮಾರ ಹೆಗಡೆ ಅವರು ಗಮನ ಹರಿಸಿ ಉತ್ತಮವಾದ ಈ ಯೋಜನೆ ಮುಂದುವರಿಸಲು ಕೋರಿದರು.ಹಾಗೂ ಕೇಂದ್ರ ಸರ್ಕಾರ 15 ಪಾಲಿಟೆಕ್ನಕಗೆ 213 ಲಕ್ಷ  ನೀಡಿದ ಅನುದಾನದಲ್ಲಿ  ಕೇವಲ 15% ನೀಡಿ ಉಳಿದ 85% ಹಣವನ್ನು ರಾಜ್ಯಸರ್ಕಾರ ಉಳಿಸಿಕೊಂಡಿದೆ. ಇದರ ಬಗ್ಗೆ  ಸಂಬಂಧಿಸಿದ ರಾಜ್ಯ ಸಚಿವರು ಮತ್ತು ಅಧಿಕಾರಿಗಳು  ಗಮನಹರಿಸಬೇಕೆಂದು ಕೋರಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಭಟ್ಕಳ ನಾಮಧಾರಿ ಸಮಾಜದ ಅಧ್ಯಕ್ಷರಾದ ಎಂ. ಆರ್. ನಾಯ್ಕ ಅವರು ಮಾತನಾಡುತ್ತಾ ಮಹಿಳೆಯರು ಮನಸ್ಸು ಮಾಡಿದರೆ ಸಾದಿಸಲು ಅಸಾಧ್ಯವಾದದ್ದು ಯಾವುದು ಇಲ್ಲ ,ಪ್ಲಾಸ್ಟಿಕ್ ಬದಲು ಬಟ್ಟೆಯ ಕೈ ಚೀಲಕ್ಕೆ ತುಂಬ ಬೇಡಿಕೆ ಇದೆ .ಹೋಲಿಗೆ ಕಲಿತ ಮಹಿಳೆಯರು ಇಂತಹ ಸ್ವ-ಉದ್ಯೋಗ ಕೈಗೋಳಿರಿ ಎಂದು ತಿಳಿಸಿದರು. 

ಇನ್ರ್ನೋವ ಮುಖ್ಯ ಅತಿಥಿ ,ಪತ್ರಕರ್ತರಾದ ಮನಮೋಹನ್ ನಾಯ್ಕ ಮಾತನಾಡಿ  ಮಹಿಳೆಯರು ಸರ್ಕಾರದ ಯೋಜನೆಗಳ ಸದುಪಯೋಗ ಪಡಿಸಿಕೊಂಡಾಗ ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದು ತಿಳಿಸಿದರು. 
ಭಟ್ಕಳ ಆರ್ಥಿಕ ಸಾಕ್ಷರತಾ ಕೇಂದ್ರದ ಸಂಚಾಲಕ ದಯಾನಂದ, ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ನೀಡಿದರು. ಪ್ರೇಮಾ ಶೇಟ್ ಹಾಗೂ ಶಮನಾಜ್ ಬಾನು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ವೇದಿಕೆ ಮೇಲೆ  ಮಂಡಲೇಶ್ವರ ದೇವಸ್ಥಾನದ ಅಧ್ಯಕ್ಷ ಶಿವಾನಂದ ಮಹಾಲೆ,  ಹೊಲಿಗೆ  ಶಿಕ್ಷಕಿ ಶ್ರೇಯಾ ಮಹಾಲೆ,ಬ್ಯೂಟಿಷಿಯನ್ ಶಿಕ್ಷಕಿ ಶ್ವೇತಾ ಮೋಗೆರ ಉಪಸ್ಥಿತರಿದ್ದರು. ಹೋಲಿಗೆ ಮತ್ತು  ಬ್ಯೂಟಿಷಿಯನ್ ತರಬೇತಿ ಪಡೆದ ಅಭ್ಯರ್ಥಿಗಳಿಗೆ  ಅತಿಥಿ ಗಣ್ಯರಿಂದ  ಪ್ರಮಾಣ ಪತ್ರ ವಿತರಿಸಲಾಯಿತು. 

ಹೊಲಿಗೆ ತರಬೇತಿ ಪರೀಕ್ಷೇಯಲ್ಲಿ ಉತ್ತಮ ಸಾಧನೆ ಮಾಡಿದ ಚಂದ್ರಕಲಾ ವೆಂಕಟರಮಣ ನಾಯ್ಕ ಇವರಿಗೆ ಎಂ. ಆರ್. ನಾಯ್ಕ ರವರು ಒಂದು ಹೊಲಿಗೆ ಯಂತ್ರವನ್ನು ಬಹುಮಾನವಾಗಿ ನೀಡಿದರು. ಹಾಗೂ ತರಬೇತಿ ಪಡೆದ ಅಭ್ಯರ್ಥಿಗಳು ಮಂಡಲೇಶ್ವರ ದೇವಸ್ಥಾನಕ್ಕೆ ಊಟದ ತಟ್ಟೆಗಳನ್ನು ಕೊಡುಗೆಯಾಗಿ ನೀಡಿದರು.

ಕಾರ್ಯಕ್ರಮದ ಮೊದಲಿಗೆ  ವಿಜಯಾ ಶೇಟ್  ಮತ್ತು ಪ್ರೇಮಾ ಶೇಟ್ ಪ್ರಾರ್ಥಿಸಿದರು, ನಾಗರತ್ನ ಎಮ್ ಮಹಾಲೆ ರವರು ನಿರೂಪಿಸಿ, ಸುಪ್ರೀಯಾ ಎಮ್ ಶೇಟ್ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು. 

Read These Next

ದ.ಕ.ಜಿಲ್ಲೆಯಲ್ಲಿ 441 ಡೆಂಗ್ ಪ್ರಕರಣಗಳು ಪತ್ತೆ; ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗವಾದ ಡೆಂಗ್ ಹಾಗೂ ಮಲೇರಿಯಾ ಹಾವಳಿ ತೀವ್ರಗೊಂಡಿದ್ದು, ನಿನ್ನೆ ಸಂಜೆ (ಗುರುವಾರ) ಶಾಲಾ ...

ದ.ಕ.ಜಿಲ್ಲೆಯಲ್ಲಿ 441 ಡೆಂಗ್ ಪ್ರಕರಣಗಳು ಪತ್ತೆ; ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗವಾದ ಡೆಂಗ್ ಹಾಗೂ ಮಲೇರಿಯಾ ಹಾವಳಿ ತೀವ್ರಗೊಂಡಿದ್ದು, ನಿನ್ನೆ ಸಂಜೆ (ಗುರುವಾರ) ಶಾಲಾ ...

ನಕಲಿ ಬಿತ್ತನೆ ಬೀಜ ಹಾಗೂ ಕೀಟ ನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ರೈತಸಂಘದಿಂದ ಮೌನ ಹೋರಾಟ

ಕೋಲಾರ: ರೈತರ ಮರಣ ಶಾಸನ ಬರೆಯುತ್ತಿರುವ ನಕಲಿ ಬಿತ್ತನೆ ಬೀಜ ಹಾಗೂ ಕೀಟ ನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ...

ಗೌನಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯರಾಗಿ ಕಾಂಗ್ರೆಸ್‌ನ ಶಂಕರಮ್ಮ ,ಉಪಾಧ್ಯರಾಗಿ ಮಂಜುನಾಥ ಆರಾಧ್ಯ

ಶ್ರೀನಿವಾಸಪುರ: ತಾಲ್ಲೂಕಿನ ಗೌನಿಪಲ್ಲಿ ಗ್ರಾಮ ಪಂಚಾಯಿತಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯರಾಗಿ ಕಾಂಗ್ರೆಸ್‌ನ ಶಂಕರಮ್ಮ ...