ನಿತೀಶ್ ಕುಮಾರ್‍ರಿಂದ ಮುಸ್ಲಿಮರ ತುಷ್ಟಿಕರಣಕ್ಕಾಗಿ ಹೊಸ ತಂತ್ರ 

Source: sonews | By Staff Correspondent | Published on 7th August 2017, 11:38 PM | National News | Don't Miss |

ಹೊಸದಿಲ್ಲಿ: ವಂಚನೆಗೊಳಗಾದೆವು ಎನ್ನುವ ಅನಿಸಿಕೆಯಿಂದ ಮುಸ್ಲಿಂ ಅಲ್ಪಸಂಖ್ಯಾತರು ತನ್ನಿಂದ ದೂರವಾಗುತ್ತಿದ್ದಾರೆ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ತನ್ನ ಜೊತೆಗಿರಿಸಲಿಕ್ಕಾಗಿ ಹೊಸ ತಂತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ಸಂಘಪರಿವಾರದೊಂದಿಗೆ ಸೇರಿ ಸರಕಾರ ರಚಿಸಿದ್ದಕ್ಕೆ ಟೀಕೆ ಕೇಳಿಬರುತ್ತಿರುವ ಬೆನ್ನಿಗೆ  ಬಿಹಾರದಲ್ಲಿ ಜನರಗುಂಪಿನಿಂದ  ದಾಳಿ ನಡೆದಿರುವುದು ನಿತೀಶ್‍ರಲ್ಲಿ ಆತಂಕವನ್ನು ಸೃಷ್ಟಿಸಿದೆ.

 

ಬಿಹಾರದ ಅಲ್ಪಸಂಖ್ಯಾತ ಕಲ್ಯಾಣ ಸಚಿವಾಲಯದ ಕೆಲಸಗಳನ್ನು ಅವಲೋಕನ ನಡೆಸಲು ನಿತೀಶ್ ಕುಮಾರ್ ತುರ್ತು ಸಭೆಯನ್ನು ಕರೆದು ಸೇವೆಯನ್ನು ಉತ್ತಮಪಡಿಸಲು ಹಲವು ಸೂಚನೆಗಳನ್ನು ನೀಡಿದ್ದಾರೆ. ಬಿಹಾರದಲ್ಲಿ 2200 ಮದ್ರಸಾಗಳಿದ್ದು, ಅಲ್ಲಿಗೆ ತುರ್ತಾಗಿ ಸೌಲಭ್ಯಗಳನ್ನು ಮತ್ತುಆರ್ಥಿಕ ಹಾಗೂ  ನಿರ್ಮಾಣ ಕಾಮಗಾರಿಗೆ ನೆರವನ್ನು ಒದಗಿಸಲಾಗುವುದೆಂದು ನಿತೀಶ್ ಘೋಷಿಸಿದರು. ತರಗತಿ ಕೋಣೆಗಳು, ಲೈಬ್ರರಿ, ಲ್ಯಾಬರೇಟರಿಗಳಿಗೆ ಸರಕಾರ ನೆರವು ನೀಡಲಿದೆ. ಮದ್ರಸಾದಿಂದ  10, 12 ನೆ ತರಗತಿ ಪಾಸಾಗುವ ವಿದ್ಯಾರ್ಥಿಗಳಿಗೆ ತಲಾ 10,000ರೂಪಾಯಿ ನೀಡಲಾಗುವುದು. ವಕ್ಫ್ ಮಂಡಳಿಗೆ ಎಲ್ಲ  ಜಿಲ್ಲೆಗಳಲ್ಲಿ ಕಚೇರಿಸಹಿತ ಒಂದು ಕಟ್ಟಡ ಹಾಗೂ ಲೈಬ್ರರಿ, ಒಂದು ಕಮ್ಯುನಿಟಿ ಹಾಲ್‍ನ್ನು ಬಿಹಾರ ಸರಕಾರ ನಿರ್ಮಿಸಿಕೊಡಲಿದೆ.

ಬಿಜೆಪಿಯೊಂದಿಗೆ ಸೇರಿ ಮುಖ್ಯಮಂತ್ರಿಯಾದ ದಿನ ಮುಸ್ಲಿಂ ಶಾಸಕರಿಗೆ ಶುಕ್ರವಾರದ ಜುಮಾ ನಮಾಝ್‍ಗೆ ಹೋಗಲಿಕ್ಕಾಗಿ ನಿತೀಶ್ ತನ್ನ ಭಾಷಣವನ್ನು ಕಡಿತಗೊಳಿಸಿದ್ದರು. ಮುಸ್ಲಿಮರನ್ನು ಕೈಬಿಟ್ಟಿಲ್ಲ ಎನ್ನುವ ಅಭಿಪ್ರಾಯವನ್ನು  ಸೃಷ್ಟಿಸಲು ಈ ಎಲ್ಲ ತಂತ್ರಗಳನ್ನು ನಿತೀಶ್ ಪ್ರಯೋಗಿಸುತ್ತಿದ್ದಾರೆ. ಬಿಜೆಪಿಯೊಂದಿಗೆ ಕೈಜೋಡಿಸಿದ್ದರಿಂದ ನಾವು ವಂಚಿತರಾಗಿದ್ದೇವೆ ಎನ್ನುವ ಅನಿಸಿಕೆಯನ್ನು ಮುಸ್ಲಿಮರಿಂದ ಹೋಗಲಾಡಿಸಲು ಈ ಕ್ರಮಗಳನ್ನು ನಿತೀಶ್ ಕೈಗೊಂಡಿದ್ದಾರೆ. ಬಿಹಾರದ ಪ್ರಮುಖ ಮುಸ್ಲಿಂ ನಾಯಕ ಅಲಿ ಅನ್ವರ್ ಬಿಜೆಪಿ ಸಖ್ಯ ಆತ್ಮಹತ್ಯೆಯೆಂದು ಹೇಳಿದ್ದರು. ಶರದ್ ಯಾದವ್ ನಿತೀಶ್‍ರ ಕ್ರಮದಿಂದ ಮುನಿಸಿಕೊಂಡಿದ್ದಾರೆ.

Read These Next

ಮೋದಿ ಸರ್ಕಾರ ಅವಧಿಯಲ್ಲಿ ’ಬೀಫ್’ ರಪ್ತು ಪ್ರಮಾಣದಲ್ಲಿ ಗರಿಷ್ಠ ಏರಿಕೆ; 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ಬೀಫ್ ರಫ್ತು

2014ರಲ್ಲಿ ಮೋದಿ ಸರಕಾರ ಅಧಿಕಾರ ವಹಿಸಿದಂದಿನಿಂದ ಎಮ್ಮೆ ಮಾಂಸದ ರಫ್ತು ಗಣನೀಯಾಗಿ ಹೆಚ್ಚಾಗಿದೆ. 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ...

ಹೊಸದಿಲ್ಲಿ:ಬಿಜೆಪಿ ರಾಷ್ಟ್ರೀಯ ಪ್ರ. ಸಂಘಟನಾ ಕಾರ್ಯದರ್ಶಿಯಾಗಿ ಕರ್ನಾಟಕ ಮೂಲದ ಬಿ.ಎಲ್ ಸಂತೋಷ್ ನೇಮಕ

ಹೊಸದಿಲ್ಲಿ: ಕಳೆದ 13 ವರ್ಷಗಳಿಂದ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಮಲಾಲ್ ಹುದ್ದೆ ತೊರೆದ ಹಿನ್ನೆಲೆಯಲ್ಲಿ ತೆರವಾದ ...

ವಂಚನೆಯ ಮತ್ತೊಂದು ಮಾರ್ಗ

ಸಾಮಾಜಿಕ-ಆರ್ಥಿಕ ಆಡಳಿತ ನಿರ್ವಹಣೆಯಲ್ಲಿ ಅತ್ಯಂತ ಹೀನಾಯವಾದ ಕಾರ್ಯನಿರ್ವಹಣೆ ತೋರಿದ ಸರ್ಕಾರವೊಂದು ಹಿಂದಿಗಿಂತಲೂ ಹೆಚ್ಚಿನ ...

ತಡೆಗಟ್ಟಬಹುದಾದ ಸಾವುಗಳು

ಕಳೆದ ತಿಂಗಳು ಬಿಹಾರದ ಮುಝಫರ್‌ಪುರ್  ಜಿಲ್ಲೆಯಲ್ಲಿ ತೀವ್ರ ಮೆದುಳು ಜ್ವರಕ್ಕೆ ಬಲಿಯಾಗಿ ಪ್ರಾಣ ತೆತ್ತಿರುವ ೧೫೩ ಮಕ್ಕಳ ಸಾವುಗಳು ...

ನಕಲಿ ಬಿತ್ತನೆ ಬೀಜ ಹಾಗೂ ಕೀಟ ನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ರೈತಸಂಘದಿಂದ ಮೌನ ಹೋರಾಟ

ಕೋಲಾರ: ರೈತರ ಮರಣ ಶಾಸನ ಬರೆಯುತ್ತಿರುವ ನಕಲಿ ಬಿತ್ತನೆ ಬೀಜ ಹಾಗೂ ಕೀಟ ನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ...

ಗೌನಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯರಾಗಿ ಕಾಂಗ್ರೆಸ್‌ನ ಶಂಕರಮ್ಮ ,ಉಪಾಧ್ಯರಾಗಿ ಮಂಜುನಾಥ ಆರಾಧ್ಯ

ಶ್ರೀನಿವಾಸಪುರ: ತಾಲ್ಲೂಕಿನ ಗೌನಿಪಲ್ಲಿ ಗ್ರಾಮ ಪಂಚಾಯಿತಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯರಾಗಿ ಕಾಂಗ್ರೆಸ್‌ನ ಶಂಕರಮ್ಮ ...