ವಿಚಾರವಾದಿ ನರೇಂದ್ರ ನಾಯಕರ ಪವಾಡ ಬಯಲು ಹಾಗು ವೈಜ್ಞಾನಿಕ ಉಪನ್ಯಾಸ

Source: sonews | By sub editor | Published on 13th January 2018, 12:17 AM | Coastal News | Don't Miss |

ಭಟ್ಕಳ: ವೈಜ್ಞಾನಿಕವಾಗಿ ಚಿಂತಿಸುವುದರ ಬದಲು ಎಲ್ಲರು ಅವೈಜ್ಞಾನಿಕವಾಗಿ ಚಿಂತಿಸುವುದರಿಂದ ದೇಶದ ಅಭಿವೃದ್ದಿ ಕುಂಠಿತವಾಗುತ್ತಿದೆಂದು ವೈಜ್ಞಾನಿಕ ವಿಶ್ಲೇಷಕ, ವಿಚಾರವಾದಿ ನರೇಂದ್ರ ನಾಯಕ ಹೇಳಿದರು. 
ಅವರು ಇಲ್ಲಿನ ಶಿರಾಲಿಯಲ್ಲಿ ಜನತಾ ವಿದ್ಯಾಲಯ ಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿಯ ಪ್ರಯುಕ್ತ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಹಾಗು ಉತ್ತರ ಕನ್ನಡ ಚಿಂತನ ಮಂಥನ ಸಮಿತಿಯಿಂದ ಆಯೋಜಿಸಲಾದ ಪವಾಡ ಬಯಲು ಕಾರ್ಯಕ್ರಮ ಹಾಗು ವೈಜ್ಞಾನಿಕ ಉಪನ್ಯಾಸ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಇಂದಿನ ಯುವ ಜನತೆ ಎಲ್ಲವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡಬೇಕಾಗಿದೆ. ನಾವು ವೈಜ್ಞಾನಿಕವಾಗಿ ಚಿಂತಿಸುವುದರಿಂದ ಮಾತ್ರ ಅಭಿವೃದ್ದಿಯನ್ನು ಹೊಂದಲು ಸಾಧ್ಯ. ವೈಯಕ್ತಿಕ ಬೆಳವಣಿಗೆಯ ಜೊತೆಗೆ ಈಗಿನ ಯುವ ಜನತೆ ದೇಶದ ಸರ್ವತೋಮುಖ ಅಭಿವೃದ್ಧಿಯತ್ತ ಕಾರ್ಯ ಸಾಧಿಸಬೇಕಾಗಿದೆ. ಯುವಕರು ತಮ್ಮ ಚಿಂತನೆಯ ಪ್ರದರ್ಶನ ಮಾಡಬೇಕು ಎಂದು ಕರೆ ನೀಡಿದು.  
ಕಾರ್ಯಕ್ರಮದಲ್ಲಿ ಬ್ರಹ್ಮಾವರದಲ್ಲಿನ ಡಿವೈನ್ ಪಾರ್ಕ ಸಂಸ್ಥೆಯಿಂದ ಆಗಮಿಸಿದ ಮಹೇಶ ಮಾತನಾಡಿದ್ದು ರಾಮಕೃಷ್ಣ ಪರಮ ಹಂಸರಿಗೆ ಒಬ್ಬ ಶಿಷ್ಯನ ಅವಶ್ಯಕತೆ ಇತ್ತು. ಆ ಸಮಯದಲ್ಲಿ ರಾಮಕೃಷ್ಣ ಪರಮಹಂಸರಿಗೆ ದೊರೆತ ಶಿಷ್ಯರೇ ವಿವೇಕಾನಂದರಾಗಿದ್ದಾರೆ. ವಿವೇಕಾನಂದರನ್ನು ರಾಮಕೃಷ್ಣ ಪರಮಹಂಸರು ಭೀಮ ಪ್ರತಿಭೆ ಎಂದು ಕರೆಯುತ್ತಿದ್ದರು. ಅವರಲ್ಲಿನ ಪ್ರತಿಭೆ, ಚಿಂತನೆ ಯುವ ಪೀಳಿಗೆ ಬೆಳೆಸಿಕೊಳ್ಳಬೇಕು. ವಿವೇಕಾನಂದರು ಗುರುವಿನಲ್ಲಿ ನಿಷ್ಟರಾಗಿದ್ದವರು ಈಗಿನ ವಿದ್ಯಾರ್ಥಿಗಳು ತಮ್ಮ ಗುರುವಿಗೆ ನಿಷ್ಟರಾಗಿರಬೇಕು ಎಂದು ಹೇಳಿದರು.
ಇದೇ ಸಂಧರ್ಬದಲ್ಲಿ ವೈಜ್ಞಾನಿಕ ವಿಶ್ಲೇಷಕ, ವಿಚಾರವಾದಿ ನರೇಂದ್ರ ನಾಯಕ ವಿದ್ಯಾರ್ಥಿಗಳಿಗೆ ಯಾವ ರೀತಿಯಲ್ಲಿ ಪವಾಡವನ್ನು ಮಾಡಲಾಗುತ್ತದೆ. ಮತ್ತು ಅದನ್ನು ಹೇಗೆ ಬಯಲು ಮಾಡಬಹುದು ಎಂಬ ಪವಾಡ ಬಯಲು ಕಾರ್ಯಕ್ರಮದಲ್ಲಿ ವಿವರಿಸಿದರು. 
ಈ ಸಂದರ್ಬದಲ್ಲಿ ಸಿ.ಐ.ಟಿ.ಯು ಮುಖಂಡ ಸುಭಾಸ್ ಕೊಪ್ಪಿಕರ್, ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಉಪ ಪ್ರಾಂಶುಪಾಲ ಕೆ. ಮರಿಸ್ವಾಮಿ, ಸಾಹಿತಿ ಹಾಗೂ ವೈದ್ಯ ಡಾ. ಆರ್.ವಿ.ಸರಾಫ್, ಜನತಾ ವಿದ್ಯಾಲಯ ಪದಚಿ ಪೂರ್ವ ಕಾಲೇಜು ಪ್ರಾಂಶುಪಾಲ ಎ.ಬಿ.ರಾಮರಥ, ಜನತಾ ವಿದ್ಯಾಲಯ ಪ್ರೌಢಶಾಲೆ ಮುಖ್ಯಾಧ್ಯಾಪಕರು, ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು.
 

Read These Next

ಜಿಲ್ಲಾ ಮಟ್ಟದ ಕ್ರೀಡಾಕೂಟ;ದಿ ನ್ಯೂ ಇಂಗ್ಲೀಷ ಪಿಯು ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ

ಭಟ್ಕಳ; ಯಲ್ಲಾಪುರ ತಾಲೂಕಾ ಕ್ರಿಡಾಂಗಣದಲ್ಲಿ ನಡೆದ ಪದವಿ ಪೂರ್ವ ಕಾಲೇಜು ವಿದ್ಯಾರ್ಥೀಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಟ್ಕಳದ ...

ಉತ್ತರ ಕನ್ನಡ ಜಿಲ್ಲೆಯ ಅರ್ಬನ್ ಬ್ಯಾಂಕುಗಳಲ್ಲಿಯೇ ಅತ್ಯದಿಕ ಲಾಭ ಗಳಿಸಿದ ಭಟಕಳ ಅರ್ಬನ್ ಬ್ಯಾಂಕ್

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಅರ್ಬನ್ ಬ್ಯಾಂಕುಗಳಲ್ಲಿಯೇ ಅತ್ಯಧಿಕ ಲಾಭ ಗಳಿಸಿದ ಭಟಕಳ ಅರ್ಬನ್ ಬ್ಯಾಂಕ್ ಅತ್ಯುನ್ನತ ಗ್ರಾಹಕ ...