ಶ್ರೀ ವೆಂಕಟೇಶ್ವರ ದೇವಸ್ಥಾನದ ಕಾರ್ತಿಕ ಭಜನಾ ಮಂಗಲೋತ್ಸವ ಕಾರ್ಯಕ್ರಮ

Source: sonews | By Staff Correspondent | Published on 2nd December 2018, 11:38 PM | Coastal News | Don't Miss |

ಭಟ್ಕಳ: ಇಲ್ಲಿನ ಆಸರಕೇರಿಯ ಗುರುಮಠದ ಶ್ರೀ ವೆಂಕಟೇಶ್ವರ ದೇವಸ್ಥಾನದ ಕಾರ್ತಿಕ ಭಜನಾ ಮಂಗಲೋತ್ಸವ ಕಾರ್ಯಕ್ರಮ ಶನಿವಾರದಂದು  ರಾತ್ರಿ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಭಜನಾ ಮಂಗಲೋತ್ಸವದ ಅಂಗವಾಗಿ ಭಜನಾ ಕುಣಿತದ ಸ್ಪರ್ಧೆ ನಡೆಯಿತು.,  ಮಹಾಸತಿ ಭಜನಾ ಮಂಡಳಿ ಕವೂರ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆಯಿತು. ಆಸರಕೇರಿಯ ಶ್ರೀ ವೆಂಕಟೇಶ್ವರ ಭಜನಾ ತಂಡ ದ್ವಿತೀಯ ಸ್ಥಾನ,ಪಡೆಯಿತು. ಲಕ್ಷ್ಮೀ ನಾರಾಯಣ ಭಜನಾ ಮಂಡಳಿ ಮಾಲಕೊಡ್ಲು, ಬೆಂಗ್ರೆ ತೃತಿಯ ಸ್ಥಾನ, ಯಕ್ಷ ದೇವತೆ ಭಜನಾ ಮಂಡಳಿ ಹಾರ್ಸಿಕಾನ್, ಸಮಾಧಾನಕರ ಬಹುಮಾನ ಪಡೆಯಿತು. 

ದೇವಸ್ಥಾನದಲ್ಲಿ ಮಹಾಪೂಜೆ ನಂತರ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಶ್ರೀ ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಎಂ.ಆರ್. ನಾಯ್ಕ ಮಾತನಾಡಿ 150 ಕ್ಕೂ ಅಧಿಕ ವರ್ಷ ಇತಿಹಾಸವಿರುವ ಈ ಕಾರ್ತಿಕ ಭಜನಾ ಕಾರ್ಯಕ್ರಮವನ್ನು  ಆಸರಕೇರಿ ಊರಿನ ಯುವಕರು  ಮುಂದುವರೆಸಿಕೊಂಡು ಬಂದಿರುವುದು ಶ್ಲಾಘನೀಯ ಕಾರ್ಯ  ಎಂದರಲ್ಲದೇ ಈ ಭಜನಾ ಕಾರ್ಯಕ್ರಮಕ್ಕೆ ಊರಿನ ಎಲ್ಲ ಸಮಾಜದವರೂ ಬೆಂಬಲಿಸಿಕೊಂಡು  ನಮ್ಮ ಸಂಸ್ಕ್ರತಿ ಹಾಗೂ ಪರಂಪರೆಯನ್ನು  ಉಳಿಸಲು ಕಾರಣೀಕರ್ತರಾಗಿದ್ದಾರೆ. ಈ ಊರಿನ ಯುವಕರು  ಸತತ 24 ಪ್ರತಿದಿನ ನಗರದ ಸುತ್ತಮುತ್ತಲಿನ ಮಾರ್ಗದಲ್ಲಿ  ಸಂಚರಿಸಿ ಭಜನೆ ಕಾರ್ಯಕ್ರಮ ಮುಂದುವರೆಸಿಕೊಂಡು ಹೋಗಿ ಇತರರಿಗೆ ಮಾದರಿಯಾಗಿದ್ದಾರೆ ಎಂದರು.

ಮಂಗಲೋತ್ಸವ  ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಗೌರವಾಧ್ಯಕ್ಷ ಡಿ.ಬಿ.ನಾಯ್ಕ, ಕಾರ್ಯದರ್ಶಿ ರಾಜೇಶ ನಾಯ್ಕ  ಸದಸ್ಯರಾದ ಎಸ್.ಎಂ. ನಾಯ್ಕ,  ವಿನಾಯಕ ನಾಯ್ಕ,ವೆಂಕಟೇಶ ನಾಯ್ಕ ತಲಗೋಡು, ಪ್ರಮುಖರಾದ  ಶ್ರೀಧರ ನಾಯ್ಕ, ಈರಪ್ಪ ನಾಯ್ಕ, ನಾರಾಯಣ ನಾಯ್ಕ, ಕೃಷ್ಣ ನಾಯ್ಕ, ವೆಂಕಟೇಶ ನಾಯ್ಕ, ಯುವಕ ಮಂಡಳದ ಅಧ್ಯಕ್ಷರಾದ ಮನೋಜ ನಾಯ್ಕ ಹಾಗೂ ಇತರರು ಉಪಸ್ಥಿತರಿದ್ದರು.ಭಜನಾ ಸ್ಫಧೆಯ ನಿರ್ಣಾಯಕರಾಗಿ ಗಂಗಾಧರ ನಾಯ್ಕ,ಜಿ.ಎಂ. ಗೊಂಡ, ಚಂದ್ರು ನಾಯ್ಕ ಸಹಕರಿಸಿದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...