ಯಶಸ್ವಿಯಾಗಿ ನೆರವೇರಿದ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆಶಿಬಿರ

Source: sonews | By Staff Correspondent | Published on 15th March 2018, 1:03 AM | Coastal News | Don't Miss |

ಮುರುಡೇಶ್ವರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ , ಅಂಧತ್ವ ನಿಯಂತ್ರಣ ವಿಭಾಗ, ಕಾರವಾರ, ಆರ್.ಎನ್.ಎಸ್. ಆಸ್ಪತ್ರೆ,ಮುರ್ಡೇಶ್ವರ ,ಸಿ.ಡಿ.ಟಿ.ಪಿ ಯೋಜನೆ ಆರ್.ಎನ್.ಎಸ್ ಪಾಲಿಟೆಕ್ನಿಕ್ ಮುರ್ಡೇಶ್ವರ, ಲಯನ್ಸ್ ಕ್ಲಬ್ ಮುರ್ಡೇಶ್ವರ, ಐ.ಎಮ್.ಎ.ಭಟ್ಕಳ, ಹಾಗೂ ಲಾಯನ್ಸ್ ರೇವಣಕರ್ ಕಣ್ಣಿನ ಆಸ್ಪತ್ರೆ, ಕುಮಟಾ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ಯಶಸ್ವಿಯಾಯಿತು.

ಲಾಯನ್ಸ್ ರೇವಣಕರ್ ಕಣ್ಣಿನ ಆಸ್ಪತ್ರೆಯ ತಜ್ಞ ವೈದ್ಯರಿಂದ  ನಡೆದ ಉಚಿತ  ಕಣ್ಣಿನ ಪೊರೆ ತಪಾಸಣಾ ಮತ್ತು ಶಸ್ತ್ರ ಚಿಕಿತಾ ಶಿಬಿರದಲ್ಲಿ  52 ಜನರು   ಭಾಗವಹಿಸಿದ್ದರು. ಇವರ ಪೈಕಿ  7 ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು  ಲಾಯನ್ಸ್ ರೇವಣಕರ್ ಕಣ್ಣಿನ ಆಸ್ಪತ್ರೆ ಕುಮಟಾದಲ್ಲಿ ಯಶಸ್ವಿಯಾಗಿ ಮಾಡಿಸಿ, ಉಚಿತ ಕನ್ನಡಕ ಊಟ ಉಪಹಾರ ನೀಡಿ ನಂತರ ಅವರವರ ಊರಿಗೆ  ಕಳುಹಿಸಿಕೊಡಲಾಯಿತು. 

ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಾದ 7 ಜನ ಫಲಾನುಭವಿಗಳೊಂದಿಗೆ, ಶಿಬಿರವನ್ನು ಸಂಘಟಿಸಿದ ಲಯನ್ಸ್ ಕ್ಲಬ್ ನ ಅಧ್ಯಕ್ಷ ಮಂಜುನಾಥ ನಾಯ್ಕ, ಆರ್.ಎನ್.ಎಸ್. ಹಾಸ್ಪಿಟಲ್ ನ  ಮೆಡಿಕಲ್  ಡೈರೆಕ್ಟರ್ ಚೇತನ ಕಲ್ಕೂರ್, ಲಯನ್ಸ್ ಪದಾಧಿಕಾರಿಗಳಾದ ಡಾ. ವಾದಿರಾಜ ಭಟ್ ,ಸುಬ್ರಾಯ ನಾಯ್ಕ , ಡಾ. ಹರಿಪ್ರಸಾದ  ಕಿಣಿ, ಮಂಜುನಾಥ ದೇವಡಿಗ , ಆರ್.ಎನ್.ಶೇಟ್  ಹಾಗೂ ಸಮುದಾಯ ಅಭಿವೃದ್ಧಿ ಯೋಜನೆಯ  ಕೆ. ಮರಿಸ್ವಾಮಿ   ಉಪಸ್ಥಿತರಿದ್ದರು. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...