ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯ ಶೇ.100ರಷ್ಟು  ಫಲಿತಾಂಶ

Source: sonews | By Staff Correspondent | Published on 5th December 2018, 12:30 AM | Coastal News | Don't Miss |

ಭಟ್ಕಳ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಬಿ.ಇಡಿ ಪ್ರಥಮ ಹಾಗೂ ತೃತೀಯ ಸೆಮಿಸ್ಟರ್‍ನ ಫಲಿತಾಂಶ ಪ್ರಕಟಿಸಿದ್ದು ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ್ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯ ಶೇ.100ರಷ್ಟು  ಫಲಿತಾಂಶ ದಾಖಲಿಸಿದೆ. 

ಪ್ರಥಮ ಸೆಮಿಸ್ಟರ್‍ನ ವಿದ್ಯಾ ಶಂಕರ ನಾಯ್ಕ ಶೇ.87, ಭಾಗ್ಯಶ್ರೀ ನಾರಾಯಣ ನಾಯ್ಕ ಶೇ.85.83 ಹಾಗೂ ಶೃದ್ಧಾ ದಾಮೋದರ ನಾಯ್ಕ ಶೇ.85.33 ಅಂಕಗಳಿಸಿ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ್ದಾರೆ. ತೃತೀಯ ಸೆಮಿಸ್ಟರ್‍ನಲ್ಲಿ ಸಂಗೀತಾ ಕೆ. ಆರ್. ಶೇ.91.17, ಕವಿತಾ ವಿಷ್ಣು ನಾಯ್ಕ ಶೇ.89.83, ಅಶ್ವಿನಿ ಶ್ರೀಧರ ನಾಯ್ಕ ಹಾಗೂ ಫರ್ಜಾನಾ ಶಿಲಾರ ಶೇ.89.67 ಅಂಕಗಳಿಸಿ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ್ದಾರೆ. 

ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಮಹಾವಿದ್ಯಾಲಯದ ಸಾಧನೆಗೆ ಭಟ್ಕಳ ಎಜ್ಯುಕೇಶನ ಟ್ರಸ್ಟಿನ ಅಧ್ಯಕ್ಷ  ಡಾ. ಸುರೇಶ ನಾಯಕ, ಮ್ಯಾನೆಜಿಂಗ್  ಟ್ರಸ್ಟೀ ಆರ್. ಜಿ. ಕೊಲ್ಲೆ, ಟ್ರಸ್ಟೀ ಮ್ಯಾನೇಜರ ರಾಜೇಶ ನಾಯಕ, ಆಡಳಿತ ಅಧಿಕಾರಿ ನಾಗೇಶ ಭಟ್, ಪ್ರಾಂಶುಪಾಲ ಡಾ. ಆರ್. ನರಸಿಂಹಮೂರ್ತಿ ಅಭಿನಂದಿಸಿದ್ದಾರೆ. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...