ಫೆ.21 ಶಿರಾಲಿಯಲ್ಲಿ ‘ಹಲವು ಧರ್ಮಗಳು ಒಂದು ಭಾರತ’ ಸೌಹಾರ್ಧ ಸಮಾವೇಶ

Source: sonews | By Staff Correspondent | Published on 19th February 2018, 12:35 AM | Coastal News | Don't Miss |


ಭಟ್ಕಳ: ಶಿರಾಲಿಯ ಸಮಸ್ತ ಹಿಂದೂ,ಮುಸ್ಲಿಮ್ ಕ್ರೈಸ್ತ ಸಮಾಜ ಬಾಂಧವರ ಸಹಕಾರದೊಂದಿಗೆ ಫೆ.21 ರಂದು ಸಂಜೆ 4.30ಗಂಟೆಗೆ ಶಿರಾಲಿ ಜನತಾ ವಿದ್ಯಾಲಯ ಪ್ರೌಢಶಾಲಾ ಮೈದಾನದಲ್ಲಿ  ‘ಹಲವು ಧರ್ಮಗಳು ಒಂದು ಭಾರತ’ ಸೌಹಾರ್ಧ ಸಮಾವೇಶ ಆಯೋಜಿಸಲಾಗಿದೆ ಎಂದು ಸೌಹಾರ್ಧ ಸಮಾವೇಶ ಸ್ವಾಗತ ಸಮಿತಿ ಅಧ್ಯಕ್ಷ ಡಿ.ಜೆ.ಕಾಮತ್ ಹಾಗೂ ಸಂಚಾಲಕ ಎಂ.ಆರ್.ಮಾನ್ವಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಜಮಾಅತುಲ್ ಮುಸ್ಲಿಮೀನ್ ಶಿರಾಲಿ ಹಾಗೂ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆ ಜಂಟಿಯಾಗಿ ಆಯೋಜಿಸಿರುವ ಈ ಸಮಾವೇಶದಲ್ಲಿ ಧರ್ಮಸ್ಥಳದ ಶ್ರೀರಾಮಕ್ಷೇತ್ರದ ಶ್ರೀಗಳಾದ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿ, ಮುಂಡಳಿ ಚರ್ಚ್‍ನ ಧರ್ಮಗುರುಗಳಾದ ಫಾದರ್ ನಿಕೋಲಸ್ ಡಿಸೋಜಾ ಹಾಗೂ ಮಂಗಳೂರು ಶಾಂತಿ ಪ್ರಕಾಶನ ಸಂಸ್ಥೆಯ ವ್ಯವಸ್ಥಾಪಕ ಮುಹಮ್ಮದ್ ಕುಂಞ ಸೌಹಾರ್ಧ ಸಂದೇಶ ನೀಡಲಿದ್ದಾರೆ.

 ವೇದಿಕೆಯಲ್ಲಿ ಡಿ.ಜೆ. ಕಾಮತ್ ಅಧ್ಯಕ್ಷರು ಜನತಾವಿದ್ಯಾಲಯ ಶಿರಾಲಿ, ಅನಂತ್ ನಾಯ್ಕ ಧರ್ಮದರ್ಶಿಗಳು, ನಾರಾಯಣ ದೈಮನೆ ಧರ್ಮದರ್ಶಿಗಳು ಶ್ರೀ ಅಳ್ವೆಕೋಡಿ ದೇವಸ್ಥಾನ,ಬಿ.ಕೆ.ನಾಯ್ಕ ಅಧ್ಯಕ್ಷರು ನಾಮಧಾರಿ ಸಂಘ ಶಿರಾಲಿ, ಎಂ.ಆರ್.ನಾಯ್ಕ ಅಧ್ಯಕ್ಷರು ನಾಮಧಾರಿ ಸಂಘ ಭಟ್ಕಳ, ಮೌಲಾನ ನಾಸಿರುಲ್ ಇಸ್ಲಾಮ್ ನದ್ವಿ ಧರ್ಮ ಗುರುಗಳು ಶಿರಾಲಿ, ಮುಜಾಹಿದ್ ಮುಸ್ತಫಾ ಅಧ್ಯಕ್ಷರು ಜ.ಇ.ಹಿಂದ್ ಭಟ್ಕಳ, ಕ್ವಾಜಾ ಶೇಖ್ ಅಧ್ಯಕ್ಷರು ರಹ್ಮಾನಿಯ ಮಸೀದಿ ಪಳ್ಳಿಹಕ್ಕಲ್ ಶಿರಾಲಿ,  ಮುಹಿದ್ದೀನ್ ಸಾಹೇಬ್ ಅಧ್ಯಕ್ಷರು ಅಲಿಮಿಯಾ ಮಸೀದಿ ಗುಡಿಹಿತ್ತಲ್ ಶಿರಾಲಿ, ತಲ್ಹಾ ಸಿದ್ದಿಬಾಪ ಜಿ.ಸಂಚಾಲಾಕರು ಜ.ಇ. ಹಿಂದ ಉತ್ತರಕನ್ನಡ, ಎ.ಬಿ.ರಾಮರಥ ಪ್ರಾಂಶುಪಾಲರು ಜೆ.ವಿ.ಶಿರಾಲಿ,  ವೆಂಕಟೇಶ್ ನಾಯ್ಕ ಅಧ್ಯಕ್ಷರು ಗ್ರಾ.ಪಂ.ಶಿರಾಲಿ ಹಾಗೂ ಸಾಹಿತಿಗಳು ಹಾಗೂ ಸಮಾಜ ಸೇವಕರಾದ ಡಾ.ಆರ್.ವಿ.ಸರಾಫ್ ಉಪಸ್ಥಿತರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.  

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...