ಸ್ಥಳೀಯರ ದೂರಿನನ್ನ ಬಾಲ್ಯವಿವಾಹಕ್ಕೆ ಬ್ರೇಕ್ ಹಾಕಿದ ಶಿಶು ಅಭಿವೃದ್ಧಿ ಇಲಾಖೆ

Source: sonews | By Staff Correspondent | Published on 6th December 2018, 12:24 AM | Coastal News | Don't Miss |

ಭಟ್ಕಳ: ಇಲ್ಲಿನ ಯಲ್ವಡಿಕವೂರ ಗ್ರಾಮಪಂಚಾಯತ ವ್ಯಾಪ್ತಿಯ ಗಣೇಶ ನಗರದ ನಿವಾಸಿ ಸಹದೇವ ರಾಜಪ್ಪ ಬುಗಡಿ ಎಂಬುವವರ 14 ವರ್ಷ ಮಗಳಿಗೆ ಹುಬ್ಬಳ್ಳಿಯಲ್ಲಿನ ಅವರ ಅಕ್ಕನ ಮಗನೊಂದಿಗೆ ಒಂದು ತಿಂಗಳ ಹಿಂದೆ ಬಾಲ್ಯ ವಿವಾಹ ನಿಶ್ವಯವಾಗಿರುವ ಬಗ್ಗೆ ಊರಿನವರಿಂದ ಬಂದ ದೂರಿನ್ವಯ ಪ್ರಭಾರ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಸುಶೀಲಾ ಮೊಗೇರ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದ ನಿಶ್ಛಯವಾದ ಮದುವೆಯನ್ನು ನಿಲ್ಲಿಸಿರುವದು ತಡವಾಗಿ ಬೆಳಕಿಗೆ ಬಂದಿದೆ.

ಈ ಭಾಗದ ಸ್ಥಳಿಯರು ನೀಡಿದ ಮಾಹಿತಿಯನ್ನಾಧರಿಸಿ ನಿಶ್ಚಯವಾದ ಬಾಲ್ಯ ವಿವಾಹದ ಮನೆಗೆ ನೀಡಿದ ಪ್ರಭಾರೆ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಸುಶೀಲಾ ಮೊಗೇರ, ವಲಯ ಮೇಲ್ವಿಚಾರಕಿ, ಸಾಂತ್ವನ ಮಹಿಳಾ ಕೇಂದ್ರದ ಆಪ್ತ ಸಮಾಲೋಚಕಿ, ಶಾಲಾಶಿಕ್ಷಕರು ಹಾಗೂ ಮಹಿಳಾ ಪೊಲೀಸ್ ಸಿಬ್ಬಂದಿಯೊಂದಿಗೆ ಸಹದೇವ ರಾಜಪ್ಪ ಬುಗಡಿ ಮನೆಗೆ ತಂಡ ಭೇಟಿ ಕೊಟ್ಟಿದ್ದಾರೆ.  

ಬಾಲ್ಯ ವಿವಾಹದ ಬಗ್ಗೆ ಅಧಿಕಾರಿಗಳು ಅವರು ಮನೆಗೆ ಭೇಟಿ ನೀಡಿ ವಿಚಾರಿಸಿದ್ದಾಗ ಹುಬ್ಬಳ್ಳಿ ಮೂಲದ ಹೆಗ್ಗೇರಿ ಜಗದೀಶ ನಗರದ ಗಣೇಶ ರಜಕ ಪ್ರಾನ್ಸನ್ 22 ವರ್ಷದ ಯುವಕನೊಂದಿಗೆ ನವೆಂಬರ್ 6ರಂದು ಮನೆಯವರ ಸಮ್ಮೂಖದಲ್ಲಿ ಹುಬ್ಬಳ್ಳಿಯ ಇಂಡಿ ಪಂಪ ಅಸ್ರೋಣಿ ಎಂಬಲ್ಲಿ ವಿವಾಹ ನಿಶ್ಛಯಿಸಿರುವ ಬಗ್ಗೆ ತಿಳಿದು ಬಂದಿದೆ. ಹುಡುಗಿಯೂ ನವೆಂಬರ 24ರಂದು ಶಾಲೆಗೆ ಹೋಗದೇ ಇದ್ದ ಹಿನ್ನೆಲೆ ಶಾಲಾ ಶಿಕ್ಷಕರು ಗೈರು ಹಾಜರಾದ ಬಗ್ಗೆ ಮನೆಗೆ ಬಂದು ವಿಚಾರಿಸಿದ್ದು, ಹುಡುಗಿ ನಾನು 2 ವಾರದ ನಂತರ ಶಾಲೆಗೆ ಬರುತ್ತೇನೆಂದು ಹೇಳಿರುವ ಬಗ್ಗೆ ಮನೆಯವರು ಶಿಕ್ಷಕರಿಗೆ ತಿಳಿಸಿ ಹುಡುಗಿಯನ್ನು ಹುಬ್ಬಳ್ಳಿಯ ದೊಡ್ಡಪ್ಪನ ಮನೆಗೆ ಕಳುಹಿಸಿರುವ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. 

ಈ ಬಗ್ಗೆ ಇಲಾಖೆ ಅಧಿಕಾರಿಗಳು ಬಾಲ್ಯ ವಿವಾಹದ ಬಗ್ಗೆ ಕಾನೂನಿನ ಸಂಪೂರ್ಣ ಮಾಹಿತಿ, ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ ಹಾಗೂ ಅದರಿಂದಾಗುವ ದುಷ್ಪರಿಣಾಮದ ಬಗ್ಗೆ ಕುಟುಂಬದವರಿಗೆ ನೀಡಿ ಹುಡುಗಿಯ ಪೋಷಕರು ತಾವು ತನ್ನ ಮಗಳಿಗೆ 18ವರ್ಷ ತುಂಬಿದ ಮೇಲೆಯೆ ಮದುವೆ ಮಾಡುತ್ತೇವೆಂದು ಮುಚ್ಚಳಿಕೆ ಪತ್ರವನ್ನು ಬರೆಯಿಸಿಕೊಂಡಿದ್ದಾರೆ. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...