ಭಟ್ಕಳ: ಕಡಿಮೆ ಬೆಲೆಗೆ ಕಾಮಗಾರಿ ನಡೆಸುವ ಗುತ್ತಿಗೆದಾರರ ಬಗ್ಗೆ ತಾಲೂಕ ಗುತ್ತಿಗೆದಾರರ ಸಂಘದಿಂದ ಆಕ್ರೋಶ, ಕಛೇರಿಗೆ ಮುತ್ತಿಗೆ

Source: so english | By Arshad Koppa | Published on 26th October 2016, 8:36 PM | Coastal News | Don't Miss |

ಭಟ್ಕಳ, ಅ ೨೫: ಭಟ್ಕಳದಲ್ಲಿ ಕೆಲವು ಗುತ್ತಿಗೆದಾರರು ಸರಕಾರದ ನಿಗದಿತ ದರಕಿಂತ ಅತಿಕಡಿಮೆ ಬೆಲೆಗೆ ಕಾಮಗಾರಿಯನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ಇಂದು ಭಟ್ಕಳ ತಾಲೂಕ ಗುತ್ತಿಗೆದಾರರ ಸಂಘದಿಂದ  ಲೋಕೋಪಯೋಗಿ ಇಲಾಖೆಯ ಕಛೇರಿಗೆ ಮುತ್ತಿಗೆಹಾಕಿ ಆಕ್ರೋಶವನ್ನು ವ್ಯಕ್ತಪಡಿಸಿದರು.


ಭಟ್ಕಳದ ಕೆಲವು ಗುತ್ತಿಗೆದಾರರು ತಾವು ಕಾಮಗಾರಿಯ ಟೆಂಡರ್ ಪಾರ್ಮ ಅನ್ನು ಭರ್ತಿಮಾಡುವ ಸಂದರ್ಬದಲ್ಲಿ ಸರಕಾರ ನಿಗದಿಮಾಡಿರುವ ದರಕಿಂತ ಅತಿ ಕಡಿಮೆ ದರವನ್ನು ನಮೂದಿಸಿ ಕಾಮಗಾರಿಯನ್ನು ನಡೆಸುತ್ತಿದ್ದಾರೆ ಇದರಿಂದಾಗಿ ಕಾಮಗಾರಿಗಳು ತುಂಬ ಕಡಿಮೆ ಗುಣಮಟ್ಟವನ್ನು ಹೊಂದುತ್ತವೆ ಮತ್ತು ಈ ಕಾಮಗಾರಿಗಳಿಂದ ಸರಕಾರಕ್ಕೆ ನಷ್ಟವುಂಟಾಗುತ್ತದೆ ಹಾಗು ಭಟ್ಕಳ ಗುತ್ತಿಗೆದಾರರು ಕೆಟ್ಟ ಹೆಸರನ್ನು ಪಡೆಯುವಂತಾಗುತ್ತದೆ ಈ ಹೀನ್ನೆಲೆಯಲ್ಲಿ ಆಕ್ರೋಶಿತರಾದ ಭಟ್ಕಳ ತಾಲೂಕ ಗುತ್ತಿಗೆದಾರರ ಸಂಘದವರು ಭಟ್ಕಳದ ಲೋಕೋಪಯೋಗಿ ಇಲಾಖೆಯ ಕಛೇರಿಗೆ  ಮುತ್ತಿಗೆ ಹಾಕಿದರು ಈ ಸಂದರ್ಬದಲ್ಲಿ ತಾಲೂಕ ಸಂಘದ ಅಧ್ಯಕ್ಷರಾದ ತಿಮ್ಮಪ್ಪ ದೇವಪ್ಪ ನಾಯ್ಕ ಮಾತನಾಡಿ ಭಟ್ಕಳ ತಾಲೂಕ ಗುತ್ತಿಗೆದಾರರ ಸಂಘದ ಎಲ್ಲಾ ಸದಸ್ಯರ ವಿಶ್ವಾಸವನ್ನು ಗಳಿಸಿ ನಾವು ಈ ಪ್ರತಿಭಟನೆಯನ್ನು ಮಡುತ್ತಿದ್ದೆವೆ ನಮ್ಮ ಗುತ್ತಿಗೆದಾರರಲ್ಲಿ ಕೆಲವು ಗುತ್ತಿಗೆದಾರರು ಸರಕಾರ ನಿಗದಿಪಡಿಸಿರುವ ದರಕಿಂತ ಅತಿಕಡಿಮೆ ದರದಲ್ಲಿ ಕಾಮಗಾರಿಯನ್ನು ನಡೆಸುತ್ತಿದ್ದಾರೆ ಅಂದರೆ 20 25%, 30 35% ಕಡಿಮೇ ದರದಲ್ಲಿ ಕಾಮಗಾರಿಯನ್ನು ನಡೆಸುತ್ತಿದ್ದಾರೆ ಇದರಿಂದ ನಮಗೆ ತುಂಬ ತೊಂದರೆಯಾಗುತ್ತಿದ್ದೆ ನಮ್ಮ ಉದ್ದೇಶ ಕಾಮಗಾರಿಯನ್ನು ಉತ್ತಮ ಗುಣಮಟ್ಟದಲ್ಲಿ ಮಾಡುವುದಾಗಿದೆ ಈಗಿಗ ಕಾಮಗಾರಿ ನಡೆಸಲು ಮರಳು ಮತ್ತು ಜಲ್ಲಿಗಳು ಸರಿಯಾಗಿ ಸಿಗುತ್ತಿಲ್ಲಾ ಹೀಗಿರುವಾಗ ಗುತ್ತಿಗೆದಾರರು  ಸರಕಾರ ನಿಗದಿಪಡಿಸಿರುವ ದರಕಿಂತ ಅತಿಕಡಿಮೆ ದರದಲ್ಲಿ ಕಾಮಗಾರಿಯನ್ನು ಕಾಮಗಾರಿಯನ್ನು ನಡೆಸುದರಿಂದ ಉಳಿದ ಗುತ್ತಿಗೆದಾರರಾದ ನಮಗೆ ತುಂಬ ತೊಂದರೆ ಉಂಟಾಗುತ್ತಿದ್ದೆ ಇದರಿಂದ ಅಧಿಕಾರಿಗಳು ಇಂತ ಕಡಿಮೆ ದರದಲ್ಲಿ ಕಾಮಗಾರಿ ನಡೆಸದಂತೆ ತಡೆಯಬೇಕು ಹಾಗು ಕಳಪೆ ಕಾಮಗಾರಿ ಬಗ್ಗೆಯು ಅಧಿಕಾರಿಗಳು ಗಮನ ಹರಿಸಬೇಕು ಎಂದು ಹೇಳಿದರು.


ಈ ಸಂದರ್ಬದಲ್ಲಿ ಸಂಘದ ಕಾರ್ಯದಶಿ ಅಶ್ರಪ್ ಗೌರವಾಧ್ಯಕ್ಷ ಮಾದೇವ ಭಟ್, ಜಿಲ್ಲಾ ಸಂಘದ ಪ್ರತಿನಿದಿ ನಾರಾಯಣ ನಾಯ್ಕ, ಸಂಘದ ಪ್ರಮುಖರಾದ ಸತೀಶ ಕುಮಾರ ನಾಯ್ಕ, ಬಾಸ್ಕರ್ ಮೋಗೇರ ಹಾಗು ಮತ್ತಿತರರು ಉಪಸ್ಥಿತರಿದ್ದರು.
 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...