ಮೀನುಗಾರಿಕೆ ತೆರಳಿದ ವ್ಯಕ್ತಿ ಸಾವು 

Source: S.O. News Service | By Manju Naik | Published on 15th August 2018, 7:01 PM | Coastal News | Don't Miss |

ಭಟ್ಕಳ: ಗಂಗೋಳ್ಳಿಯಿಂದ ಮೀನುಗಾರಿಕೆಗೆ ತೆರಳಿದ್ದ ಭಟ್ಕಳದ ಬೆಳಕೆ ಮೊಗೇರಕೇರಿಯ ಯುವಕ ಮಂಜುನಾಥ ತಿಮ್ಮಪ್ಪ ಮೊಗೇರ (32) ಈತನು ಕಾಲು ಜಾರಿ ಅಕಸ್ಮಾತ್ ನೀರಿಗೆ ಬಿದ್ದು ಮೃತ ಪಟ್ಟಿರುವ ಕುರಿತು ವರದಿಯಾಗಿದೆ. 

ಗಂಗೊಳ್ಳಿಯ ಮ್ಯಾಂಗನೀಸ್ ರೋಡ್ ಬಂದರಿನಲ್ಲಿ ಸಿದ್ಧಿವಿನಾಯಕ ಬೋಟ್‍ನಲ್ಲಿ ಕೆಲಸ ಮಾಡಿಕೊಂಡಿದ್ದು ಮಂಗಳವಾರ ಮೀನುಗಾರಿಕೆಗೆ ತೆರಳುವ ಸಿದ್ದತೆಯಲ್ಲಿ ರಾತ್ರಿ 8.20ರ ಸುಮಾರಿಗೆ ಪೇಟೆಗೆ ಹೋಗಿ ಬರಲು ಬೋಟಿನಿಂದ ನಾಲ್ಕೈದು ಬೋಟುಗಳನ್ನು ದಾಟಿ ಬರುವಾಗ ಬೋಟಿನಿಂದ ಇನ್ನೊಂದು ಬೋಟಿಗೆ ಹೋಗುತ್ತಿರುವಾಗ ಅಕಸ್ಮಾತ್ ಕಾಲು ಜಾರಿ ಪಂಚಗಂಗಾವಳಿ ನದಿಗೆ ಬಿದ್ದು,   ಬುದುವಾರ ಕುಂದಾಪುರ ಗೊಪಾಡಿ ಎಂಬಲ್ಲಿ ಮೃತದೇಹ ಪತ್ತೆಯಾಗಿದೆ.ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Read These Next

ಪಟ್ಟಣದವಾಸಿಗಳೆ ಎಚ್ಚರ  ಬೀದಿಯಲ್ಲಿ ಬೌ ಬೌ ಸದ್ದು ಎಚ್ಚರ ತಪ್ಪಿದರೂ ನಾಯಿ ಕಡಿತ. ಕೈಕಟ್ಟಿ ಕುಳಿತಿರುವ ಪುರಸಭೆ ಅಧಿಕಾರಿಗಳು

ಶ್ರೀನಿವಾಸಪುರ: ಪಟ್ಟಣದವಾಸಿಗಳೆ ಎಚ್ಚರ  ಪಟ್ಟಣದ ಹಾದಿ ಬೀದಿಯಲ್ಲಿ ಈಗ ಬೌ ಬೌ ಸದ್ದು. ಸ್ವಲ್ಪ ಎಚ್ಚರ ತಪ್ಪಿದರೂ ನಾಯಿ ಕಡಿತ ...

ಗೊಂದಲ ನಿವಾರಿಸಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಹಿಜುವನಹಳ್ಳಿ ಗ್ರಾಮಸ್ಥರ ಮನವಿ

ಹಿಜುವನಹಳ್ಳಿ ಗ್ರಾಮದಲ್ಲಿ ಸುಮಾರು 130 ಮನೆಗಳು ಇದ್ದು, 600ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ, ನೂರಾರು ವರ್ಷಗಳಿಂದ ಯಾರ ನಡುವೆಯೂ ...