ನಿರಂತರ ಮಳೆಗೆ ಹೊಳೆಯಾಗಿ ಮಾರ್ಪಟ್ಟ ಭಟ್ಕಳ ಬಸ್ ನಿಲ್ದಾಣ

Source: sonews | By Staff Correspondent | Published on 26th June 2018, 6:48 PM | Coastal News | Don't Miss |

ಭಟ್ಕಳ: ಕಳೆದ ಮೂರು ದಿನಗಳಿಂದ ನಿರಂತರವಾಗಿ ಬೀಳುತ್ತಿರುವ ಮಳೆಯಿಂದಾಗಿ ನಗರದ ತಗ್ಗು ಪ್ರದೇಶಗಳು ಜಲಾವೃತ್ತಗೊಂಡಿದ್ದು ಭಟ್ಕಳದ ಬಸ್ ನಿಲ್ದಾಣ ಅಕ್ಷರಶಃ ಹೊಳೆಯಾಗಿ ಮಾರ್ಪಟ್ಟಿದೆ.

ಈ ಕುರಿತು ಸಾರ್ವಜನಿಕರು, ಸಮಾಜಸೇವಕರು ಅಧಿಕಾರಿಗಳಿಗೆ ಜನಪ್ರತಿನಿಧಿಗಳು ಹಲವಾರು ಬಾರಿ ಮನವಿ ಪತ್ರ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗದೆ ಪ್ರಯಾಣಿಕರು ಹಲವು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಬಸ್ ಬರುವ ಹೋಗುವ ಸಂದರ್ಭದಲ್ಲಿ ಪ್ರಯಾಣಿಕರ ಮೇಲೆ ಮಳೆಯ ರಾಡಿ ನೀರು ಬಟ್ಟೆ ಮೇಲೆ ಬಿದ್ದು ಒದ್ದೆಯಾಗಿರುವ ಎಷ್ಟೋ ಘಟನೆಗಳು ನಡೆದಿವೆ. ಇದರಿಂದಾಗಿ ಹೊರ ಊರಿಗೆ ತೆರಳುವ ಪ್ರಯಾಣಿಕರು ಪೇಚಾಡಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ.

ಇದೆ ಬಸ್ ನಿಲ್ದಾಣದಲ್ಲಿ ನಿರ್ಮಾಣಗೊಂಡಿರುವ ಕೃತಕ ಹೊಳೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಸಮಾಜಿಕ ಕಾರ್ಯಕತರಾದ ಮುಸ್ಬಾಉಲ್ ಹಕ್, ಅಬ್ದುಲ್‌ ರಬಿ ರುಕ್ನುದ್ದೀನ್ ಸನಾವುಲ್ಲಾ ಸೇರಿದಂತೆ ಹಲವರು ಕಾಗದ ದೋಣಿ ಹಾಯ್ದು ಹಾಗೂ ಮೀನು ಹಿಡಿಯುವ ಪ್ರಹಸನ ನಡೆಸಿ ಪ್ರತಿಭಟನೆ ಮಾಡಿದ್ದನ್ನು ಸ್ಮರಿಸಿಕೊಳ್ಳಬಹುದು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...