ಬೆಂಗಳೂರು: ಅಮೇರಿಕಾದಲ್ಲಿ ಕಾರ್ಮಿಕ ವೀಸಾ ಸಮಸ್ಯೆ ಎದುರಿಸುತ್ತಿರುವವರಿಗೆ ನೆರವು ನೀಡಲು ಮನವಿ ಸಲ್ಲಿಕೆ

Source: varthabhavan | By Arshad Koppa | Published on 15th September 2017, 1:05 PM | National News | Don't Miss |

ವಿದೇಶದಲ್ಲಿ ವ್ಯಾಸಂಗ ಮಾಡಲು ಶೈಕ್ಷಣ ಕ ಸಾಲ ಪಡೆದು ಅಮೇರಿಕಾಗೆ ತೆರಳುತ್ತಿರುವ ಕರ್ನಾಟಕದ ಯುವಕರು ವಿದ್ಯಾಭ್ಯಾಸದ ನಂತರ ಅಲ್ಲಿಯೇ ಉದ್ಯೋಗ ಕಂಡುಕೊಂಡು ಆ ಮುಖಾಂತರ ಶೈಕ್ಷಣಿಕ ಸಾಲವನ್ನ ತೀರಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅಂತಹ ಯುವಕರಿಗೆ ಸ್ಥಳೀಕವಾಗಿ ಕೆಲ ಆಡಳಿತಾತ್ಮಕ ಸಮಸ್ಯೆಗಳಿಂದಾಗಿ ಕೆಲಸಗಳು ದೊರಕಿಸಿಕೊಳ್ಳುವುದು ಕಷ್ಟಸಾಧ್ಯವಾಗುತ್ತಿರುವ ಕುರಿತು ಹೆಚ್ಚು ದೂರುಗಳು ಕೇಳಿಬರುತ್ತಿತ್ತು, ಅದರಲ್ಲೂ ವಿಶೇಷವಾಗಿ ಕಾರ್ಮಿಕ ವೀಸಾ ಸಮಸ್ಯೆ. 

ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಡಾ. ಆರತಿ ಕೃಷ್ಣ, ಉಪಾಧ್ಯಕ್ಷರು ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಸರ್ಕಾರ ಇವರು ದಿನಾಂಕ 12-09-2017ರಂದು ಅಮೇರಿಕಾದ ವಿದೇಶಾಂಗ ವ್ಯವಹಾರಗಳ ಅಧ್ಯಕ್ಷರು ಹಾಗೂ ಕಾಂಗ್ರೆಸ್‍ಮನ್ ಆದ ಶ್ರೀಯುತ ಎಡ್ ರಾಯ್ಸ್ ರವರನ್ನ ಅವರ ಕ್ಯಾಲಿಫೋರ್ನಿಯಾದ ಅಲೆಕ್ಸಾಂಡ್ರಿಯಾ ಗೃಹ ಕಛೇರಿಯಲ್ಲಿ ಭೇಟಿ ಮಾಡಿ ಅನಿವಾಸಿ ಭಾರತೀಯ/ಕನ್ನಡಿಗ ಯುವಕರ ಸಮಸ್ಯೆಗೆ ಸೂಕ್ತ ಆಡಳಿತಾತ್ಮಕ ಪರಿಹಾರ ಹಾಗೂ ಅನಿವಾಸಿ ಕನ್ನಡಿಗರೊಂದಿಗೆ ವಿವಾಹವಾದ ಸಂಧರ್ಭದಲ್ಲಿ ವಿವಾಹಿತ ಹೆಣ್ಣು ಮಕ್ಕಳಿಗೆ ವೀಸಾವನ್ನು ಶೀಘ್ರಗತಿಯಲ್ಲಿ ನೀಡಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಈ ಸಂಧರ್ಭದಲ್ಲಿ ಅಮೇರಿಕಾದ ಅಧ್ಯಕ್ಷರಾದ ಶ್ರೀ ಡೊನಾಲ್ಡ್ ಟ್ರಂಪ್‍ರವರ ಸಲಹೆಗಾರರಾದ ಶ್ರೀಯುತ ಕೆ.ವಿ.ಕುಮಾರ್ ಹಾಗೂ ಅನಿವಾಸಿ ಭಾರತೀಯ ಸಮುದಾಯದ ಇತರೆ ಮುಖಂಡರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.
 
                                                                    
ಆಪ್ತ ಕಾರ್ಯದರ್ಶಿ,
ಅನಿವಾಸಿ ಭಾರತೀಯ ಸಮಿತಿ, ಕರ್ನಾಟಕ,
 ವಿಕಾಸಸೌಧ, ಬೆಂಗಳೂರು

ಕರ್ನಾಟಕ ಸರ್ಕಾರ
ಉಪಾಧ್ಯಕ್ಷರ ಆಪ್ತ ಕಾರ್ಯದರ್ಶಿ,                          
ದೂರವಾಣ : 080-22374818
ಅನಿವಾಸಿ ಭಾರತೀಯ ಸಮಿತಿ, ಕರ್ನಾಟಕ,    
22035076
ವಿಕಾಸಸೌಧ, ಬೆಂಗಳೂರು.                               
 

Read These Next

ಜೈಶ್ರೀರಾಂ ಹೇಳುವಂತೆ ಒತ್ತಾಯಿಸಿ ಮುಸ್ಲಿಮರನ್ನು ಥಳಿಸಿದ ದುಷ್ಕರ್ಮಿಗಳಿಂದ ಸಂತೃಸ್ತರನ್ನು ರಕ್ಷಿಸಿದ ಹಿಂದೂ ದಂಪತಿ

ಸಂತ್ರಸ್ತ ಇಮ್ರಾನ್ ಇಸ್ಮಾಯಿಲ್ ಪಟೇಲ್ ಹೋಟೆಲ್ ಉದ್ಯೋಗಿಯಾಗಿದ್ದು, ಬೆಳಗ್ಗೆ ಮನೆಗೆ ಹಿಂದಿರುಗುತ್ತಿದ್ದಾಗ ಬೇಗಂಪುರ ಪ್ರದೇಶದ ...

ಮೋದಿ ಸರ್ಕಾರ ಅವಧಿಯಲ್ಲಿ ’ಬೀಫ್’ ರಪ್ತು ಪ್ರಮಾಣದಲ್ಲಿ ಗರಿಷ್ಠ ಏರಿಕೆ; 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ಬೀಫ್ ರಫ್ತು

2014ರಲ್ಲಿ ಮೋದಿ ಸರಕಾರ ಅಧಿಕಾರ ವಹಿಸಿದಂದಿನಿಂದ ಎಮ್ಮೆ ಮಾಂಸದ ರಫ್ತು ಗಣನೀಯಾಗಿ ಹೆಚ್ಚಾಗಿದೆ. 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ...

ಹೊಸದಿಲ್ಲಿ:ಬಿಜೆಪಿ ರಾಷ್ಟ್ರೀಯ ಪ್ರ. ಸಂಘಟನಾ ಕಾರ್ಯದರ್ಶಿಯಾಗಿ ಕರ್ನಾಟಕ ಮೂಲದ ಬಿ.ಎಲ್ ಸಂತೋಷ್ ನೇಮಕ

ಹೊಸದಿಲ್ಲಿ: ಕಳೆದ 13 ವರ್ಷಗಳಿಂದ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಮಲಾಲ್ ಹುದ್ದೆ ತೊರೆದ ಹಿನ್ನೆಲೆಯಲ್ಲಿ ತೆರವಾದ ...

ಜು.27,28 ರಂದು ಭಟ್ಕಳದ ವೇಲ್ಪೇರ ಆಸ್ಪತ್ರೆಯಲ್ಲಿ ದೇಶದ ಖ್ಯಾತ ಹೃದ್ರೋಗ ತಜ್ಞರಿಂದ ಉಚಿತ ಹೃದಯ ತಪಾಸಣೆ ಶಿಬಿರ

ಕೇರಳದ ಪ್ರಖ್ಯಾತ ಮೈತ್ರಾ ಆಸ್ಪತ್ರೆ ಹಾಗು ವೆಲ್ಫೇರ್ ಆಸ್ಪತ್ರೆ ಭಟ್ಕಳ ಇದರ ಸಹಯೋಗದೊಂದಿಗೆ ಜುಲೈ 27 ಮತ್ತು 28ರಂದು ಉಚಿತ ಹೃದ್ರೋಗ್ರ ...

ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ:ದಿಟ್ಟ ನಿರ್ಧಾರದಂತೆ ವಿದ್ಯಾರ್ಥಿಗಳ ಪರಿಶ್ರಮ ಅವಶ್ಯಕ- ವೈದ್ಯ ದೇವೇಂದ್ರ ನಾಯ್ಕ'

ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ:ದಿಟ್ಟ ನಿರ್ಧಾರದಂತೆ ವಿದ್ಯಾರ್ಥಿಗಳ ಪರಿಶ್ರಮ ಅವಶ್ಯಕ- ವೈದ್ಯ ದೇವೇಂದ್ರ ನಾಯ್ಕ'