ಬಾಳೆಹೊನ್ನೂರು: ಹೂಲಿ ಹಿರಿಯ ಶ್ರೀಗಳ ಅಗಲಿಕೆಗೆ ರಂಭಾಪುರಿ ಜಗದ್ಗುರುಗಳ ಶೋಕ

Source: balanagoudra | By Arshad Koppa | Published on 20th February 2017, 8:15 AM | State News |

ರಂಭಾಪುರಿ ಪೀಠ (ಬಾಳೆಹೊನ್ನೂರು) - ಫೆಬ್ರುವರಿ-17: ಶುಕ್ರವಾರ ಲಿಂಗೈಕ್ಯರಾಗಿರುವ ಸವದತ್ತಿ ತಾಲೂಕು ಹೂಲಿ ಸಾಂಬಯ್ಯನವರಮಠದ ಹಿರಿಯ ಶ್ರೀಗಳಾದ ಷಟ್‍ಸ್ಥಲ ಬ್ರಹ್ಮಿ ಶ್ರೀಗುರು ಸಂಗಮೇಶ್ವರ ಶಿವಾಚಾರ್ಯ ಸ್ವಾಮಿಗಳ ಅಗಲಿಕೆಗೆ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಶ್ರೀಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಅವರು ಸವದತ್ತಿ ತಾಲೂಕಿನ ಹೂಲಿ ಗ್ರಾಮದ ಶ್ರೀ ಸಾಂಬಯ್ಯನವರಮಠದಲ್ಲಿ ಜರುಗಲಿರುವ ಹೂಲಿ ಶ್ರೀಗಳ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನಿಂದ ಆಗಮಿಸಿದ ಸಂದರ್ಭದಲ್ಲಿ ಮಾರ್ಗಮಧ್ಯೆ ಧಾರವಾಡದಲ್ಲಿ ಸಂತಾಪ ಸೂಚಕ ಸಂದೇಶವನ್ನು ಮಾಧ್ಯಮಗಳಿಗೆ ಬಿಡುಡೆಗೊಳಿಸಿದರು.
ವೀರಶೈವ ಧರ್ಮದ ಶ್ರೀ ಜಗದ್ಗುರು ಪಂಚಪೀಠಗಳ ಗುರುಪಂಪರೆಯನ್ನು ನಿರಂತರವಾಗಿ ಅನುಪಾಲನೆ ಮಾಡಿಕೊಂಡು ಬಂದಿದ್ದ ಶ್ರೀಗುರು ಸಂಗಮೇಶ್ವರ ಶಿವಾಚಾರ್ಯರು, ಧರ್ಮದ ಆಚರಣೆಗಳಲ್ಲಿ ಅಪಾರ ಬದ್ಧತೆ ಮತ್ತು ನಂಬಿಕೆಗಳನ್ನು ಹೊಂದಿದ್ದರು. ಅನುಷ್ಠಾನ ಮೂರ್ತಿಗಳಾಗಿದ್ದ ಶ್ರೀಗಳು, ಶ್ರೀರಂಭಾಪುರಿ ಪೀಠದ ಲಿಂಗೈಕ್ಯ ಜಗದ್ಗುರು ಪ್ರಸನ್ನರೇಣುಕ ವೀರಗಂಗಾಧರ ಶಿವಾಚಾರ್ಯ ಭಗವತ್ಪಾದರ ಹಾಗೂ ಲಿಂಗೈಕ್ಯ ಜಗದ್ಗುರು ಪ್ರಸನ್ನರೇಣುಕ ವೀರರುದ್ರಮುನಿದೇವ ಶಿವಾಚಾರ್ಯ ಭಗವತ್ಪಾದರ ಮಹಾಕೃಪೆಗೆ ಪಾತ್ರರಾಗಿದ್ದರು. ಕಲಘಟಗಿ ಹನ್ನೆರಡುಮಠದ ಲಿಂಗೈಕ್ಯ ಶ್ರೀಗಳಾದ ಶ್ರೀಮಡಿವಾಳ ಶಿವಾಚಾರ್ಯ ಸ್ವಾಮಿಗಳ ಒಡನಾಡಿಯಾಗಿ ಗೋಕರ್ಣ ಶ್ರೀಕ್ಷೇತ್ರದಲ್ಲಿ ವೀರಶೈವ ಮಠ ಸ್ಥಾಪನೆಗೆ ನಿರಂತರ ಶ್ರಮಿಸಿದ್ದನ್ನು ಮರೆಯುವಂತಿಲ್ಲ. ತಮ್ಮ ಶತಾಯುಷ್ಯವ ದಾಟಿದ ಸುದೀರ್ಘ ಜೀವನ ಪಯಣದಲ್ಲಿ ಆಚಾರ ಸಂಪನ್ನರಾಗಿ, ಶಿವಪಂಚಾಕ್ಷರಿ ಮಹಾಮಂತ್ರದ ಜಪಯಜ್ಞದಲ್ಲಿ ಅವರದು ಬಹುದೊಡ್ಡ ಸಾಧನೆಯಾಗಿತ್ತು. ತಮ್ಮ ತಪೋಬಲದಿಂದ ಭಕ್ತ ಸಂಕುಲದ ಅಭ್ಯದಯಕ್ಕೆ ಹೂಲಿ ಹಿರಿಯ ಶ್ರೀಗಳು ಸದಾ ಮಾರ್ಗದರ್ಶನ ಮಾಡಿದ್ದನ್ನು ಯಾರೂ ಮರೆಯುವಂತಿಲ್ಲ ಎಂದು ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಹೂಲಿ ಶ್ರೀಗಳ ಅಗಲಿಕೆಗೆ ಅ.ಭಾ.ವಿ.ಶಿ. ಸಂಸ್ಥೆ ಅಧ್ಯಕ್ಷರ ಸಂತಾಪ

   ಬೆಳಗಾಂ ಜಿಲ್ಲೆ ರಾಮದುರ್ಗ ತಾಲೂಕಿನ ಹೂಲಿ ಸಾಂಬಯ್ಯನವರ ಮಠದ ಶತಾಯುಷಿ ಪರಮಪೂಜ್ಯ ಸಂಗಮೇಶ್ವರ ಅಜ್ಜನವರು ಲಿಂಗೈಕ್ಯರಾದ ವಿಷಯ ತಿಳಿದು ಅತೀವ ದು:ಖವಾಗಿದೆ. ಹಳೆಯ ತಲೆಮಾರಿನ ಹಿರಿಯ ಜೀವ, ವಾಕ್ ಸಿದ್ಧಿಪುರುಷರು, ತಪೋನುಷ್ಠಾನ ಮೂರ್ತಿಗಳು ಆಗಿ ಭಕ್ತರ ಪ್ರೀತಿಯ ಗುರುಗಳಾಗಿ ಆ ಭಾಗದಲ್ಲಿ ವೀರಶೈವ ಧರ್ಮ ಪರಂಪರೆಯನ್ನು ಪಂಚಪೀಠಗಳ ಮಹಾಶಕ್ತಿಯಾಗಿ ಕಾರ್ಯವನ್ನು ಮಾಡಿ ಜನಾನುರಾಗಿಗಳಾಗಿ ಸೇವೆ ಸಲ್ಲಿಸಿದ ಪೂಜ್ಯರು, ಅವರ ಅಗಲಿಕೆ ವೀರಶೈವ ಧರ್ಮಕ್ಕೆ ಭರಿಸಲಾಗದ ನಷ್ಟ. ಅವರ ಆತ್ಮಕ್ಕೆ ಶಾಂತಿಸಿಗಲೆಂದು, ಸಮಾಜಕ್ಕೆ ಧೈರ್ಯವನ್ನು ಪಂಚಪೀಠಾಧೀಶ್ವರರು ಕರುಣ ಸಲೆಂದು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷರಾದ ಶ್ರೀ ಷ.ಬ್ರ. ವಿಮಲ ರೇಣುಕವೀರಮುಕ್ತಿಮುನಿ ಶಿವಾಚಾರ್ಯರು ಸಂತಾಪ ಸೂಚಿಸಿದ್ದಾರೆ.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...