'ನೆಮ್ಮದಿ ಕೇಂದ್ರಕ್ಕೆ ಸಹಾಯಕ ಆಯುಕ್ತರ ಭೇಟಿ- ಕೇಂದ್ರದ ಕೊಠಢಿ ಬದಲಾವಣೆಗೆ ಎ.ಸಿ.ಸೂಚನೆ'

Source: S.O. News Service | By MV Bhatkal | Published on 21st October 2018, 6:50 PM | Coastal News | Don't Miss |

ಭಟ್ಕಳ: ಇಲ್ಲಿನ ಅಟಲಜೀ ಜನಸ್ನೇಹಿ ಕೇಂದ್ರದಲ್ಲಿ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿದೆ ಎಂದು ಸಾಕಷ್ಟು ದೂರುಗಳು ಕೇಳಿ ಬಂದ ಹಿನ್ನೆಲೆ  ಇಲ್ಲಿನ ಸಹಾಯಕ ಆಯುಕ್ತ ಸಾಜಿದ ಅಹ್ಮದ ಮುಲ್ಲಾ ಅವರು ತಹಸೀಲ್ದಾರ ವಿ.ಎನ್.ಬಾಡಕರ್ ಜೊತೆಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಯನ್ನು ಆಲಿಸಿದರು.
ಕಳೆದ ಸಾಕಷ್ಟು ತಿಂಗಳಿನಿಂದ ಅಟಲಜೀ ಜನಸ್ನೇಹಿ ಕೇಂದ್ರದಲ್ಲಿ ಪ್ರತಿನಿತ್ಯ ಸಾರ್ವಜನಿಕರು ತಮ್ಮ ಕೆಲಸಕ್ಕಾಗಿ ಸರದಿ ಸಾಲಿನಲ್ಲಿ ನಿಲ್ಲಬೇಕಾಗಿದ ಸ್ಥಿತಿ ಇಲ್ಲಿರುವ ಬಗ್ಗೆ ಸಾರ್ವಜನಿಕರಿಂದ, ಸಂಘ ಸಂಸ್ಥೆಗಳಿಂದ ಕೇಳಿಬಂದಿದ್ದವು. ಈ ಹಿಂದೆ ಶಾಸಕ ಸುನೀಲ ನಾಯ್ಕ ಸಹ ಭೇಟಿ ಸಮಸ್ಯೆ ಆಲಿಸಿದ್ದು, ಇಷ್ಟಾದರೂ ಯಾವುದೇ ಸಮಸ್ಯೆ ಪರಿಹಾರವಾಗದ ಹಿನ್ನೆಲೆ ಕೇಂದ್ರಕ್ಕೆ ಸಹಾಯಕ ಆಯುಕ್ತ ಸಾಜಿದ ಅಹ್ಮದ ಮುಲ್ಲಾ ಅವರು ಭೇಟಿ ನೀಡಿದರು. ಅಟಲಜೀ ಜನಸ್ನೇಹಿ ಕೇಂದ್ರದಲ್ಲಿದ್ದ ಜನರಿಂದ ಅಹವಾಲುಗಳನ್ನು ಕೇಳಿದರು. ಹಾಗೂ ಸದ್ಯ ನಡೆಯುತ್ತಿರುವ ಅಟಲಜೀ ಜನಸ್ನೇಹಿ ಕೊಠಡಿಯೂ ತೀರಾ ಚಿಕ್ಕದಾಗಿದ್ದು, ಜನರಿಗೆ ನಿಂತುಕೊಳ್ಳಲು ಸಾಧ್ಯವಾಗದ ಹಿನ್ನೆಲೆ ಕೊಠಡಿ ಬದಲಾವಣೆ ಮಾಡಿ ಪಕ್ಕದ ದೊಡ್ಡ ಕೊಠಡಿಗೆ ಸ್ಥಳಾಂತರಿಸುವಂತೆ ಬೇಡಿಕೆಯನ್ನಿಟ್ಟರು. ಹಾಗೂ ಕೊಠಡಿ ಸ್ಥಳಾಂತರದ ಜೊತೆಗೆ ಮಹಿಳೆಯರಿಗೆ ಹಾಗೂ ಪುರುಷರಿಗೆ ಸಮರ್ಪಕವಾದ ಕೌಂಟರ ನಿರ್ಮಿಸಬೇಕೆಂದು ತಿಳಿಸಿದರು. 
ಜನರ ಬೇಡಿಕೆಯಂತೆ ಸಹಾಯಕ ಆಯುಕ್ತರು ಕೊಠಡಿ ಪರಿಶೀಲನೆ ನಡೆಸಿದರು. ಹಾಗೂ ಕೇಂದ್ರದಲ್ಲಿ ಆಪರೇಟರ ಓರ್ವರಿದ್ದು ಜನರಿಗೆ ಇದರಿಂದ ತ್ವರಿತಗತಿಯಲ್ಲಿ ಕೆಲಸವಾಗಿದೇ ವಿಳಂಬವಾಗುತ್ತಿದ್ದ ಹಿನ್ನೆಲೆ ಇನ್ನೋರ್ವ ಆಪರೇಟರ ನೇಮಕಕ್ಕೆ ತಹಸೀಲ್ದಾರ ಅವರಿಗೆ ಸೂಚನೆ ನೀಡಿದರು. 
ನಂತರ ಸಹಾಯಕ ಆಯುಕ್ತ ಸಾಜಿದ ಅಹ್ಮದ ಮುಲ್ಲಾ  ಮಾತನಾಡಿ ' ಕೇಂದ್ರದಲ್ಲಿ ಜನರ ಕೆಲಸಕ್ಕೆ ವಿಳಂಬ ಹಾಗೂ ಸಮಸ್ಯೆಯಾಗುತ್ತಿದ್ದನ್ನು ಗಮನಿಸಿ ಮುಂದಿನ 2-3ದಿನದಲ್ಲಿ ಈಗಿರುವ ಕೊಠಡಿ ಪಕ್ಕದಲ್ಲಿನ ಇನ್ನೊಂದು ಕೊಠಡಿಗೆ ಅಟಲಜೀ ಜನಸ್ನೇಹಿ ಕೇಂದ್ರವನ್ನು ಸ್ಥಳಾಂತರಿಸಲು ಸೂಚನೆ ನೀಡಲಾಗಿದೆ. ಮುಂದಿನ ದಿನದಲ್ಲಿ ಜನರಿಗೆ ಯಾವುದೇ ಅನಾನುಕೂಲವಾಗದಂತೆ ಕಾರ್ಯ ಮಾಡಲು ಕೇಂದ್ರದ ಆಪರೇಟರಗೆ ಸೂಚಿಸಲಾಗಿದೆ.' ಎಂದು ಹೇಳಿದರು.  
'ತಂಜೀಂ ಉಪಾಧ್ಯಕ್ಷ ಇನಾಯತುಲ್ಲ ಶಾಬಂದ್ರಿ ಮಾತನಾಡಿ ಬ್ಯಾಂಕು ಸೇರಿದಂತೆ ಇನ್ನೀತರ ಸಾರ್ವಜನಿಕರ ಸ್ಥಳದಲ್ಲಿ ಮಹಿಳೆಯರು ಪುರುಷರ ಸರದಿ ಸಾಲಿನಂತೆ ಇಲ್ಲಿಯೂ ಆಗಬೇಕಾಗಿದ್ದು, ಇಲ್ಲಿನ ಸಮಸ್ಯೆಯ ಬಗ್ಗೆ ಸಹಾಯಕ ಆಯುಕ್ತರಿಗೆ ತಹಸೀಲ್ದಾರ ಅವರಿಗೆ ತಿಳಿಸಿದ್ದು ತಕ್ಷಣಕ್ಕೆ ಸ್ಪಂದಿಸಿ ಕಾರ್ಯಪ್ರವೃತ್ತರಾಗಿರುವುದಕ್ಕೆ ಅಭಿನಂದನೆ ತಿಳಿಸಿದರು. 

 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...