ಅಖಂಡ ಭಾರತ ಸಂಕಲ್ಪ ದಿನದಂದು ಹಿಂಜಾವೇ ಯಿಂದ ಪಂಜಿನ ಮೆರವಣಿಗೆ 

Source: S.O. News Service | By Manju Naik | Published on 15th August 2018, 9:23 PM | Coastal News | Don't Miss |

ಭಟ್ಕಳ : ಅಖಂಡ ಭಾರತ ಸಂಕಲ್ಪ ದಿನವನ್ನು ಹಿಂದೂ ಜಾಗರಣ ವೇದಿಕೆ ಭಟ್ಕಳ ಘಟಕದ ವತಿಯಿಂದ ಪಂಜಿನ ಮೆರವಣಿಗೆಯೂ ಮಂಗಳವಾರದಂದು ಇಲ್ಲಿನ ಪಟ್ಟಣದ ಆಸರಕೇರಿ ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದಿಂದ ಆರಂಭಗೊಳ್ಳುವುದರ ಮೂಲಕ ಆಚರಿಸಲಾಯಿತು. 

ರಾಷ್ಟ್ರದ ಏಕತೆಗೆ ಧಕ್ಕೆ ತರುವ ದುಷ್ಟ ಶಕ್ತಿಗಳ ನಾಶ, ಮತಾಂಧ ಭಯೋತ್ಪಾದಕ, ರಾಷ್ಟ್ರವಿರೋಧಿಗಳ ವಿರುದ್ಧ ಪ್ರಬಲ ಜನಾಭಿಪ್ರಾಯ ರೂಪಿಸುವ ಉದ್ದೇಶವನ್ನು ಹೊತ್ತ ಮೆರವಣಿಗೆಗೆ ಇಲ್ಲಿನ ದಿ ನ್ಯೂ ಇಂಗ್ಲಿಷ್ ಸ್ಕೂಲ್ ನಿವೃತ್ತ ಮುಖ್ಯಾಧ್ಯಾಪಕ ವಿ.ಜಿ.ನಾಯ್ಕ ಅವರು ಪಂಜಿನ ಮೆರವಣಿಗೆಯನ್ನು ಉದ್ಘಾಟಸಿದರು. 

ಈ ಸಂಧರ್ಭದಲ್ಲಿ ಜಿಲ್ಲಾ ಸಹ-ಸಂಚಾಲಕ ಆನಂದ ಸರ್ಪನಕಟ್ಟೆ, ತಾಲೂಕಾ ಸಂಚಾಲಕರಾದ ದಿನೇಶ ಮೋಗೆರ, ಕಾರ್ಯದರ್ಶಿ ರಾಘು ನಾಯ್ಕ ಮೂಢಭಟ್ಕಳ, ಗೋವಿಂದ ನಾಯ್ಕ, ರಾಜೇಶ ನಾಯ್ಕ, ದಿನೇಶ ನಾಯ್ಕ, ಸುಬ್ರಾಯ ದೇವಾಡಿಗ, ತುಳಸಿದಾಸ ನಾಯ್ಕ ಮತ್ತಿತರರ ಸಂಘಟನೆಯ ನೂರಾರು ಸದಸ್ಯರು ಪಾಲ್ಗೊಂಡಿದ್ದರು. 

ಪಂಜಿನ ಮೆರವಣಿಗೆಯು ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದ ಮೂಲಕ ಪ್ರಾರಂಭವಾಗಿ ಇಲ್ಲಿನ ಮುಸ್ಬಾ ಸ್ಟ್ರೀಟ್‍ನ ಮೂಲಕ ಮಾರಿಗುಡಿ ಚೆನ್ನಪಟ್ಟಣ ಹನುಮಂತ ದೇವಸ್ಥಾನ, ಹೂವಿನ ಚೌಕದ ರಸ್ತೆಯ ಮೂಲಕ ಸಾಗಿ ಬಂದುಹಳೆ ಬಸ ನಿಲ್ದಾಣದಿಂದ ಸಂಶುದ್ದೀನ್ ವೃತ್ತದ ಮೂಲಕ ಪುನಃ ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನಕ್ಕೆ ಬಂದು ಸೇರಿತು. 

ನಂತರ ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ಸಭಾಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. 

ಭಟ್ಕಳ ಉಪ ವಿಭಾಗದ ಡಿವೈಸ್ಪಿ ವೆಲೆಂಟನ್ ಡಿಸೋಜಾ, ಮಾರ್ಗದರ್ಶನದಲ್ಲಿ ಸಿಪಿಐ ಕೆ.ಎಲ್.ಗಣೇಶ ನೇತೃತ್ವದಲ್ಲಿ ಮೆರವಣಿಗೆಗೆ ಸೂಕ್ತ ಬಂದೋಬಸ್ತ ನೀಡಲಾಗಿತ್ತು. 

Read These Next

ಕಾರವಾರ: ಚುನಾವಣೆ ಯಶಸ್ಸಿಗೆ ಸಹಕರಿಸಿ ಸರ್ವರಿಗೂ ಧನ್ಯವಾದ ತಿಳಿಸಿದ ಜಿಲ್ಲಾಧಿಕಾರಿ ಡಾ.ಹರೀಶ್‍ಕುಮಾರ್ ಕೆ.

ಉತ್ತರ ಕನ್ನಡ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಶಾಂತಿಯುತ ಮತದಾನಕ್ಕೆ ಸಹಕರಿಸಿ ಮತದಾನ ಪ್ರಮಾಣ ಹೆಚ್ಚಿಸಿದ ಸರ್ವರಿಗೂ ಜಿಲ್ಲಾ ...