ಭಟ್ಕಳ ಸರ್ಕಾರಿ ಆಸ್ಪತ್ರೆ ಯಲ್ಲಿ ವಿಚಿತ್ರ ಗಂಡು ಮಗು ಜನನ

Source: sonews | By sub editor | Published on 12th January 2019, 11:55 PM | Coastal News | Don't Miss |

ಭಟ್ಕಳ: ಇಲ್ಲಿನ ತಾಲೂಕಾಸ್ಪತ್ರೆಯಲ್ಲಿ ಶುಕ್ರವಾರದಂದು ಸಂಜೆ ಮಹಿಳೆಯೋರ್ವಳು ದೇಹದ ಚರ್ಮಗಳು ಸುಟ್ಟ ರೀತಿಯಲ್ಲಿ ವಿಚಿತ್ರ ರೀತಿಯ ಗಂಡು ಮಗುವೊಂದು ಜನಿಸಿದ್ದು ತಾಲೂಕಿನಾದ್ಯಂತ ವಿಚಾರದಲ್ಲಿ ಸುದ್ದಿಯಾಗಿದೆ.

ಇಲ್ಲಿನ ತಲಾಂದ ಗ್ರಾಮದ ಮಹಿಳೆರ್ಯೋವಳಿಗೆ ವಿಚಿತ್ರ ಮಗು ಜನಿಸಿದ್ದು ಎನ್ನಲಾಗಿದೆ. ಹಿಂದೆ 2015ರಲ್ಲಿ ಸಹ ಇದೇ ರೀತಿಯ ಮಗುವಿಗೆ ಮಹಿಳೆ ಜನ್ಮ ನೀಡಿದ್ದು ಕೆಲವು ದಿನದ ಬಳಿಕ ಮಗು ಸಾವನ್ನಪ್ಪಿರುವ ಬಗ್ಗೆ ತಿಳಿದು ಬಂದಿದೆ. ನಂತರ ಎರಡನೇ ಮಗುವೊಂದು ಜನಿಸಿದ್ದು ಮಗು ಎಲ್ಲರಂತಿದ್ದು ಸದ್ಯ 2 ವರ್ಷ ತುಂಬಿದೆ. ಇದಾದ ಬಳಿಕ ಮಹಿಳೆ ಮೂರನೇ ಬಾರಿ ಗರ್ಭಿಣಿಯಾಗಿದ್ದು ಮತ್ತೆ ಮೂರನೇ ಮಗು ಮೊದಲಿನ ಮಗುವನ ರೀತಿಯಲ್ಲಿ ಜನಿಸಿದ್ದು ಮಹಿಳೆ ಹಾಗೂ ಕುಟುಂಬಕ್ಕೆ ಬೇಸರ ಉಂಟಾಗಿದೆ.

ಸದ್ಯ ಮಗುವಿನ ಸ್ಥಿತಿ ಗಂಬೀರವಾಗಿದ್ದು ತಾಲೂಕಾಸ್ಪತ್ರೆಯಲ್ಲಿ ದಾಖಲಾಗಿದೆ. ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳು ರೀತಿಯ ಮಗುವನ ಜನನಕ್ಕೆ ಕಾರಣವೇನು ಎಂಬುದು ಪತ್ತೆ ಹಚ್ಚಬೇಕಾಗಿದೆ ಎಂಬುದೇ ಸಾರ್ವಜನಿಕರ ಅಭಿಪ್ರಾಯವಾಗಿದೆ

ಕುರಿತು ಮಹಿಳೆಗೆ ಹೆರಿಗೆ ಮಾಡಿಸಿದ ವೈದ್ಯ ಡಾ. ಸಂತೋಷ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದುಮಕ್ಕಳ ತಜ್ಞರ ಬಳಿ ಮಗುವಿನ ಜನನದ ಬಗ್ಗೆ ತಿಳಿಸಿದ್ದು ಒಂದು ರೀತಿಯಲ್ಲಿ ಮಗುವಿನ ದೇಹ ಸುಟ್ಟ ರೀತಿಯಲ್ಲಿ ಕಂಡು ಬಂದಿದೆ. ಇನ್ನುಳಿದಂತೆ ದೇಹದ ಎಲ್ಲಾ ಅಂಗಾಗಗಳು ಸರಿಯಾಗಿ ಕಾರ್ಯ ಮಾಡುತ್ತಿದೆ. ಮೇಲ್ನೋಟಕ್ಕೆ ಇದು ಮಗುವಿನ ಬೆಳವಣಿಗೆಯ ವೇಳೆಯಲ್ಲಿಯೇ ರೀತಿಯಾಗಲಿದೆ.

Read These Next

ಮೋದಿ ಹೆಸರಲ್ಲಿ ಮತಕೇಳದೆ ತನ್ನ ಹೆಸರಿನಲ್ಲಿ ಮತಕೇಳಲಿ ಬಂಡವಾಳ ಹೊರಬರುತ್ತದೆ : ಅಸ್ನೋಟಿಕರ

ಮುಂಡಗೋಡ : ಅನಂತಕುಮಾರ ಹೆಗಡೆ ಮೋದಿ ಹೆಸರಿನಲ್ಲಿ ಮತ ಕೇಳುವುದನ್ನು ಬಿಟ್ಟು ತನ್ನ ಹೆಸರಿನಲ್ಲಿ ಮತ ಕೇಳಲಿ ಆಗಲೇ ಈತನ ಬಂಡವಾಳ ಹೊರ ...

ಮೋದಿ ಹೆಸರಲ್ಲಿ ಮತಕೇಳದೆ ತನ್ನ ಹೆಸರಿನಲ್ಲಿ ಮತಕೇಳಲಿ ಬಂಡವಾಳ ಹೊರಬರುತ್ತದೆ : ಅಸ್ನೋಟಿಕರ

ಮುಂಡಗೋಡ : ಅನಂತಕುಮಾರ ಹೆಗಡೆ ಮೋದಿ ಹೆಸರಿನಲ್ಲಿ ಮತ ಕೇಳುವುದನ್ನು ಬಿಟ್ಟು ತನ್ನ ಹೆಸರಿನಲ್ಲಿ ಮತ ಕೇಳಲಿ ಆಗಲೇ ಈತನ ಬಂಡವಾಳ ಹೊರ ...