ಮನ ನೊಂದ ವ್ಯಕ್ತಿ ಆತ್ಮಹತ್ಯೆಗೆ ಶರಣು

Source: sonews | By sub editor | Published on 15th January 2019, 12:33 AM | Coastal News | Don't Miss |

ಭಟ್ಕಳ:  ತನ್ನ ಮಗಳ ಮದುವೆ ಸಂಬಂಧದ ನೆಂಟಸ್ತಿಕೆ ಆಗಲಿಲ್ಲ ಎಂದು ಮನ ನೊಂದ ವ್ಯಕ್ತಿಯೋರ್ವರು ಮನೆಯಲ್ಲಿ  ಯಾರು ಇಲ್ಲದ ಸಂದರ್ಭ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ  ಜರಗಿದೆ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಇಲ್ಲಿನ ರಘುನಾಥ್ ರಸ್ತೆ ನಿವಾಸಿ ರಾಮಚಂದ್ರ ದುರ್ಗಪ್ಪ ದೇವಾಡಿಗ(೫೮) ಎಂದು ಗುರುತಿಸಲಾಗಿದೆ.

ಇವರು ಕಳೆದ ಇಪ್ಪತ್ತು ವರ್ಷಗಳಿಂದ ದುಬೈಯಲ್ಲಿ ಚಾಲಕನ ಕೆಲಸ ಮಾಡಿಕೊಂಡಿದ್ದು ಇತ್ತಿಚೆಗೆ ನಾಲ್ಕು ದಿನದ ಹಿಂದೆ ಭಟ್ಕಳಕ್ಕೆ ಬಂದಿದ್ದರು ಎನ್ನಲಾಗಿದ್ದು ವಯಸ್ಸಿಗೆ ಬಂದ ತನ್ನ ಮಗಳಿಗೆ ಸೂಕ್ತ ವರ ಸಿಗದೆ ಇರುವುದರಿಂದಾಗಿ  ಇದನ್ನೇ ಮನಸ್ಸಿಗೆ ಹಚ್ಚಿಕೊಂಡ ಇವರು ಯಾರೂ ಇಲ್ಲದ ಸಂದರ್ಭದಲ್ಲಿ ಇಂದು ತಮ್ಮ ಮನೆಯ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

  ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ

Read These Next