ಆಸ್ಪತ್ರೆಗಳಿಗೆ ಧಾವಂತ, ಬೃಹತ್ ಸಮಾವೇಶಗಳಿಂದ ಭಾರತದ ಕೋವಿಡ್ ಸ್ಥಿತಿ ಇನ್ನಷ್ಟು ಉಲ್ಬಣ, ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

Source: VB | By S O News | Published on 28th April 2021, 4:26 PM | National News | Special Report |

ಜಿನಿವಾ: ಭಾರತದಲ್ಲಿ ಜನರು ಅನಗತ್ಯವಾಗಿ ಆಸ್ಪತ್ರೆಗಳಿಗೆ ಧಾವಿಸುವ ಮೂಲಕ ಬೃಹತ್ ಸಮಾವೇಶಗಳು, ಹೆಚ್ಚು ಸಾಂಕ್ರಾಮಿಕವಾಗಿರುವ ರೂಪಾಂತರಿತ ತಳಿಗಳು ಮತ್ತು ಕಡಿಮೆ ಲಸಿಕೆ ನೀಡಿಕೆ ದರ ಇವುಗಳಿಂದಾಗಿ ಹೆಚ್ಚುತ್ತಿರುವ ಕೋವಿಡ್-19 ಬಿಕ್ಕಟ್ಟನ್ನು ಇನ್ನಷ್ಟು ಹದಗೆಡಿಸುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯು ಮಂಗಳವಾರ ಹೇಳಿದೆ.

ಭಾರತದಲ್ಲೀಗ ಕೊರೋನ ವೈರಸ್ ಸಾವುಗಳ ಸಂಖ್ಯೆ ಎರಡು ಲಕ್ಷದ ಸನಿಹ ತಲುಪಿದ್ದು,ಸಾಕಷ್ಟು ಆಮ್ಲಜನಕ ಪೂರೈಕೆ ಮತ್ತು ಹಾಸಿಗೆಗಳು ಇಲ್ಲದ ಆಸ್ಪತ್ರೆಗಳು ಕೋವಿಡ್-19 ರೋಗಿಗಳಿಗೆ ಪ್ರವೇಶವನ್ನು ನಿರಾಕರಿಸುತ್ತಿವೆ. ಡಬ್ಲ್ಯುಎಚ್‌ಒ 4,000 ಆಮ್ಲಜನಕ ಸಾಂದ್ರೀಕರಣ ಸಾಧನಗಳು ಸೇರಿದಂತೆ ಪ್ರಮುಖ ಉಪಕರಣಗಳು ಮತ್ತು ಪೂರೈಕೆಗಳನ್ನು ಭಾರತಕ್ಕೆ ಒದಗಿಸುತ್ತಿದೆ ಎಂದು ಅದರ ವಕ್ತಾರ ತಾರಿಕ್ ಜಸರೆವಿಕ್ ತಿಳಿಸಿದರು.

ಶೇ.15ಕ್ಕೂ ಕಡಿಮೆ ಕೋವಿಡ್-19 ರೋಗಿಗಳಿಗೆ ನಿಜಕ್ಕೂ ಆಸ್ಪತ್ರೆಗಳಿಗೆ ದಾಖಲಾಗುವ ಅಗತ್ಯವಿದೆ ಮತ್ತು ಇದಕ್ಕೂ ಕಡಿಮೆ ರೋಗಿಗಳಿಗೆ ಆಮ್ಲಜನಕ ಅಗತ್ಯವಾಗಿದೆ ಎಂದು ಹೇಳಿದ ಅವರು, ಕೊರೋನ ವೈರಸ್‌ಗೆ ಮನೆಯಲ್ಲಿಯೇ ಪರಿಣಾಮಕಾರಿ ಉಪಚಾರವನ್ನು ಪಡೆಯಬಹುದು, ಆದರೆ ಇದರ ಬಗ್ಗೆ ಸರಿಯಾಗಿ ಮಾಹಿತಿಯಿಲ್ಲದೆ ಹಲವಾರು ಜನರು ಆಸ್ಪತ್ರೆಗಳಿಗೆ ಧಾವಿಸುತ್ತಿರುವುದು ಸಮಸ್ಯೆಯನ್ನುಂಟು ಮಾಡಿದೆ ಎಂದರು.

ಸಮುದಾಯ ಮಟ್ಟದ ಕೇಂದ್ರ ಗಳು ರೋಗಿಗಳ ತಪಾಸಣೆ ನಡೆಸಬೇಕು ಮತ್ತು ಚಿಕಿತ್ಸೆಯ ಸರದಿ ಯನ್ನು ನಿರ್ಧರಿಸಬೇಕು,ಜೊತೆಗೆ ಮನೆಯಲ್ಲಿಯೇ ಸುರಕ್ಷಿತ ಉಪಚಾರ ಪಡೆಯುವ ಬಗ್ಗೆ ಮಾಹಿತಿಗಳನ್ನು ಒದಗಿಸಬೇಕು. ಇಂತಹ ಮಾಹಿತಿಗಳನ್ನು ಹಾಟ್‌ಲೈನ್ ಗಳು ಅಥವಾ ಡ್ಯಾಷ್‌ಬೋರ್ಡ್‌ಗಳ ಮೂಲಕವೂ ಲಭ್ಯವಾಗಿಸಬೇಕು ಎಂದು ಅವರು ಹೇಳಿದರು.

ಕೊರೋನ ಅಟ್ಟಹಾಸ ಮಧ್ಯೆಯೇ ಕುಂಭಮೇಳ, ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿದ ಭಕ್ತರು!

ಹರಿದ್ವಾರ: ಇಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಮಂಗಳವಾರ ಚಿತ್ರಾ ಪೂರ್ಣಿಮೆಯ ಅಂಗವಾಗಿ ಭಾರೀ ಸಂಖ್ಯೆಯಲ್ಲಿ ಜನರು ಗಂಗಾನದಿಯಲ್ಲಿ ಪವಿತ್ರ ಸ್ನಾನವನ್ನು ಮಾಡಿದರು. ಕೋವಿಡ್-19 ಶಿಷ್ಟಾಚಾರಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ್ದ ಜನರು ಮಾಸ್ಕ್ ಗಳನ್ನು ಧರಿಸಿರಲಿಲ್ಲ, ಸುರಕ್ಷಿತ ಅಂತರವನ್ನೂ ಕಾಯ್ದುಕೊಂಡಿರಲಿಲ್ಲ. ವಿವಿಧ ಅಖಾಡಾಗಳ ಸಾಧುಗಳು ಪಾಲ್ಗೊಂಡಿದ್ದ ಅಂತಿಮ 'ಶಾಹಿ ಸ್ನಾನ'ವೂ ಮಂಗಳವಾರವೇ ನಡೆಯಿತು. ಮಾ.11ರಂದು ಮಹಾ ಶಿವರಾತ್ರಿಯ ಸಂದರ್ಭದಲ್ಲಿ ಮೊದಲ ಶಾಹಿ ಸ್ನಾನ ನಡೆದಿದ್ದರೆ ಎ.12 ಮತ್ತು ಎ.14ರಂದು ಎರಡನೇ ಮತ್ತು ಮೂರನೇ ಶಾಹಿ ಸ್ಥಾನಗಳು ನಡೆದಿದ್ದವು.

Read These Next

ಒಡಿಶಾದ ಮುಖ್ಯಮಂತ್ರಿಯಾಗಿ ಮಾಝಿ ಪ್ರಮಾಣ; ಡಿಸಿಎಂಗಲಾಗಿ ಕೆ ವಿ ಸಿಂಗ್ ದೇವ್ ಪಾರ್ವತಿ ಪರಿದಾ

ಬಿಜೆಪಿಯ ಹಿರಿಯ ಬುಡಕಟ್ಟು ನಾಯಕ ಹಾಗೂ ನಾಲ್ಕು ಬಾರಿ ಶಾಸಕರಾಗಿದ್ದ ಮೋಹನ್ ಚರಣ್ ಮಾಝಿ ಅವರು ಒಡಿಶಾದ ಮುಖ್ಯಮಂತ್ರಿಯಾಗಿ ಬುಧವಾರ ...

ಲೋಕಸಭಾ ಸ್ಥಾನ: ಕಾಂಗ್ರೆಸ್ ಶತಕ

ಲೋಕಸಭಾ ಚುನಾವಣೆಗಳಲ್ಲಿ ಉತ್ತಮ ಸಾಧನೆಯನ್ನು ಪ್ರದರ್ಶಿಸಿದ್ದರೂ ಶತಕ ವಂಚಿತಗೊಂಡಿದ್ದ ಕಾಂಗ್ರೆಸ್ ಗುರುವಾರ ಲೋಕಸಭೆಯಲ್ಲಿ ತನ್ನ ...

ಮೇ 31 ವಿಶ್ವ ತಂಬಾಕು ರಹಿತ ದಿನ; ಜಿಲ್ಲೆಯಲ್ಲಿ ತಂಬಾಕು ದುಷ್ಪರಿಣಾಮಗಳ ನಿಯಂತ್ರಣಕ್ಕೆ ವಿವಿಧ ಕಾರ್ಯಕ್ರಮ

ಉತ್ತರ ಕನ್ನಡ ಜಿಲ್ಲೆಯಲ್ಲಿ ತಂಬಾಕು ಉತ್ಪನ್ನಗಳ ದುಷ್ಪರಿಣಾಮಗಳ ನಿಯಂತ್ರಣಕ್ಕೆ ಕಳೆದ ಒಂದು ವರ್ಷದಿಂದ ಜಿಲ್ಲಾ ಹಾಗೂ ತಾಲೂಕು ...

ಭಟ್ಕಳ: ಮುರುಡೇಶ್ವರಕ್ಕೆ ಅಪ್ಪಳಿಸಿದ ಜನಮಾರುತ; ಸರಕಾರದ ಮಹಾ ಶಕ್ತಿ ಸಂಗಮಕ್ಕೆ ಪ್ರವಾಸಿ ತಾಣ ತತ್ತರ

ಮುಂಗಾರು ಆಗಮನಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ವಾರದ ರಜೆ ರವಿವಾರ ಪ್ರವಾಸಿಗರ ಸಮೂಹ ಮುರುಡೇಶ್ವರಕ್ಕೆ ಮಾರುತವಾಗಿ ...

ಸರ್ಕಾರದಿಂದ ಕೋಟಿಗಟ್ಟಲೆ ಅನುದಾನ ಬಂದರೂ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಭಟ್ಕಳ ತಾಲೂಕು

ನೀರಿನ ಸಮಸ್ಯೆಯಿಂದಾಗಿ ಭಟ್ಕಳದ ನಗರ ಮತ್ತು ಗ್ರಾಮೀಣ ಪ್ರದೇಶಗಳ ನಿವಾಸಿಗಳು ಟ್ಯಾಂಕರ್ ಮೂಲಕ ಸರಬರಾಜು ಮಾಡುವ ನೀರಿಗಾಗಿ ಸರತಿ ...

ಕಾಂಗ್ರೆಸ್‌ನ ಅಭೂತಪೂರ್ವ ಕಾರ್ಯಗಳಿಗೆ ಶುಭಾಶಯ ತಿಳಿಸಿದ ಹಿಂದುತ್ವ ನಾಯಕ ಚಕ್ರವರ್ತಿ ಸೂಲಿಬೆಲೆ

“ಕೆಲವು ವಿಚಾರ ನಾನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ನಾನು ಕಾಂಗ್ರೆಸಿಗರಿಗೆ ಶುಭಾಶಯ ತಿಳಿಸುತ್ತೇನೆ. ನೀವು ...