ಭಟ್ಕಳದ ಐತಿಹಾಸಿಕ ಜಾಮಿಯಾ ಮಸೀದಿ ಸಂದರ್ಶಿಸಿದ ಪಶ್ಚಿಮ ವಲಯ ಐಜಿಪಿ

Source: sonews | By Staff Correspondent | Published on 15th December 2018, 7:48 PM | Coastal News | Don't Miss |

ಭಟ್ಕಳ: ಪಶ್ಚಿಮ ವಲಯ ಐಜಿಪಿ ಅರುಣ ಚಕ್ರವರ್ತಿ ಶನಿವಾರ ನಗರದ ಐತಿಹಾಸಿ ಜಾಮಿಯಾ ಮಸೀದಿ (ಚಿನ್ನದಪಳ್ಳಿ) ಗೆ ಭೇಟಿ ನೀಡಿ ಪರಿಶೀಲಿಸಿದರು. 

ಹೊನ್ನಾವರದಿಂದ ಮಂಗಳೂರು ಹೋಗುವ ಮಾರ್ಗದಲ್ಲಿ ಕೆಲ ಕಾಲ ಭಟ್ಕಳದಲ್ಲಿ ತಂಗಿದ್ದ ಐಜಿಪಿಯವರು ತಾಲೂಕಿನ ಇತಿಹಾಸ ಪ್ರಸಿದ್ಧ  ಜೈನರ ಕಾಲದ ಹಾಡುವಳ್ಳಿ ಬಸದಿ, ಭಟ್ಕಳದ ಮೋನಿ ಬಸದಿ ಹಾಗೂ ಐತಿಹಾಸಿಕ ಚಿನ್ನದ ಪಳ್ಳಿಗೆ ಭೇಟಿ ನೀಡಿದರು. 

ಈ ಸಂದರ್ಭದಲ್ಲಿ ಜಮಾಅತುಲ್ ಮುಸ್ಲಿಮೀನ್ ಕಾರ್ಯಲಯಕ್ಕೂ ಭೇಟಿ ಅಲ್ಲಿನ ಚಟುವಟಿಕೆಗಳನ್ನು ವೀಕ್ಷಿಸಿದರು. ಜಮಾಅತುಲ್ ಮುಸ್ಲಿಮೀನ್ ಸಂಸ್ಥೆಯ ಜಾನ್ ಅಬ್ದುಲ್ ರಹ್ಮಾನ್, ಅಬ್ದುಲ್ ಅಝೀಮ್, ಮೌಲಾನ ತಲ್ಹಾ ನದ್ವಿ, ಶಾಬಂದ್ರಿ ಶಫಿ ಪಟೇಲ್, ಅಶ್ಫಾಖ್ ಕೆ.ಎಂ. ಸೇರಿದಂತೆ ಹಲವು ಪ್ರಮುಖರು ಉಪಸ್ಥಿರಿದ್ದು ಮಸೀದಿಯ ಇತಿಹಾಸದ ಕುರಿತಂತೆ ಮಾಹಿತಿ ನೀಡಿದರು. 

ಐಜಿಪಿಯೊಂದಿಗೆ ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್, ಭಟ್ಕಳ ಡಿ.ವೈ.ಎಸ್ಪಿ ವೆಲೆಂಟೇನ್ ಡಿ’ಸೋಜಾ ಸೇರಿದಂತೆ ಹಲವು ಸ್ಥರದ ಪೊಲೀಸ್ ಅಧಿಕಾರಿಗಳು ಜತೆಗಿದ್ದರು. 

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...

ಕಾರವಾರ: 16.41 ಲಕ್ಷ ಮತದಾರರು: 1977 ಮತಗಟ್ಟೆಗಳು: 6939 ಸಿಬ್ಬಂದಿಗಳು; ಲೋಕಸಭಾ ಚುನಾವಣೆಗೆ ನಾವ್ ರೆಡಿ ಎಂದ ಜಿಲ್ಲಾಡಳಿತ

ಲೋಕಸಭಾ ಸಾರ್ವತ್ರಿಕ ಚುನಾವಣೆ-2024ಕ್ಕೆ ಸಂಬAಧಿಸಿದAತೆ, ಮುಕ್ತ, ಪಾರದರ್ಶಕ ಮತ್ತು ಶಾಂತಿಯುತ ಚುನಾವಣೆಗಾಗಿ ಜಿಲ್ಲೆಯಲ್ಲಿ ಸಕಲ ...