ಕದಂಬೋತ್ಸವ ಜ್ಯೋತಿ ಭಟ್ಕಳ ತಾಲೂಕಾಡಳಿತ ದಿಂದ ಸ್ವಾಗತ

Source: SO News | By MV Bhatkal | Published on 4th March 2024, 4:29 PM | Coastal News | Don't Miss |

ಭಟ್ಕಳ: ಜಿಲ್ಲಾಡಳಿತ ಉತ್ತರ ಕನ್ನಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಶಿರಸಿ ತಾಲೂಕಿನ ಬನವಾಸಿಯಲ್ಲಿ ನಡೆಯಲಿರುವ “ಕದಂಬೋತ್ಸವ-೨೦೨೪” ರ ಅಂಗವಾಗಿ ಜಿಲ್ಲೆಯ ಎಲ್ಲಾ ತಾಲೂಕಿಗೆ ಕದಂಬೋತ್ಸವ ಜ್ಯೋತಿ ಸಂಚರಿಸಲಿದ್ದು, ಈ ಹಿನ್ನೆಲೆಯಲ್ಲಿ ಸೋಮವಾರದಂದು  ಸಾಗರ ತಾಲೂಕಿನಿಂದ ಹಾಡುವಳ್ಳಿ ಮಾರ್ಗವಾಗಿ ಭಟ್ಕಳ ಶಂಶುದ್ದೀನ್ ಸರ್ಕಲ್ ಬಳಿ ಬಂದು ತಲುಪಿತು.
ಕನ್ನಡದ ಪ್ರಥಮ ರಾಜಧಾನಿ ಬನವಾಸಿಯಲ್ಲಿ ಕದಂಬೋತ್ಸವವು ಮಾಚ್೯ 5,ಮತ್ತು 6 ರವರೆಗೆ ಜರುಗಲಿದೆ  ಶಿರಸಿ ತಾಲುಕಿನ ಬನವಾಸಿಯಲ್ಲಿ ನಡೆಯುವ ಕದಂಬೋತ್ಸವ-೨೦೨೪ ಕಾರ್ಯಕ್ರಮದ ಅಂಗವಾಗಿ ಪೂರ್ವದಲ್ಲಿ ಜಿಲ್ಲೆಯ ಎಲ್ಲಾ ತಾಲೂಕೂಗಳಿಗೂ ಕಾರ್ಯಕ್ರಮದ ಪ್ರಚಾರದ ನಿಮಿತ್ತ ಬರುವ ಕದಂಬ ಜ್ಯೋತಿಯೂ ಸೋಮವಾರದಂದು ಸಾಗರ ತಾಲೂಕಿನಿಂದ ಹಾಡುವಳ್ಳಿ ಮಾರ್ಗವಾಗಿ ಭಟ್ಕಳಕ್ಕೆ ಬಂದು ತಲುಪಿತು. ಈ ಸಂಧರ್ಬದಲ್ಲಿ ಆಗಮಿಸಿದ ಕದಂಬ ಜ್ಯೋತಿಯನ್ನು ಭಟ್ಕಳದಲ್ಲಿ ಮಾನ್ಯ ಸಹಾಯಕ ಆಯುಕ್ತ ಡಾ ನಯನ ಹಾಗೂ ಭಟ್ಕಳ ತಾಲೂಕಾಢಳಿತದಿಂದ ಸ್ವಾಗತಿದರು. ಕದಂಬ ಜ್ಯೋತಿಗೆ ವಿಶೇಷವಾಗಿ ಆರತಿಯನ್ನು ಮಾಡಿ ಪುಷ್ಪನಮನವನ್ನು ಸಲ್ಲಿಸಿ ಕದಂಬೋತ್ಸವ ಕಾರ್ಯಕ್ರಮ ನಿರ್ವಿಘ್ನವಾಗಿ ನೆರವೇರಲಿ ಎಂದು ಶುಭಹಾರೈಸಿದರು.
ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಹಾಗೂ ಶಿಕ್ಷಣ ಅಧಿಕಾರಿಗಳಾದ ವಿ.ಡಿ.ಮೊಗೇರ್,
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪ್ರಭಾಕರ ಚಿಕ್ಕನಮನೆ,ಆರ್.ಎಫ್.ಒ ಶರತ್ ಶೇಟಿ,ತಹಸೀಲ್ದಾರ ಕಛೇರಿ ಶಿರಸೇದಾರ ವಿಜಯಲಕ್ಷ್ಮಿ ಮಣಿ,ಕಂದಾಯ ನೀರಿಕ್ಷಕ ವಿಶ್ವನಾಥ ಗಾಂವ್ಕರ್,ಸೂಸಗಡಿ ಗ್ರಾಮ ಆಡಳಿತ ಅಧಿಕಾರಿ ಚಾಂದಬಾಷ ಮುಲ್ಲಾ,ಪುರಸಭೆ ಆರೋಗ್ಯ ಅಧಿಕಾರಿ ಸೂಜಿಯಾ ಸೋಮನ,
ಸೇರಿದಂತೆ ಸಹಾಯಕ ಆಯುಕ್ತ ಕಛೇರಿ ಸಿಬ್ಬಂದಿಗಳು,ತಹಶಿಲ್ದಾರರ ಕಚೇರಿ ಸಿಬ್ಬಂದಿಗಳು,ತಾಲ್ಲೂಕು ಪಂಚಾಯತ್ ಸಿಬ್ಬಂದಿಗಳು,ಹೆಸ್ಕಾಂ ಸಿಬ್ಬಂದಿಗಳು
ಜಾಲಿ ಪಟ್ಟಣ ಪಂಚಾಯತ ಸಿಬ್ಬಂದಿಗಳು,
ಉಪಸ್ಥಿತರಿದ್ದರು.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...