ಲಾಕ್ ಡೌನ್ ಕಾನೂನು ಉಲ್ಲಂಘನೆ; 18 ಪ್ರಕರಣ ದಾಖಲು

Source: sonews | By Staff Correspondent | Published on 16th May 2020, 11:51 PM | Coastal News | Don't Miss |

ಭಟ್ಕಳ:  ಲಾಕ್‍ಡೌನ್ ಆರಂಭವಾದಾಗಿನಿಂದ ನಗರದಲ್ಲಿ ಕಾನೂನು ಉಲ್ಲಂಘಿಸಿದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದ್ದು ಇಲ್ಲಿಯ ತನಕ ಸುಮಾರು 18 ಪ್ರಕರಣಗಳನ್ನು ದಾಖಲಿಸಿಕೊಂಡು ಹಲವಾರು ಆರೋಪಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ನಗರ ಠಾಣಾ ಪಿ.ಎಸ್.ಐ ಭರತ್ ಕುಮಾರ್ ತಿಳಿಸಿದರು.

ಅವರು ಶನಿವಾರ ನಗರ ಠಾಣಾ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಟಿಯನ್ನು ನಡೆಸಿದಿ ಈ ವಿಷಯ ತಿಳಿಸಿದರು.  

ಲಾಕ್‍ಡೌನ್ ಆರಂಭವಾದಾಗಿನಿಂದ ಇಲ್ಲಿಯ ತನಕ ನೂರಾರು ವಾಹನಗಳನ್ನು ನಿಯಮ ಉಲ್ಲಂಘನೆಗಾಗಿ ವಶಕ್ಕೆ ಪಡೆಯಲಾಗಿದ್ದು ಹಲವರಿಗೆ ದಂಡ ವಿಧಿಸಿ ವಾಪಾಸು ನೀಡಲಾಗಿದೆ. ಇನ್ನೂ ಹಲವಾರು ವಾಹನಗಳು ಠಾಣೆಯ ಆವರಣದಲ್ಲಿಯೇ ಇವೆ.  ಇನು ಕಳೆದ ಮೇ.8ರಂದು ದನದ ಮಾಂಸವನ್ನು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ಮೂವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮೇ.14ರಂದು ಕೋಗ್ತಿ ನಗರದಲ್ಲಿ ವಾಹನ ಸವಾರರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಾಸ್ಮೋಸ್ ಸ್ಪೋಟ್ರ್ಸ ಕ್ಲಬ್ ಆವರಣದಲ್ಲಿ ಶುಕ್ರವಾರ ಸಾಮೂಹಿಕ ನಮಾಜ್ ಮಾಡುತ್ತಿರುವ 8 ಜನರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ಮಾಹಿತಿಯನ್ನು ಐ.ಪಿ.ಎಸ್. ತರಬೇತಿಯಲ್ಲಿರುವ ಶಾಹಿದ್ ಬಾಗ್ಲಾ ಅವರು ನೀಡಿದ್ದರು. 

ಒಟ್ಟಾರೆ ಭಟ್ಕಳದಲ್ಲಿ ಕಾನೂನು ಉಲ್ಲಂಘಿಸುವವರ ಹಾಗೂ ನಿಯಮ ಮೀರಿ ನಡೆದುಕೊಳ್ಳುವವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದ್ದು ಯಾರೂ ಕೂಡಾ ಮನೆಯಿಂದ ಹೊರಕ್ಕೆ ಬಾರದೇ ಸಹಕರಿಸಿ ಎನ್ನುವುದು ಪೊಲೀಸ್ ಇಲಾಖೆಯ ಮನವಿಯಾಗಿದೆ.  ಯಾರೇ ಆಗಲಿ ತರ್ತು ಸಂದರ್ಭದಲ್ಲಿ ಮಾತ್ರ ತಮ್ಮ ತಮ್ಮ ಎರಿಯಾದಲ್ಲಿರುವ ಹೆಲ್ಪ್ ಡೆಸ್ಕ್‍ಗೆ ಬಂದಲ್ಲಿ ಅವರು ಸಹಾಯ ಮಾಡುತ್ತಾರೆ ಎಂದೂ ತಿಳಿಸಲಾಗಿದೆ.
 

Read These Next

ಕಾರವಾರ: 16.41 ಲಕ್ಷ ಮತದಾರರು: 1977 ಮತಗಟ್ಟೆಗಳು: 6939 ಸಿಬ್ಬಂದಿಗಳು; ಲೋಕಸಭಾ ಚುನಾವಣೆಗೆ ನಾವ್ ರೆಡಿ ಎಂದ ಜಿಲ್ಲಾಡಳಿತ

ಲೋಕಸಭಾ ಸಾರ್ವತ್ರಿಕ ಚುನಾವಣೆ-2024ಕ್ಕೆ ಸಂಬAಧಿಸಿದAತೆ, ಮುಕ್ತ, ಪಾರದರ್ಶಕ ಮತ್ತು ಶಾಂತಿಯುತ ಚುನಾವಣೆಗಾಗಿ ಜಿಲ್ಲೆಯಲ್ಲಿ ಸಕಲ ...