ಅರಣ್ಯ ಅತಿಕ್ರಮಣದಾರರ ಅರ್ಜಿ ತಿರಸ್ಕಾರ; ಹೋರಾಟ ಸಮಿತಿಯಿಂದ ‘ಕಾರವಾರ ಚಲೋ’

Source: sonews | By Staff Correspondent | Published on 24th January 2019, 10:39 PM | Coastal News | Don't Miss |

ಭಟ್ಕಳ: ಉತ್ತರಕನ್ನಡ ಜಿಲ್ಲೆಯ ಅರಣ್ಯ ಅತಿಕ್ರಮಣದಾರರ ಅರ್ಜಿಯನ್ನು ಸಕಾರಣವಿಲ್ಲದೇ ತಿರಸ್ಕಾರ ಮಾಡಿರುವುದನ್ನು ಖಂಡಿಸಿ ಫೆಬ್ರುವರಿ ತಿಂಗಳ ಮೊದಲ ವಾರದಲ್ಲಿ `ಕಾರವಾರ ಚಲೋ' ನಡೆಸಲಾಗುವುದು ಎಂದು ಸಂಘಟನೆಯ ಜಿಲ್ಲಾ ಅರಣ್ಯ ಅತಿಕ್ರಮಣ ಹೋರಾಟ ಸಮಿತಿಯ ಪ್ರಮುಖ ರವೀಂದ್ರನಾಥ ನಾಯ್ಕ ಹೇಳಿದ್ದಾರೆ.
 
ಅವರು ಗುರುವಾರ ತಾಲೂಕಿನ ಖಾಸಗಿ ಹೊಟೆಲ್‍ನಲ್ಲಿ ಅರಣ್ಯ ಅತಿಕ್ರಮಣದಾರರ ಸಭೆಯ ನಂತರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 

ಜಿಲ್ಲಾಡಳಿತ ಅತಿಕ್ರಮಣದಾರರನ್ನು ನಿರ್ಲಕ್ಷಿಸಿದ್ದು, 80% ಅರ್ಜಿಗಳು ತಿರಸ್ಕøತಗೊಂಡ ಕಾರಣ ಅತಿಕ್ರಮಣದಾರರ ಸಂಕಷ್ಟ ಇನ್ನಷ್ಟು ಹೆಚ್ಚಿದೆ. ಭಟ್ಕಳದಲ್ಲಿ ಅತಿಕ್ರಮಣದಾರರ ವಿರುದ್ಧ ಅರಣ್ಯಾಧಿಕಾರಿಗಳ ದೌರ್ಜನ್ಯ ಮೀತಿ ಮೀರಿದೆ. ಜಿಲ್ಲೆಯ ಶಾಸಕರು, ಸಂಸದರು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಅತಿಕ್ರಮಣದಾರರಿಗೆ ಪ್ರತಿಭಟನೆಯನ್ನು ಬಿಟ್ಟು ಬೇರೆ ಮಾರ್ಗ ಇಲ್ಲದಾಗಿದೆ. ಜಿಲ್ಲಾಡಳಿತವನ್ನು ಎಚ್ಚರಿಸುವ ಸಲುವಾಗಿ ಜಿಲ್ಲೆಯ ಪ್ರತಿ ತಾಲೂಕಿನ ಅತಿಕ್ರಮಣದಾರರು ಕಾರವಾರ ಚಲೋ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಜಿಲ್ಲಾಡಳಿತದಿಂದ ಸೂಕ್ತ ಪರಿಹಾರ ಸಿಗದೇ ಇದ್ದಲ್ಲಿ 2000 ಅತಿಕ್ರಮಣದಾರರು ಬೆಂಗಳೂರನ್ನು ತಲುಪಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದೇವೆ. ಮುಂದಿನ ವಿಧಾನಸಭಾ ಮತ್ತು ಲೋಕಸಭಾ ಅಧಿವೇಶನಗಳಲ್ಲಿ ಜಿಲ್ಲೆಯ ಅರಣ್ಯ ಅತಿಕ್ರಮಣದಾರರ ಸಮಸ್ಯೆ ಚರ್ಚೆಗೆ ಬರಬೇಕು ಎಂಬ ಬೇಡಿಕೆ ನಮ್ಮದಾಗಿದೆ ಎಂದು ವಿವರಿಸಿದರು. ಭಟ್ಕಳ ಅರಣ್ಯ ಅತಿಕ್ರಮಣದಾರರ ಹೋರಾಟ ಸಮಿತಿಯ ಅಧ್ಯಕ್ಷ ರಾಮಾ ಮೊಗೇರ ಮಾತನಾಡಿ, ಭಟ್ಕಳದಲ್ಲಿ ಅತಿಕ್ರಮಣದಾರರ ವಿರುದ್ಧ ಅಧಿಕಾರಿಗಳು ಸುಳ್ಳು ಪ್ರಕರಣವನ್ನು ದಾಖಲಿಸಿ ಹಿಂಸೆ ನೀಡುತ್ತಿದ್ದಾರೆ. ಅತಕ್ರಮಣದಾರರ ಮೇಲಿನ ದಬ್ಬಾಳಿಕೆ ನಿಲ್ಲದೇ ಇದ್ದರೆ ಅರಣ್ಯ ಇಲಾಖೆಯ ಕಚೇರಿಯ ಮುಂದೆ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. 

ನ್ಯಾಯವಾದಿ ದಿನಕರ ಪಿ.ಬಿ., ಗಣಪತಿ ನಾಯ್ಕ ಜಾಲಿ, ಮುನೀರ್, ಸುಲೇಮಾನ್, ರಿಜ್ವಾನ್, ದೇವರಾಜ, ಚಂದ್ರ ಗೊಂಡ, ದೇವದಾಸ ಜಾಲಿ ಮೊದಲಾದವರು ಉಪಸ್ಥಿತರಿದ್ದರು.
 

Read These Next

ಪ್ರಜಾಧ್ವನಿ ಸಮಾವೇಶ: ಭಟ್ಕಳದಿಂದ ಕುಮಟಾ ದ ವರೆಗೆ ಬೈಕ್ ರ್ಯಾಲಿ ಮೂಲಕ ಶಕ್ತಿ ಪ್ರದರ್ಶನ

ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ಆಯೋಜನೆಗೊಂಡಿದ್ದ ಪ್ರಜಾಧ್ವನಿ- 2 ಸಮಾವೇಶಕ್ಕೂ ಪೂರ್ವ ಬೃಹತ್ ಬೈಕ್ ರ್ಯಾಲಿ ಮೂಲಕ ಕರಾವಳಿಯಲ್ಲಿ ...

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...