ಮುರುಡೇಶ್ವರಕ್ಕೆ ಬಂದಿದ್ದ ಪ್ರವಾಸಿಗರಿಬ್ಬರು ನೀರು ಪಾಲು

Source: SO News | By Laxmi Tanaya | Published on 30th August 2020, 6:44 PM | Coastal News | State News | Don't Miss |

ಭಟ್ಕಳ: ಮುರ್ಡೇಶ್ವರಕ್ಕೆ ಬಂದಿದ್ದ ಎರಡು ಪ್ರತ್ಯೇಕ ಪ್ರವಾಸಿಗರ ತಂಡದಲ್ಲಿ ಇಬ್ಬರು ವ್ಯಕ್ತಿಗಳು ಸಮುದ್ರ ಪಾಲಾದ ಘಟನೆ ರವಿವಾರ ನಡೆದಿದೆ.

ಬೆಂಗಳೂರಿನಿoದ ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದ 9 ಸ್ನೇಹಿತರು ತಂಡ ಈಜಲು ಸಮುದ್ರದ ನೀರಿಗೆ ಇಳಿದಿದ್ದರು ಅದರಲ್ಲಿ 26 ವರ್ಷದ ಅಭಿಜಿತ್  ಎಂಬಾತ ನೀರು ಪಾಲಾಗಿದ್ದಾನೆ. ಈತ ಪಶ್ಚಿಮ ಬಂಗಾಳದ ಮೂಲದ ವ್ಯಕ್ತಿ ಎಂದು ತಿಳಿದು ಬಂದಿದೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದರು ಎನ್ನಲಾಗಿದ್ದು ಸಮುದ್ರದಲ್ಲಿ ಭಾರಿ ಅಲೆಗಳೊಂದಿಗೆ ಈಜಾಡಾಲು ತೆರಳಿದಾಗ ಸಾವನ್ನಪ್ಪಿದ್ದು ಈತನ ಶವ ಪತ್ತೆಯಾಗಿದೆ.

ಇವರೆಲ್ಲರೂ ನಾಳೆ ಬೈಂದೂರಿನಲ್ಕಿ ನಡೆಯುವ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದು, ಮುರ್ಡೇಶ್ವರ ದೇವರ ದರ್ಶನ ಮಾಡಲು ಆಗಮಿಸಿದ್ದರು.  ಆದರೆ ದುರ್ದೈವಶಾವತ್ ನೀರಿನಲ್ಲಿ ಮುಳುಗಿದ್ದಾರೆ.

ಶಿವಮೊಗ್ಗ ಹಳೇ ಸೊರಬದಿಂದ  ೬ ಜನರ ತಂಡ ಪ್ರವಾಸಕ್ಕೆ ಬಂದವರು  ಸಮುದ್ರದಲ್ಲಿ ಈಜಲು ಇಳಿದಿದ್ದರು.  ಅಲೆಗಳ ಅಬ್ಬರಕ್ಕೆ ಹಳೆ ಸೊರಬ ಮೂಲದ 18 ವರ್ಷದ  ಯುವಕ ಶರತ್  ಕೊಚ್ಚಿ ಹೋಗಿದ್ದ. ಈತನ ಮೃತದೇಹ ತೂದಳ್ಳಿ ಬಳಿ  ದೊರೆತಿದೆ ಎಂದು ತಿಳಿದು ಬಂದಿದೆ. ಮುರುಡೇಶ್ವರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...

ಮುಂಡಗೋಡ: ಮೋದಿ ಸುಳ್ಳುಗಳ ಸರದಾರ, ಬಿಜೆಪಿ ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ ವಾಗ್ದಾಳಿ

ಯುವಕರು ಕೆಲಸ ಕೊಡಿ ಎಂದರೆ ಪಕೋಡಾ ಮಾರಲು ಹೋಗಿ ಎಂದು ಪ್ರಧಾನಿ ಮೋದಿಯವರು ವಿದ್ಯಾವಂತ ಯುವಜನರಿಗೆ ಬೇಜವಾಬ್ದಾರಿ ಹೇಳಿಕೆ ಕೊಟ್ಟರು. ...

ಅತಿಕ್ರಮಣದಾರರ ವಿಚಾರದಲ್ಲೂ ಬಿಜೆಪಿಯಿಂದ ರಾಜಕೀಯ; ಮುಂಡಗೋಡದಲ್ಲಿ ಡಿಕೆಶಿ ವಾಗ್ದಾಳಿ

ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರಳು ಮಾಡಿದೆ. ಅತಿಕ್ರಮಣದಾರರ ...