ಇದು ಮುಸ್ಲಿಮರ ಪ್ರತಿಭಟನೆಯಲ್ಲ; ಅನ್ಯಾಯಕ್ಕೊಳಗಾದವರ ಪರ ಅಕ್ರಮಿಗಳ ವಿರುದ್ಧ ಶಾಂತಿಪ್ರೀಯ ಭಟ್ಕಳ ಜನತೆಯ ಪ್ರತಿಭಟನೆ-ಮೌಲಾನ ಇಲ್ಯಾಸ್ ನದ್ವಿ

Source: SOnews | By Staff Correspondent | Published on 17th November 2023, 4:36 PM | Coastal News |

 

ಭಟ್ಕಳ: ಭಟ್ಕಳದಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯು ಮುಸ್ಲಿಮರ ಪ್ರತಿಭಟನೆಯಲ್ಲಿ ಬಲದಾಗಿ ಅನ್ಯಾಯಕ್ಕೊಳಗಾದವರ ಪರವಾಗಿ ಮತ್ತು ಅಕ್ರಮಿಗಳ ವಿರುದ್ಧ ಭಟ್ಕಳದ ಶಾಂತಿಯ ಪ್ರೀಯ ಹಿಂದು-ಮುಸ್ಲಿಮ್, ಕ್ರೈಸ್ತರು ಮಾಡಿದ ಪ್ರತಿಭನೆಯಾಗಿದೆ ಎಂದು ಮೌಲಾನ ಅಲಿಮಿಯಾ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಮುಸ್ಲಿಮ್ ವೈಯಕ್ತಿಕ ಕಾನೂನುಮಂಡಳಿ ಸದಸ್ಯ ಮೌಲಾನ ಮುಹಮ್ಮದ್ ಇಲ್ಯಾಸ್ ನದ್ವಿ ಹೇಳಿದರು.

ಅವರು ಇಸ್ರೇಲ್ ಭಯೋತ್ಪಾದಕ ಸೈನಿಕರು ಅಮಾಯಕ ಫೆಲಿಸ್ತೀನಿಯರ ವಿರುದ್ಧ ನಡೆಸುತ್ತಿರುವ ನರಮೇಧವನ್ನು ಖಂಡಿಸಿ ತಂಝೀಮ್ ನೇತೃತ್ವದಲ್ಲಿ ಆಯೋಜಿಸಿದ್ದ  ಬೃಹತ್ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಭಾರತವು ಯಾವಾಗಲು ಫೆಲಿಸ್ತೀನಿ ನಾಗರೀಕರ ಪರವಾಗಿದೆ. ಜಗತ್ತಿನ ಎಲ್ಲ ರಾಷ್ಟ್ರಗಳು ಒಟ್ಟಾಗಿದ್ದರೂ ಭಾರತದ ದ್ವನಿಯನ್ನು ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ. ಅಟಲ್ ಬಿಹಾರಿ ವಾಜಪೇಯಿಯವರು ಸಂಸತ್ತಿನಲ್ಲಿ ಎದ್ದುನಿಂತು ಫೆಲಿಸ್ತೀನಿಯನ್ನರ ಪರವಾಗಿ ಮಾತನಾಡಿದ್ದು ಜಗತ್ತು ಇಂದಿಗೂ ಮರೆತಿಲ್ಲ. ಭಾರತ ಸರ್ಕಾರವು ಫೆಲಿಸ್ತೀನಿಯರಿಗೆ ನೀಡುತ್ತಿರುವ ಪರಿಹಾರವನ್ನು ಇನ್ನಷ್ಟು ಹೆಚ್ಚಿಸಬೇಕು, ಭಾರತದ ಅನೇಕ ಹಿಂದುಗಳು ಮುಸ್ಲಿಮರಿಗಿಂತಲೂ ಹೆಚ್ಚು ಫೆಲಿಸ್ತೀನಿಯರ ಪರವಾಗಿದ್ದಾರೆ. ನಾವು ಅಕ್ರಮಿಗಳಿಗೆ ಸಹಾಯ ಮಾಡಿದರೆ ನಾಳೆ ನಮ್ಮ ಮೇಲೂ ಅಕ್ರಮವಾಗುವುದು. ಆದ್ದರಿಂದ ಅನ್ಯಾಯ, ಮರ್ದನಕ್ಕೊಳಗಾದ ಫೆಲಿಸ್ತೀನಿಯನ್ನರ ಪರ ಸಹಾಯಕ್ಕೆ ಕೇಂದ್ರ ಸರ್ಕಾರ ನಿಂತುಕೊಂಡಿದೆ ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.  

ಈ ಸಂದರ್ಭದಲ್ಲಿ ತಂಝೀಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಕೀಬ್ ಎಂ.ಜೆ., ರಾಜಕೀಯ ಸಮಿತಿ ಸಂಚಾಲಕ ಸೈಯ್ಯದ್ ಇಮ್ರಾನ್ ಲಂಕಾ, ಮುಸ್ಲಿಮ್ ಯುತ್ ಫೆಡರೇಶನ್ ಅಧ್ಯಕ್ಷ ಅಝೀಝುರ‍್ರಹ್ಮಾನ್ ನದ್ವಿ ರುಕ್ನುದ್ದೀನ್, ಜಮಾಆತುಲ್ ಮುಸ್ಲಿಮೀನ್ ಪ್ರಧಾನ ಕಾಝಿ ಮೌಲಾನ ಅಬ್ದುಲ್ ರಬ್ ನದ್ವಿ ಮುಂತಾದವರು ಇದ್ದರು.

 

Read These Next

ಕಾರವಾರ: ಹಣ, ಉಡುಗೊರೆ ಹಂಚಿಕೆ ಬಗ್ಗೆ ಹೆಚ್ಚಿನ ನಿಗಾ ವಹಿಸಿ : ವಿಶೇಷ ವೆಚ್ಚ ವೀಕ್ಷಕ ಬಿ.ಮುರಳಿ ಕುಮಾರ್

ಮತದಾರರಿಗೆ ಹಣ, ಉಡುಗೊರೆ ಮತ್ತಿತರ ಆಮಿಷಗಳನ್ನು ಒಡ್ಡುವುದರ ಕುರಿತಂತೆ ತೀವ್ರ ನಿಗಾ ವಹಿಸಬೇಕು, ಈ ಕುರಿತಂತೆ ದೂರುಗಳು ಬಂದ ...

ಕಾರವಾರ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ತಿಂಗಳಿಗೆ ಹತ್ತೂವರೆ ಸಾವಿರ: ಸೈಲ್

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನ ಗೆಲ್ಲಿಸಿದರೆ ತಿಂಗಳಿಗೆ ಹತ್ತೂವರೆ ಸಾವಿರ ಬಡ ಮಹಿಳೆಯರ ಖಾತೆಗೆ ಬರಲಿದೆ. ಈ ಅವಕಾಶವನ್ನ ...

ಭಟ್ಕಳದ ಅಂಜುಮಾನ್ ಇಂಜಿನಿಯರಿಂಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ - ಡಾ. ದಿನೇಶ್ ಗಾಂವ್ಕರ್

೨೦೨೪- ಶಿಕ್ಷಕ ಶೀರ್ಷಿಕೆ ಅಡಿಯಲ್ಲಿ ಅಂಜುಮಾನ್ ತಾಂತ್ರಿಕ ವಿದ್ಯಾಲಯದಲ್ಲಿ ಕನ್ನಡ ವೇದಿಕೆಯ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ...