ಉತ್ತರಕನ್ನಡ ಜಿಲ್ಲಾ ಮುಸ್ಲಿಮ್ ಒಕ್ಕೂಟ ‘ರಾಬ್ತೆ ಮಿಲ್ಲತ್’ ಅಸ್ತಿತ್ವಕ್ಕೆ

Source: sonews | By Staff Correspondent | Published on 30th March 2018, 7:19 PM | Coastal News | State News | Don't Miss |


** ಜಿಲ್ಲಾಧ್ಯಾಕ್ಷರಾಗಿ ನ್ಯಾಯಾವಾದಿ ಎ.ಪಿ.ಮುಜಾವರ್ **

** ಪ್ರಧಾನ ಕಾರ್ಯದರ್ಶಿಯಾಗಿ ತಲ್ಹಾ ಸಿದ್ದಿಬಾಪ** 

ಶಿರಸಿ: ಉತ್ತರಕನ್ನಡ ಜಿಲ್ಲೆಯ ಸಮಸ್ತ ಸುನ್ನಿ, ಸಲಫಿ, ತಬ್ಲಿಗಿ ವಿಚಾರಧಾರೆಯ ಜಿಲ್ಲಾ ಮುಸ್ಲಿಮ್ ಒಕ್ಕೂಟ ‘ರಾಬ್ತೆ ಮಿಲ್ಲತ್’ ಅಸ್ತಿತ್ವಕ್ಕೆ ಬಂದಿದ್ದು ಜಿಲ್ಲಾಧ್ಯಕ್ಷರಾಗಿ ಹಳಿಯಾಳದ ನ್ಯಾಯಾವಾದಿ ಅಝೀಮುದ್ದೀನ್ ಮುಜಾವರ್, ಪ್ರಧಾನ ಕಾರ್ಯದರ್ಶಿಯಾಗಿ ಭಟ್ಕಳದ ಮುಹಮ್ಮದ್ ತಲ್ಹಾ ಸರ್ವಾನುಮತದೊಂದಿಗೆ ಆಯ್ಕೆಯಾಗಿದ್ದಾರೆ.

ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಯೂಸೂಫ್ ಕನ್ನಿ  ಅಧ್ಯಕ್ಷತೆಯಲ್ಲಿ ಶಿರಸಿಯ ಮನಿಯಾರ್ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲೆಯ ಸಮಸ್ತ ಮುಸ್ಲಿಮ ಮುಖಂಡರ ಸಭೆಯಲ್ಲಿ ಈ ನೇಮಕ ನಡೆಯಿತು.

ಉಪಾಧ್ಯಕ್ಷರುಗಳಾಗಿ ಶಿರಸಿಯ ಮೌಲಾನ ಅಬ್ದುಲ್ ಶಹೀದ್, ಅಬ್ದುಲ್ ಬಷೀರ್ ಹೊನ್ನಾವರದ ಮುಹಮ್ಮದ್ ಅಶ್ಫಾಖ್, ಹಳಿಯಾಳದ ರಿಝ್ವಾನ್, ಕಾರವಾರದ ಮುಹಮ್ಮದ್ ಮನ್ಸೂರ್, ಹಾಗೂ ವಲ್ಕಿಯ ಮುಹಿದ್ದೀನ್ ಸಾಹೇಬ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಗಳಾಗಿ ಕುಮಟಾದ ಮುಝಫ್ಫರ್, ಅಬ್ದುಲ್ ಕಾದಿರ್ ಮುಂಡಗೋಡ, ಮುಹಮ್ಮದ್ ಯೂಸೂಫ್ ಮೊಗದ್ ಯಲ್ಲಾಪುರ, ಮುಹಮ್ಮದ್ ನಝೀರ್ ಸಿದ್ಧಾಪುರ, ಹಾಗೂ ಎಂ.ಆರ್.ಮಾನ್ವಿ ಭಟ್ಕಳ ಆಯ್ಕೆಯಾಗಿದ್ದಾರೆ. 

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಮಾತೆ ಇಸ್ಲಾಮಿ ಹಿಂದ್ ಕರ್ನಾಟಕದ ಪ್ರಧಾನ ಕಾರ್ಯದರ್ಶಿಮುಹಮ್ಮದ್ ಯೂಸೂಫ್ ಕನ್ನಿ, ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಮುಸ್ಲಿಮ್ ಸಮುದಾಯವನ್ನು ಒಗ್ಗೂಡಿಸಿ ‘ರಾಬ್ತೆ ಮಿಲ್ಲತ್’ ಎಂಬ ಹೆಸರಿನೊಂದಿಗೆ ಜಿಲ್ಲಾಮಟ್ಟದ ಮುಸ್ಲಿಮ್ ಒಕ್ಕೂಟವನ್ನು ಸ್ಥಾಪಿಸಲಾಗುತ್ತಿದ್ದು ಇದುವರೆಗೆ ರಾಜ್ಯದ 25ಜಿಲ್ಲೆಗಳಲ್ಲಿ ಈ ಒಕ್ಕೂಟ ಅಸ್ತಿತ್ವಕ್ಕೆ ಬಂದಿದ್ದು ಉತ್ತರಕನ್ನಡ ಜಿಲ್ಲೆಯಲ್ಲಿಯೂ ಈಗ ನೂತನವಾಗಿ ಒಕ್ಕೂಟವನ್ನು ಸ್ಥಾಪಿಸಲಾಗಿದೆ. ಮುಸ್ಲಿಮರಲ್ಲಿ ಒಗ್ಗಟ್ಟನ್ನು ಸ್ಥಾಪಿಸುವುದು, ಮುಸ್ಲಿಮರ ಸೊತ್ತು,ವಿತ್ತ,ಜೀವವನ್ನು ರಕ್ಷಿಸುವುದು ಹಾಗೂ ಹಿಂದು-ಮುಸ್ಲಿವiರು ಪರಸ್ಪರ ಅರಿತುಕೊಂಡು ಶಾಂತಿ, ಸೌಹಾರ್ಧತೆಯೊಂದಿಗೆ ಜೀವಿಸುವುದರ ಮೂಲಕ ದೇಶದ ಪ್ರಗತಿ ಮತ್ತು ಅಭಿವೃದ್ಧಿಯನ್ನು ಸಾಧಿಸುವುದು ಈ ಮೂರು ಉದ್ದೇಶಗಳೊಂದಿಗೆ ಒಕ್ಕೂಟ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತದೆ. ರಾಜಕೀಯ ಯಾವುದೇ ವಿಷಯವು ಈ ಒಕ್ಕೂಟದ ಪರೀಧಿಯೊಳಗೆ ಬರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 

ಪ್ರಸ್ತಾವಿಕ ಮಾತನಾಡಿದ ಶಿವಮೊಗ್ಗ ವಿಭಾಗ ಸಂಚಾಲಕ ಮೌಲಾನ ಸಲೀಮ್ ಉಮರಿ ಮುಸ್ಲಿಮ ಸಮುದಾಯದಲ್ಲಿ ಹಲವು ವಿಚಾರಧಾರೆ, ಪಂಗಡಗಳಿದ್ದು ಅವೆಲ್ಲವನ್ನು ಬದಿಗಿಟ್ಟು ಸಮುದಾಯದ ಒಳಿತಿಗಾಗಿ ಒಂದೇ ವೇದಿಕೆಯಡಿ ಕಾರ್ಯನಿರ್ವಹಿಸಬೇಕು. ಇಲ್ಲಿನ ಹಿಂದೂ-ಮುಸ್ಲಿಮ ಮತ್ತಿತರರ ಧರ್ಮಿಯರ ನಡುವೆ ಏರ್ಪಟ್ಟಿರುವ ಅಂತರವನ್ನು ದೂರಮಾಡಿ ನಾವೆಲ್ಲರೂ ಈ ದೇಶದ ಪ್ರಜೆಗಳೆಂಬ ನೆಲೆಯಲ್ಲಿ ಒಂದಾಗಬೇಕು ಎಂದು ಕರೆ ನೀಡಿದರು.

Read These Next

ಬೀಫ್ ಎಕ್ಸ್‌ಪೋರ್ಟ್ ಕಂಪನಿ ಸೇರಿದಂತೆ ಪಾಕಿಸ್ತಾನಿ ಏಜೆನ್ಸಿಗಳಿಂದಲೂ ಬಿಜೆಪಿ ದೇಣಿಗೆ ತೆಗೆದುಕೊಂಡಿದೆ- ಭಟ್ಕಳದಲ್ಲಿ ಕಾಂಗ್ರೆಸ್ ಸುದ್ದಿಗೋಷ್ಠಿ

ಭಟ್ಕಳ:  ಗೋಹತ್ಯೆ ವಿರೋಧಿಸುವ ಬಿಜೆಪಿ ಬೀಫ್ ರಫ್ತು ಮಾಡುವ ಕಂಪನಿ ಸೇರಿದಂತೆ ಪಾಕಿಸ್ಥಾನಿ ಎಜೆನ್ಸಿಗಳಿಂದಲೂ ದೇಣಿಗೆ ...

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...

ಮುಂಡಗೋಡ: ಮೋದಿ ಸುಳ್ಳುಗಳ ಸರದಾರ, ಬಿಜೆಪಿ ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ ವಾಗ್ದಾಳಿ

ಯುವಕರು ಕೆಲಸ ಕೊಡಿ ಎಂದರೆ ಪಕೋಡಾ ಮಾರಲು ಹೋಗಿ ಎಂದು ಪ್ರಧಾನಿ ಮೋದಿಯವರು ವಿದ್ಯಾವಂತ ಯುವಜನರಿಗೆ ಬೇಜವಾಬ್ದಾರಿ ಹೇಳಿಕೆ ಕೊಟ್ಟರು. ...

ಅತಿಕ್ರಮಣದಾರರ ವಿಚಾರದಲ್ಲೂ ಬಿಜೆಪಿಯಿಂದ ರಾಜಕೀಯ; ಮುಂಡಗೋಡದಲ್ಲಿ ಡಿಕೆಶಿ ವಾಗ್ದಾಳಿ

ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರಳು ಮಾಡಿದೆ. ಅತಿಕ್ರಮಣದಾರರ ...