ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಶಹಬಾಝ್ ಶರೀಫ್ ಆಯ್ಕೆ

Source: S O News | By I.G. Bhatkali | Published on 14th April 2022, 7:14 AM | Global News |

ಇಸ್ಲಾಮಾಬಾದ್: ಪಾಕಿಸ್ತಾನ ಮುಸ್ಲಿಮ್ ಲೀಗ್ನವಾಝ್ (ಪಿಎಂಎಲ್-ಎನ್) ಅಧ್ಯಕ್ಷ ಶಹಬಾಝ್ ಶರೀಫ್ ಅವರು ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಸೋಮವಾರ ನಡೆದ ಚುನಾವಣೆಯನ್ನು ಖುರೇಷಿ ಬಹಿಷ್ಕರಿಸಿದ ಬಳಿಕ 70ರ ಹರೆಯದ ಶಹಬಾಝ್ ಮಾತ್ರ ಸ್ಪರ್ಧೆಯಲ್ಲಿ ಉಳಿದ ಏಕೈಕ ಅಭ್ಯರ್ಥಿಯಾಗಿದ್ದರು. ಸದನದಲ್ಲಿ ಒಟ್ಟು 342 ಸದಸ್ಯರಿದ್ದು, ವಿಜೇತರಾಗುವ ಅಭ್ಯರ್ಥಿಗೆ ಕನಿಷ್ಠ 172 ಸದಸ್ಯರ ಬೆಂಬಲ ಬೇಕು.

ತನ್ನ ಪಾಕಿಸ್ತಾನ್ ತೆಕೆ ಇನ್ಸಾಫ್ ಪಕ್ಷ ಮತದಾನವನ್ನು ಬಹಿಷ್ಕರಿಸುತ್ತದೆ ಎಂದು ಪ್ರತಿಸ್ಪರ್ಧಿ ಅಭ್ಯರ್ಥಿಯಾದ ಶಾ ಮೆಹಮೂದ್ ಖುರೇಷಿ ಘೋಷಿಸಿ, ಸಭಾತ್ಯಾಗ ಮಾಡಿದ ಬಳಿಕ ಈ ಆಯ್ಕೆ ನಡೆದಿದೆ.

ಮೂರು ಬಾರಿ ಪ್ರಧಾನಿಯಾಗಿದ್ದ ನವಾಝ್ ಶರೀಫ್ ಅವರ ಕಿರಿಯ ಸಹೋದರ ಶಹಬಾಝ್ 174 ಮತಗಳನ್ನು ಪಡೆಯುವ ಮೂಲಕ ಅವರು ಪಾಕಿಸ್ತಾನದ 23ನೇ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ದೇಶದ ಅತಿ ಜನಪ್ರಿಯ ಹಾಗೂ ರಾಜಕೀಯವಾಗಿ ನಿರ್ಣಾಯಕವಾದ ಪಂಜಾಬ್ ಪ್ರಾಂತದಲ್ಲಿ ಅವರು ಮೂರು ಬಾರಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು.

ಅವಿಶ್ವಾಸ ನಿರ್ಣಯದ ಮೂಲಕ ಇಮ್ರಾನ್ ಖಾನ್ ಅವರ ಸ್ಥಾನಕ್ಕೆ ಬೇರೊಬ್ಬರನ್ನು ಆಯ್ಕೆ ಮಾಡುವ ಪ್ರತಿಪಕ್ಷಗಳ ಜಂಟಿ ಸಭೆಯಲ್ಲಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಹಾಗೂ ಪಾಕಿಸ್ತಾನ ಪೀಪಲ್ಸ್ ಪಕ್ಷ (ಪಿಪಿಪಿ)ದ ಸಹ-ಅಧ್ಯಕ್ಷ ಆಸಿಫ್ ಅಲಿ ಝರ್ದಾರಿ ಅವರು ಶಹಬಾಝ್ ಅವರ ಹೆಸರನ್ನು ಪ್ರಧಾನ ಮಂತ್ರಿ ಹುದ್ದೆಗೆ ಪ್ರಸ್ತಾವ ಮಾಡಿದ್ದರು.

ಅವಿಶ್ವಾಸ ನಿರ್ಣಯದ ಮತದ ಮೂಲಕ ಇಮ್ರಾನ್ ಖಾನ್ ಅವರನ್ನು ಪ್ರಧಾನ ಮಂತ್ರಿ ಹುದ್ದೆಯಿಂದ ವಜಾಗೊಳಿಸಿದ ಬಳಿಕ ಸದನದಲ್ಲಿ ನೂತನ ಪ್ರಧಾನ ಮಂತ್ರಿ ಆಯ್ಕೆ ಪ್ರಕ್ರಿಯೆ ರವಿವಾರ ನಡೆಯಿತು. ಅವಿಶ್ವಾಸ ನಿರ್ಣಯದ ಮತದಾನದಲ್ಲಿ ಅಧಿಕಾರ ಕಳೆದುಕೊಂಡ ಪಾಕಿಸ್ತಾನದ ಮೊದಲ ಪ್ರಧಾನಿ ಇಮ್ರಾನ್ ಖಾನ್.

ಮೂರು ಬಾರಿ ಮುಖ್ಯಮಂತ್ರಿ: ಪಾಕಿಸ್ತಾನದ 22 ಕೋಟಿ ಜನಸಂಖ್ಯೆಯಲ್ಲಿ ಶೇ. 60 ಜನರು ವಾಸಿಸುತ್ತಿರುವ, ದೇಶದ ಅತಿ ದೊಡ್ಡ ಹಾಗೂ ಪ್ರಭಾವಶಾಲಿ ಪಂಜಾಬ್ ಪ್ರಾಂತದ ಮುಖ್ಯಮಂತ್ರಿಯಾಗಿ ಶಹಬಾಝ್ ಅವರು ಮೂರು ಬಾರಿ ಸೇವೆ ಸಲ್ಲಿಸಿದ್ದಾರೆ. ಪಂಜಾಬ್ ಪ್ರಾಂತದ ಮುಖ್ಯಮಂತ್ರಿಯನ್ನಾಗಿ ಶಹಬಾಝ್ ಅವರ ಪುತ್ರ ಹಂಝ ಅವರನ್ನು ವಿಧಾನ ಸಭೆ ಕಳೆದ ವಾರ ಆಯ್ಕೆ ಮಾಡಿದೆ. ಆದರೆ, ಅವರು ಇದುವರೆಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿಲ್ಲ.

Read These Next

ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಿದ ವಿಶ್ವಸಂಸ್ಥೆ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ: ವಿಶ್ವ ಆರೋಗ್ಯ ಸಂಸ್ಥೆ

ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯ ಬಳಿಕ ನೆಲೆಸಿರುವ ಭೀಕರ ಪರಿಸ್ಥಿತಿಯನ್ನು ಅವಲೋಕಿಸಲು ಈ ...