ತೀಸ್ತಾಗೆ ಸುಪ್ರೀಂನಿಂದ ಮಧ್ಯಂತರ ಜಾಮೀನು

Source: Vb | By I.G. Bhatkali | Published on 3rd September 2022, 12:07 PM | National News | Don't Miss |

ಹೊಸದಿಲ್ಲಿ: ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರಿಗೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

2002ರ ಗುಜರಾತ್ ಗಲಭೆ ಪ್ರಕರಣಗಳಲ್ಲಿ 'ಅಮಾಯಕ ಜನರನ್ನು' ಸಿಲುಕಿಸಲು ಸುಳ್ಳು ಸಾಕ್ಷಾಧಾರಗಳನ್ನು ಸೃಷ್ಟಿಸಿದ್ದ ಆರೋಪದಲ್ಲಿ ಸೆಟಲ್ವಾಡ್ ಅವರನ್ನು ಕಳೆದ ಜೂನ್‌ನಲ್ಲಿ ಬಂಧಿಸಲಾಗಿತ್ತು. ತನ್ನ ಪಾಸ್‌ ಪೋರ್ಟ್‌ನ್ನು ನ್ಯಾಯಾಲಯಕ್ಕೆ ಒಪ್ಪಿಸುವಂತೆ ಅವರಿಗೆ ಸೂಚಿಸಲಾಗಿದೆ. ಮೇಲ್ಮನವಿದಾರರು ಕಳೆದ ಎರಡು ತಿಂಗಳಿಗೂ ಹೆಚ್ಚಿನ ಅವಧಿಯಿಂದ ಬಂಧನದಲ್ಲಿದ್ದಾರೆ ಮತ್ತು ಅವರ ಪ್ರಧಾನ ಅರ್ಜಿಯು ಉಚ್ಚ ನ್ಯಾಯಾಲಯದ ಪರಿಗಣನೆಗೆ ಬಾಕಿಯಿರುವಾಗ ಈ ಹಂತದಲ್ಲಿ ಅವರು ಮಧ್ಯಂತರ ಜಾಮೀನು ಪಡೆಯಲು ಖಂಡಿತವಾಗಿಯೂ ಅರ್ಹರಾಗಿದ್ದಾರೆ ಎಂದು ಸರ್ವೋಚ್ಚ ನ್ಯಾಯಾಲಯವು ಸೆಟಲ್ವಾಡ್ ಅವರಿಗೆ ಜಾಮೀನು ಮಂಜೂರು ಮಾಡುತ್ತ ಹೇಳಿತು.

ಗುರುವಾರವೂ ಈ ವಿಷಯ ವಿಚಾರಣೆಗೆ ಬಂದಿದ್ದು, ಸೆಟಲ್ವಾಡ್ ವಿರುದ್ಧದ ಆರೋಪಗಳು ಸಾಮಾನ್ಯ ಐಪಿಸಿ ಅಪರಾಧಗಳಾಗಿವೆ ಮತ್ತು ಅವು ಜಾಮೀನು ನೀಡಿಕೆಯನ್ನು ನಿಷೇಧಿಸುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಮೌಖಿಕವಾಗಿ ಅಭಿಪ್ರಾಯಿಸಿದ್ದರು. ಇವು ಕೊಲೆ ಅಥವಾ ದೈಹಿಕ ಗಾಯದಂತಹ ಅಪರಾಧಗಳಲ್ಲ, ಆದರೆ ಫೋರ್ಜರಿ ಇತ್ಯಾದಿಗಳಂತಹ ದಾಖಲೆಗಳನ್ನು ಆಧರಿಸಿವೆ. ಇಂತಹ ಅಪರಾಧಗಳಲ್ಲಿ ಸಾಮಾನ್ಯ ಪೊಲೀಸ್ ಕಸ್ಟಡಿ ಅವಧಿ ಮುಗಿದ ನಂತರ ಪೊಲೀಸರು ಕಸ್ಟಡಿಗಾಗಿ ಕೇಳುವುದರಲ್ಲಿ ಯಾವುದೇ ಅರ್ಥವಿಲ್ಲ ಎನ್ನುವುದು ಸಾಮಾನ್ಯ ಪರಿಕಲ್ಪನೆಯಾಗಿದೆ ಎಂದು ನ್ಯಾ. ಲಲಿತ್ ಹೇಳಿದ್ದರು.

ಜಾಮೀನು ಅರ್ಜಿಗೆ ಉತ್ತರವಾಗಿ ಗುಜರಾತ್ ಸರಕಾರವು, ಸೆಟಲ್ವಾಡ್ ಅವರು ಹಿರಿಯ ರಾಜಕೀಯ ನಾಯಕರೋರ್ವರ ಆಣತಿಯ ಮೇರೆಗೆ ಇತರ ಆರೋಪಿಗಳೊಂದಿಗೆ ಸೇರಿಕೊಂಡು ಸಂಚನ್ನು ರೂಪಿಸಿದ್ದರು ಎಂದು ತಿಳಿಸಿತು.

ಅಹ್ಮದಾಬಾದ್‌ನಲ್ಲಿಯ ಸೆಷನ್ಸ್ ನ್ಯಾಯಾಲಯವು ಜು.30ರಂದು ಸೆಟಲ್ವಾಡ್‌ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.

ಆ.22ರಂದು ಸರ್ವೋಚ್ಚ ನ್ಯಾಯಾಲಯವು ಸೆಟಲ್ವಾಡ್‌ರ ಜಾಮೀನು ಅರ್ಜಿಗೆ ಉತ್ತರಿಸುವಂತೆ ಗುಜರಾತ್ ಸರಕಾರಕ್ಕೆ ನಿರ್ದೇಶ ನೀಡಿತ್ತು. 

ವಿಳಂಬಕ್ಕೆ ಸುಪ್ರೀಂ ಅಸಮಾಧಾನ: ಗುರುವಾರದ ವಿಚಾರಣೆ ಸಂದರ್ಭದಲ್ಲಿ ಸರ್ವೋಚ್ಚ 'ನ್ಯಾಯಾಲಯವು ಸೆಟಲ್ವಾಡ್‌ ಜಾಮೀನು ಅರ್ಜಿ ಯನ್ನು ವಿಚಾರಣೆಗೆ ಪಟ್ಟಿ ಮಾಡುವಲ್ಲಿ ಗುಜರಾತ್ ಉಚ್ಚ ನ್ಯಾಯಾಲಯದಿಂದ ವಿಳಂಬದ ಬಗ್ಗೆ ಅಚ್ಚರಿ ಯನ್ನು ವ್ಯಕ್ತಪಡಿಸಿತ್ತು. ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಆ 3ರಂದು ರಾಜ್ಯ ಸರಕಾರಕ್ಕೆ ನೋಟಿಸ್ ಹೊರಡಿಸಿದ್ದ ಉಚ್ಚ ನ್ಯಾಯಾಲಯವು ವಿಚಾ ರಣೆಯನ್ನು ಸೆ.19ಕ್ಕೆ ನಿಗದಿಗೊಳಿಸಿತ್ತು.

ಇಂತಹ ಪ್ರಕರಣಗಳಲ್ಲಿ ಮಹಿಳಾ ಆರೋಪಿಯೋರ್ವರಿಗೆ ಉಚ್ಚ ನ್ಯಾಯಾಲಯದಿಂದ ಇಂತಹ ದಿನಾಂಕಗಳನ್ನು ನೀಡಲಾಗಿದ್ದ ಉದಾಹರಣೆಗಳನ್ನು ನಮಗೆ ನೀಡಿ, ಈ ಮಹಿಳೆ ಒಂದು ಅಪವಾದವಾಗಿದ್ದಾರೆಯೇ? ನ್ಯಾಯಾಲಯವು ಈ ದಿನಾಂಕವನ್ನು ನೀಡಲು ಹೇಗೆ ಸಾಧ್ಯ? ಇದು ಗುಜರಾತ್‌ನಲ್ಲಿಯ ಸಾಮಾನ್ಯ ಪದ್ಧತಿಯಾಗಿದೆಯೇ?'ಎಂದು ನ್ಯಾ.ಯು.ಯು.ಲಲಿತ್ ಪ್ರಶ್ನಿಸಿದ್ದರು.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...