ಸಚಿವ ಮಾಂಕಾಳರನ್ನು ಭೇಟಿಯಾದ ಸರಾಬಿ ಹೋರಾಟ ಸಮಿತಿ ನಿಯೋಗ; ನಾನು ಸುಳ್ಳು ಭರವಸೆ ನೀಡುವುದಿಲ್ಲ ಎಂದ ಸಚಿವ

Source: S O news | By Staff Correspondent | Published on 11th March 2024, 4:28 PM | Coastal News |

ಭಟ್ಕಳ: ಸರಾಬಿ ನದಿ ಸ್ವಚ್ಚತೆ ಕುರಿತಂತೆ ಸಕ್ರೀಯವಾಗಿರುವ ಸರಾಬಿ ನದಿ ಹೋರಾಟ ಸಮಿತಿ ನಿಯೋಗವು ಇತ್ತಿಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ್ ವೈದ್ಯರನ್ನು ಭೇಟಿಯಾಗಿ ಸರಾಬಿ ನದಿಯನ್ನು ಕೂಡಲೇ ಸ್ವಚ್ಛಗೊಳಿಸುವಂತೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು. ಆದರೆ ಸಚಿವರಿಂದ ಸರಿಯಾದ ಸ್ಪಂಧನೆ ಸಿಗದೆ ನಿರಾಸೆಯಿಂದ ಮರಳಿದ್ದಾಗಿ ವರದಿಯಾಗಿದೆ.

ನಿಯೋಗದೊಂದಿಗೆ ಮಾತನಾಡಿದ ಸಚಿವ ಮಾಂಕಾಳ್ ವೈದ್ಯ ಸರಾಬಿ ನದಿ ಹೂಳು ತೆಗೆಯುವುದು ಒಂದು ದೊಡ್ಡ ಯೋಜನೆಯಾಗಿದೆ. ಕೇವಲ ಹಿಟಾಚಿ, ಜೆಸಿಬಿ ಯಂತ್ರಗಳ ಮೂಲಕ ನದಿಯ ಹೂಳು ತೆಗೆದು ನದಿಯನ್ನು ಆಳಗೊಳಿಸುವ ಕೆಲಸ ಆಗುವುದಿಲ್ಲ, ಇದಕ್ಕಾಗಿ ಡ್ರೆಜ್ಜಿಂಗ್ ಯಂತ್ರ ತಂದು ಆಳಗೊಳಿಸುವ ಕಾಮಗಾರಿ ಆರಂಭಿಸಬೇಕು, ಆದ್ದರಿಂದ ನಾನು ನಿಮಗೆ ಯಾವುದೇ ಸುಳ್ಳು ಬರವಸೆ ನೀಡಲು ಆಗುವುದಿಲ್ಲ. ಈ ಕೆಲಸ ಮುಂದಿನ ವರ್ಷಕ್ಕೆ ಮಾಡಲು ಸಾಧ್ಯವಾಗುತ್ತದೋ ಎಂದು ನೋಡೋಣ ಎಂದು ತಿಳಿಸಿದ್ದು, ಇದರಿಂದಾಗಿ ನಿಯೋಗಕ್ಕೆ ನಿರಾಸೆಯಾಗಿದೆ ಎಂದು ಹೇಳಲಾಗಿದೆ.  

ಸರಾಬಿ ನದಿ ಸ್ವಚ್ಛತೆಗೆ ನಗರದ ತಗ್ಗು ಪ್ರದೇಶಗಳ ಜನರು ಚಿಂತಾಕ್ರಾಂತರಾಗಿರುವ ಸರಬಿ ನದಿ ಹೋರಾಟ ಸಮಿತಿಯ ಪದಾಧಿಕಾರಿಗಳು ಹೆಚ್ಚು ಕಡಿಮೆ ಪ್ರತಿದಿನ ಸಭೆ ನಡೆಸಿ ಮುಂದಿನ ಯೋಜನೆ ರೂಪಿಸುತ್ತಿದ್ದಾರೆ.

ನಿಯೋಗದ ಪರವಾಗಿ ಮಾತನಾಡಿದ  ಪುರಸಭಾ ಸದಸ್ಯ ಕೈಸರ್ ಮೊಹತೆಶಮ್, ಚೌತ್ನಿ ಮತ್ತು ಮುಂಡಳ್ಳಿ ಕಡೆಗೆ ನದಿಯ ಬದಿಗಳಲ್ಲಿ ಬೇಲಿ ಹಾಕಿರುವುದರಿಂದ ಮಳೆಯ ಸಂದರ್ಭದಲ್ಲಿ ತಗ್ಗು ಪ್ರದೇಶದ ಎಲ್ಲಾ ಜನರಿಗೆ ದೊಡ್ಡ ಸಮಸ್ಯೆಯಾಗಬಹುದು. ಆದರೆ ಘೌಸಿಯಾ ಸ್ಟ್ರೀಟ್, ಮುಶ್ಮಾ ಸ್ಟ್ರೀಟ್, ಖಲೀಫಾ ಸ್ಟ್ರೀಟ್, ಡಾರಂಟ, ಡೊಂಗರಪಳ್ಳಿ, ಬೆಳ್ನಿ ಮುಂತಾದ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ನದಿಯ ಉದ್ದಕ್ಕೂ ಬೇಲಿ ಹಾಕದ ಕಾರಣ ಭಾರೀ ಮಳೆಯ ಸಂದರ್ಭದಲ್ಲಿ ನದಿಯ ನೀರು ಎಲ್ಲಾ ತಗ್ಗು ಪ್ರದೇಶಗಳಿಗೆ ಪ್ರವೇಶಿಸುತ್ತದೆ. ಪ್ರವಾಹದಂತಹ ಪರಿಸ್ಥಿತಿ ಎದುರಾಗಬಹುದು ಎಂದು ತಿಳಿಸಿದ್ದಾರೆ.

ಗೌಷಿಯಾ ಬೀದಿಯಲ್ಲಿರುವ ಪಂಪಿಂಗ್ ಸ್ಟೇಷನ್ ಸಮಸ್ಯೆಗಳು ಮತ್ತು ಕಲುಷಿತಗೊಂಡ ಬಾವಿಗಳಲ್ಲಿ ಚರಂಡಿ ಸಂಗ್ರಹವಾಗಿರುವ ಬಗ್ಗೆಯೂ ದೂರು ಬಂದಿದ್ದು, ಸಚಿವರಿಂದ ತೃಪ್ತಿಕರ ಪ್ರತಿಕ್ರಿಯೆ ಸಿಕ್ಕಿಲ್ಲ. ಇದೇ ಕಾರಣಕ್ಕೆ ನಿಯೋಗ ನಿರಾಸೆಯಿಂದ ಹಿಂತಿರುಗಬೇಕಾಯಿತು ಎನ್ನಲಾಗಿದೆ.

ನಿಯೋಗದಲ್ಲಿ ಮೌಲವಿ ಅಂಜುಮ್ ಗಂಗಾವಳಿ ನದ್ವಿ, ಮುಹಮ್ಮದ್ ಹುಸೇನ್ ಅಸ್ಕರಿ, ಮುಬಶ್ಶಿರ್ ಹುಸೇನ್ ಹಲ್ಲಾರೆ, ಇಮ್ಶಾದ್ ಮುಖ್ತಸರ್, ಅಶ್ಫಾಕ್ ಕೆ.ಎಂ, ಮುಸ್ತಫಾ ಅಸ್ಕರಿ, ಶಮೂನ್ ಹಾಜಿ ಫಖಿ, ಮೌಲವಿ ಇರ್ಷಾದ್ ನಾಯ್ತೆ ನದ್ವಿ, ಇರ್ಶಾದ್ ಸಿದ್ದಿಖಾ, ತಂಝೀಮ್ ಮುಖಂಡರಾದ ಎಸ್.ಎಂ.ಸೈಯದ್ ಪರ್ವೇಜ್, ನ್ಯಾಯವಾದಿ ಇಮ್ರಾನ್ ಲಂಕಾ, ಇಮ್ತಿಯಾಜ್ ಉದಯಾವರ್, ಇರ್ಷಾದ್ ಗವಾಯಿ ಮೊದಲಾದವರು ಉಪಸ್ಥಿತರಿದ್ದರು.

Read These Next

ಕಾರವಾರ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ತಿಂಗಳಿಗೆ ಹತ್ತೂವರೆ ಸಾವಿರ: ಸೈಲ್

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನ ಗೆಲ್ಲಿಸಿದರೆ ತಿಂಗಳಿಗೆ ಹತ್ತೂವರೆ ಸಾವಿರ ಬಡ ಮಹಿಳೆಯರ ಖಾತೆಗೆ ಬರಲಿದೆ. ಈ ಅವಕಾಶವನ್ನ ...

ಭಟ್ಕಳದ ಅಂಜುಮಾನ್ ಇಂಜಿನಿಯರಿಂಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ - ಡಾ. ದಿನೇಶ್ ಗಾಂವ್ಕರ್

೨೦೨೪- ಶಿಕ್ಷಕ ಶೀರ್ಷಿಕೆ ಅಡಿಯಲ್ಲಿ ಅಂಜುಮಾನ್ ತಾಂತ್ರಿಕ ವಿದ್ಯಾಲಯದಲ್ಲಿ ಕನ್ನಡ ವೇದಿಕೆಯ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ...