ಮರ್ಕಝಿ ಜಮಾಅತ್ ನ ಪೋಷಕ  ಸಾದ ಮುಹಮ್ಮದ್ ಮೀರಾ ಸಾಹಿಬ್ ನಿಧನ

Source: SOnews | By Staff Correspondent | Published on 23rd October 2023, 5:39 PM | Coastal News | Don't Miss |

ಭಟ್ಕಳ: ಭಟ್ಕಳದ ಖಾಜಿಯಾ ಸ್ಟ್ರೀಟ್ ನಿವಾಸಿ  ಮರ್ಕಝಿ ಖಲಿಫಾ ಜಮಾಅತುಲ್ ಮುಸ್ಲಿಮೀನ್ ಇದರ ಮಾಜಿ ಪ್ರಧಾನ ಕಾರ್ಯದರ್ಶಿ, ಪೋಷಕರಾಗಿದ್ದ ಹಾಗೂ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಮಾಜಿ ಅಧ್ಯಕ್ಷ  ಸಾದ ಮುಹಮ್ಮದ್ ಮೀರಾ(೭೭) ಸೋಮವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರು ಇಬ್ಬರು ಪುತ್ರರು ಆರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.  

ಅವರು ಕೆಲ ದಿನಗಳಿಂದ ಡೆಂಗ್ಯು ಜ್ವರದಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಆಸ್ಪತ್ರೆಯಲ್ಲೇ ನಿಧನರಾದರು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

ಸಾದಾ ಮೀರಾ ೩೫ ವರ್ಷಗಳ ಕಾಲ ದುಬೈಯಲ್ಲಿ ಉದ್ಯೋಗಿಯಾಗಿದ್ದು ಅಲ್ಲಿಯೇ ಜಮಾಅತೆ ಇಸ್ಲಾಮಿ ಹಿಂದ್ ನ ಸದಸ್ಯರಾದರು. ಇವರು ಪ್ರಮುಖ ವಿದ್ವಾಂಸರ ಭಾಷಣಗಳಲ್ಲಿ ಕ್ಯಾಸೇಟ್ ರೂಪದಲ್ಲಿ ಸಂಗ್ರಹಿಸಿದ್ದಾರೆ. ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಎಲ್ಲ ಭಾಷಣಗಳನ್ನು ಪೈಗಾಮೆ ಇಸ್ಲಾಮ್ ಎಂಬ ವೈಬ್ ಸೈಟ್ ನಲ್ಲಿ ಅವರು ಅಪ್ಲೋಡ್ ಮಾಡಿದ್ದು ಇದರಿಂದಾಗಿ ಜಗತ್ತಿನ ಪ್ರಮುಖ ವಿದ್ವಾಂಸರ ಭಾಷಣಗಳು ಸುಲಭದಲ್ಲಿ ಲಭ್ಯವಾಗುತ್ತವೆ.

ಸಾದ ಮುಹಮ್ಮದ್ ಮೀರಾನ್ ಸಾಹಿಬ್ ಅವರು ದೀರ್ಘಕಾಲದವರೆಗೆ ಜಮಾತೆ ಇಸ್ಲಾಮಿ ಹಿಂದ್ ಸದಸ್ಯರಾಗಿದ್ದರು, ಅವರು ದುಬೈನಲ್ಲಿ ಜಮೀಯತ್ ತರ್ಬಿಯತ್ ಇಸ್ಲಾಮಿಯೊಂದಿಗೆ ಸಂಬಂಧ ಹೊಂದಿದ್ದರು ಮತ್ತು ಅಲ್ಲಿ ಅವರು ಆಡಿಯೊ-ವಿಡಿಯೋ ಕ್ಯಾಸೆಟ್‌ಗಳನ್ನು ನಿರ್ವಹಿಸಿದರು, ಸಾವಿರಾರು ವಿದ್ವಾಂಸರು ಮತ್ತು ಬುದ್ಧಿಜೀವಿಗಳ ಭಾಷಣಗಳನ್ನು ಸಂರಕ್ಷಿಸಿದರು. ಮತ್ತು ಕಠಿಣ ಕೆಲಸಗಾರರಾಗಿದ್ದರು. ಅವರು ರೆಕಾರ್ಡಿಂಗ್‌ನಲ್ಲಿ ಉತ್ತಮ ಕೌಶಲ್ಯವನ್ನು ಹೊಂದಿದ್ದರು, ಪ್ರಪಂಚದಾದ್ಯಂತದ ಜನರು ಅವರ ರೆಕಾರ್ಡ್ ಮಾಡಿದ ಕ್ಯಾಸೆಟ್‌ಗಳನ್ನು ಬಳಸಿದರು, ಅವರು ತಮ್ಮ ಸ್ವಂತ ಹಣವನ್ನು ಸಹ ಅದರಲ್ಲಿ ಹೂಡಿಕೆ ಮಾಡಿದರು, ಅವರು ಅದರಿಂದ ಯಾವುದೇ ವೈಯಕ್ತಿಕ ಆಸಕ್ತಿಯನ್ನು ಪಡೆಯಲಿಲ್ಲ, ಅವರು ತತ್ವಗಳಿಗೆ ಬದ್ಧರಾಗಿದ್ದರು , ದುಬೈನಲ್ಲಿ ಜಮಾಅತ್ ಸದಸ್ಯರಾಗಿ ನಿವೃತ್ತಿಯ ನಂತರ ಭಟ್ಕಳಕ್ಕೆ ಬಂದಾಗ ಆಂದೋಲನದ  ನೇತೃತ್ವ ವಹಿಸಿದರು. ಸ್ಥಳಿಯವಾಗಿ ಕೆಲ ಭಿನ್ನಾಭಿಪ್ರಾಯಗಳಿಂದಾಗಿ ಅವರು ಜಮಾಅತ್ ಸದಸ್ಯತ್ವಕ್ಕೆ ರಾಜಿನಾಮೆ ನೀಡಿ ಮರ್ಕಝಿ ಖಲಿಫಾ ಜಮಾಅತ್ ನಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಅಲ್ಲಿ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸಿದರು.  ಕಳೆದ ವರ್ಷ ಅವರ ಅವಧಿ ಪೂರ್ಣಗೊಂಡಿದ್ದು ಸಧ್ಯ ಅವರು ಖಲಿಫಾ ಜಮಾಅತ್ ನ ಪೋಷಕರಾಗಿದ್ದರು.

ಇವರ ನಿಧನಕ್ಕೆ ಭಟ್ಕಳ ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಮೌಲಾನ ಸೈಯ್ಯದ್ ಝುಬೇರ್ ಸೇರಿದಂತೆ ಮರ್ಕಝಿ ಖಲಿಫಾ ಜಮಾಅತ್ ಪ್ರಧನ ಕಾಝಿ ಮೌಲಾನ ಕ್ವಾಜಾ ಮುಹಿದ್ದೀನ್ ಅಕ್ರಮಿ ನದ್ವಿ, ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಕಾಝಿ ಮೌಲಾನ ಅಬ್ದುಲ್ ರಬ್ ನದ್ವಿ, ಅಂಜುಮನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಇಸ್ಮಾಯಿಲ್ ವೆಲ್ಫೇರ್  ಸೂಸೈಟಿಯ ಕಾದಿರ್ ಮೀರಾ ಪಟೇಲ್, ಭಟ್ಕಳ ಮುಸ್ಲಿಮ್ ಯುತ್ ಫೆಡರೇಶನ್ ಅಧ್ಯಕ್ಷ ಮೌಲಾನ ಅಝೀಝುರ್ರಹ್ಮಾನ್ ನದ್ವಿ ರುಕ್ನುದ್ದೀನ್, ಜಾಮಿಯಾ ಇಸ್ಲಾಮಿಯಾ ಪ್ರಾಂಶುಪಾಲ ಮೌಲಾನ ಮಕ್ಬೂಲ್ ಕೋಬಟ್ಟೆ, ತಂಝೀಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ.  ನ್ಯೂ ಶಮ್ಸ್ ಸ್ಕೂಲ್ ಬೋರ್ಡ್ ಅಧ್ಯಕ್ಷ ನಝೀರ್ ಆಹ್ಮದ್ ಖಾಝಿ, ತರಬಿಯತ್ ಎಜ್ಯಕೇಶನ್ ಸೂಸೈಟಿ ಅಧ್ಯಕ್ಷ ಮುಹಮ್ಮದ್ ಇಸ್ಮಾಯಿಲ್ ಮೊಹತೆಶಮ್ ಮತ್ತಿತರ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...