ಭಟ್ಕಳ:ತಾಲೂಕಾ ಕ್ರೀಡಾಂಗಣದಲ್ಲಿ 69ನೇ ಗಣರಾಜ್ಯೋತ್ಸವ ಸಂಭ್ರಮ

Source: sonews | By Staff Correspondent | Published on 26th January 2018, 11:25 PM | Coastal News | Don't Miss |


ಭಟ್ಕಳ: ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಭೆ ಭಟ್ಕಳ ಹಾಗೂ ಪಟ್ಟಣ ಪಂಚಾಯತ್ ಜಾಲಿ ಇವರ ಸಂಯುಕ್ತ ಆಶ್ರಯದಲ್ಲಿ 69ನೇ ಗಣರಾಜ್ಯೋತ್ಸವವನ್ನು ಇಲ್ಲಿನ ತಾಲೂಕಾ ಕ್ರೀಡಾಂಗಣದಲ್ಲಿ ಶುಕ್ರವಾರದಂದು ತಹಸೀಲ್ದಾರ್ ವಿ.ಎನ್.ಬಾಡಕರ್ ಧ್ವಜಾರೋಹಣ ನೆರವೇರಿಸುವುದರ ಮೂಲಕ ನಡೆಸಲಾಯಿತು. 

ನಂತರ ಮಾತನಾಡಿದ ತಹಸೀಲ್ದಾರ್ ವಿ.ಎನ್.ಬಾಡಕರ್ ಅವರು ನಮ್ಮ ದೇಶವು ಯಾವುದೇ ಜಾತಿ ಧರ್ಮ ಪಂಥದ ಬೇಧ ಸಾಮರಸ್ಯದಿಂದ ನಡೆದು ಬರುತ್ತಿದ್ದು, ಜಗತ್ತಿನ ಅತೀ ದೊಡ್ಡ ಸಂವಿಧಾನವಾದ ಭಾರತ ನಮಗೆ ರಚಿಸಿಕೊಟ್ಟಿದೆ. ಹಲವು ದೇಶದ ಲಿಖಿತ ಮತ್ತು ಅಲಿಖಿತ ಅಧ್ಯಯನಗಳ ಕ್ರೂಢೀಕೃತ ರಚನೆಯೇ ನಮ್ಮ ಸಂವಿಧಾನವಾಗಿದೆ. ದೇಶವು ಈಗಾಗಲೇ ಎಲ್ಲಾ ಕ್ಷೇತ್ರೆ ವಿಬಾಗದಲ್ಲಿಯೂ ಮುನ್ನುಗ್ಗುತ್ತಿದ್ದು, ಪ್ರಜೆಗಳಾದ ನಾವು ಸಹ ದೇಶದ ಅಭಿವೃದ್ಧಿಗೆ ಪೂರಕವಾಗುವಂತೆ ಬದುಕಬೇಕು. ಹಿರಿಯರು ನಮಗೆ ನೀಡಿದ ಸ್ವಾತಂತ್ರ್ಯದ ಕೊಡುಗೆಯನ್ನು ನಾವುಗಳು ಅದನ್ನು ವಿವೇಚನೆಯಿಂದ ಬಳಸಿ ಪ್ರಗತಿಯನ್ನು ಸಾಧಿಸಬೇಕು ಎಂದರು. 
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಮಂಕಾಳ ಎಸ್. ವೈದ್ಯ” ದೇಶದಲ್ಲಿ ಎಲ್ಲಾ ಜಾತಿಯ ಧರ್ಮ ಸಮಾನತೆಯಿಂದ ಬಾಳಬೇಕು ಮತ್ತು ದೇಶಕ್ಕೆ ಉತ್ತಮ ಸಂವಿಧಾನವನ್ನು ರಚಿಸಿಕೊಟ್ಟ ಮಹಾನ್ ವ್ಯಕ್ತಿಗಳ ಸ್ಮರಣೆ ಇಂದಿನ ದಿನದಲ್ಲಾಗಬೇಕು. ಮುಖ್ಯವಾಗಿ ದೇಶದಲ್ಲಿ ಒಂದೇ ಶಿಕ್ಷಣ ವ್ಯವಸ್ಥೆ ಜಾರಿಯಾಗುದರೊಂದಿಗೆ ದೇಶದ ಯುವಕರಿಗೆ ಉದ್ಯೋಗಾವಕಾಶ ಅಧಿಕವಾಗಬೇಕು. ಸದ್ಯಕ್ಕೆ ದೇಶ ಅಭಿವೃದ್ಧಿಯತ್ತ ಸಾಗುತ್ತಿದ್ದು ಬೇರೆ ದೇಶಕ್ಕೆ ಕೈಚಾಚುವ ಸ್ಥಿತಿ ಎದುರಾಗಿಲ್ಲ. ದೇಶಕ್ಕೆ ನಾಡಿಗೆ ಪ್ರeಗಳು ಪರೋಪಕಾರಿಯಾಗಿ ಬದುಬೇಕೆಂದು ಕರೆ ನೀಡಿದರು. 
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ಹಾಗೂ ಇಲಾಖಾವಾರು ಉತ್ತಮ ಸೇವೆ ಸಲ್ಲಿಸಿದ ಅಗ್ನಿಶಾಮಕ ಇಲಾಖೆ- ಮಹಮ್ಮದ್ ಶಫಿ ಎಸ್. ಮೊಘಲ್, ಪಟ್ಟಣ ಪಂಚಾಯತ್ ಜಾಲಿ “ಉತ್ತಮ ಪೌರ ಕಾರ್ಮಿಕ” - ನಾಗರಾಜ ಮಾಣಿ, ಪುರಸಭೆ ಭಟ್ಕಳ-“ಉತ್ತಮ ಪೌರ ಕಾರ್ಮಿಕ”- ಗಣೇಶ ಅಮಾವಾಸಿ, ಪ್ರಾಥಮಿಕ ಆರೋಗ್ಯ ಕೇಂದ್ರ ಮುರ್ಡೇಶ್ವರ “ಉತ್ತಮ ಶುಶ್ರುಷಕಿ”-ಸಾವಿತ್ರಿ ಅಡಿಗಳ, ಪೋಲೀಸ್ ಇಲಾಖೆ “ಉತ್ತಮ ಆರಕ್ಷಕರು” -ಶಿವಾನಂದ ರತ್ನಾಕರ ಕಲ್ಗುಟಕರ, ಶಿಕ್ಷಣ ಇಲಾಖೆ “ಉತ್ತಮ ಶಿಕ್ಷಕಿ” -ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಲ್ಲಾರಿ-ಸೌಮ್ಯಪುತ್ರನ್ ಬಿ.ವಿ., ವಾ.ಕ.ರ.ಸಾ.ಸಂಸ್ಥೆ ಭಟ್ಕಳ- “ಉತ್ತಮ ಚಾಲಕ”-ಶಿವು ಎಂ. ಮೇಸ್ತ, ಹೆಸ್ಕಾಂ ಇಲಾಖೆ ಭಟ್ಕಳ – “ಉತ್ತಮ ಲೈನಮೇನ್” - ನಾರಾಯಣ ದೇವಾಡಿಗ, ತಾ.ಪಂ. ಭಟ್ಕಳ- “ಉತ್ತಮ ಬಿಲ್ ಕಲೆಕ್ಟರ್- ಗ್ರಾ.ಪಂ. ಮಾವಳ್ಳಿ” ಮಂಜುನಾಥ ಕರಿಯಾ ಹರಿಕಾಂತ, ಅರಣ್ಯ ಇಲಾಖೆ- “ಉತ್ತಮ ಅರಣ್ಯ ರಕ್ಷಕ” - ಲೋಕೇಶ ವಿ.ನಾಯ್ಕ, ಶಿಶು ಅಭಿವೃದ್ಧಿ ಇಲಾಖೆ- “ಉತ್ತಮ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ” - ಶ್ರೀದೇವಿ ಎನ್. ಹೆಗಡೆ- ಕಿತ್ರೆ, ಕಂದಾಯ ಇಲಾಖೆ –“ಗ್ರಾಮ ಸಹಾಯಕ- ಕೋಣಾರ”- ಮಂಜುನಾಥ ನಾಯ್ಕ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. 
ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿ ವಿದ್ಯಾರ್ಥಿಗಳಿಂದ ಹಾಗೂ ಪೋಲೀಸ್ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳಿಂದ ಪಥ ಸಂಚಲನ ಹಾಗೂ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. 
ವೇದಿಕೆಯಲ್ಲಿ ಪುರಸಭಾ ಅಧ್ಯಕ್ಷ ಮಹ್ಮದ್ ಸಾದಿಕ್ ಮಟ್ಟಾ, ತಾ.ಪಂ. ಅಧ್ಯಕ್ಷ ಈಶ್ವರ ಬಿ.ನಾಯ್ಕ, ಉಪಾಧ್ಯಕ್ಷೆ ರಾಧಾ ವೈದ್ಯ, ಜಾಲಿ ಪಟ್ಟಣ ಪಂ.ಅಧ್ಯಕ್ಷ ಅಬ್ದುಲ್ ರಹೀಂ, ಜಿ.ಪಂ ಸದಸ್ಯ ಅಲ್ಬರ್ಟ ಡಿಕೋಸ್ತಾ, ಸಿಂಧು ಬಿ.ನಾಯ್ಕ, ತಾಲೂಕಾ ಕಾರ್ಯನಿರ್ವಹಣಾಧಿಕಾರಿ ಸಿ.ಟಿ.ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಪಟಗಾರ, ಪೋಲೀಸ್ ಉಪ ಅಧೀಕ್ಷಕರ ಪಿ.ಓ. ಶಿವಕುಮಾರ ಮೊದಲಾದ ಗಣ್ಯರು ಉಪಸ್ಥಿತರಿದ್ದರು.  
ಸ್ನೇಹಾ ವಿಶೇಷ ಶಾಲೆಗೆ ಶಾಸಕ ಮಾಂಕಾಳಿಂದ 5ಲಕ್ಷ ರೂ ದೇಣಿಗೆ: ತಾಲೂಕಿನ ಕೋಕ್ತಿಗ್ರಾಮದಲ್ಲಿರುವ ಸ್ನೇಹಾ ವಿಶೇಷ ಶಾಲೆಯ ಮಕ್ಕಳಿಗೆ ಶಾಸಕ ಮಾಂಕಾಳ್ ವೈದ್ಯ  ತಮಗೆ ಸರಕಾರದಿಂದ ಒಂದು ವರ್ಷಕ್ಕೆ ಬರುವ 5 ಲಕ್ಷ ರೂ. ವೇತನವನ್ನು ಶಾಲೆಗೆ ದೇಣಿಗೆ ನೀಡುವುದಾಗಿ ಘೋಷಿಸಿದರು. 

Read These Next

ಕಾರವಾರ: ಹಣ, ಉಡುಗೊರೆ ಹಂಚಿಕೆ ಬಗ್ಗೆ ಹೆಚ್ಚಿನ ನಿಗಾ ವಹಿಸಿ : ವಿಶೇಷ ವೆಚ್ಚ ವೀಕ್ಷಕ ಬಿ.ಮುರಳಿ ಕುಮಾರ್

ಮತದಾರರಿಗೆ ಹಣ, ಉಡುಗೊರೆ ಮತ್ತಿತರ ಆಮಿಷಗಳನ್ನು ಒಡ್ಡುವುದರ ಕುರಿತಂತೆ ತೀವ್ರ ನಿಗಾ ವಹಿಸಬೇಕು, ಈ ಕುರಿತಂತೆ ದೂರುಗಳು ಬಂದ ...

ಕಾರವಾರ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ತಿಂಗಳಿಗೆ ಹತ್ತೂವರೆ ಸಾವಿರ: ಸೈಲ್

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನ ಗೆಲ್ಲಿಸಿದರೆ ತಿಂಗಳಿಗೆ ಹತ್ತೂವರೆ ಸಾವಿರ ಬಡ ಮಹಿಳೆಯರ ಖಾತೆಗೆ ಬರಲಿದೆ. ಈ ಅವಕಾಶವನ್ನ ...