ಕಾರವಾರ: ಡಿ.28 ರಂದು ಅಂಚೆ ಅದಾಲತ್

Source: S O News | By I.G. Bhatkali | Published on 13th December 2023, 4:39 PM | Coastal News | Don't Miss |

ಕಾರವಾರ: ಪ್ರಸಕ್ತ ಸಾಲಿನ ಕಾರವಾರ ಅಂಚೆ ವಿಭಾಗದ 3ನೇ ತ್ರೆöÊಮಾಸಿಕ ಅಂಚೆ ಅದಾಲತನ್ನು ಡಿ.28 ರಂದು ಅಂಚೆ ಕಾರವಾರ ವಿಭಾಗದ ಅಧೀಕ್ಷಕರ, ಕಾರ್ಯಲಯದಲ್ಲಿ ಮಧ್ಯಾಹ್ನ 3 ಗಂಟೆಗೆ ಅಂಚೆ ಅಧೀಕ್ಷಕರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕುಗಳ ವ್ಯಾಪ್ತಿಯಲ್ಲಿರುವ ಅಂಚೆ ಸೇವೆಗಳಿಗೆ ಸಂಬAಧ ಪಟ್ಟ ಸಲಹೆ, ಸೂಚನೆ ಮತ್ತು ದೂರುಗಳನ್ನು ಅಂಚೆ ಅದಾಲತ್‌ನಲ್ಲಿ ವಿಚಾರಣೆಗೆ ಎಂದು ಮೇಲ್ಬರಹ ಬರೆದು ಯಾವುದೇ ಅಂಚೆ ಕಚೇರಿಯಲ್ಲಿ ರವಾನೆಗಾಗಿ ಸಲ್ಲಿಸಬಹುದು. ಇಂತಹ ಲಕೋಟೆಗೆ ಅಂಚೆ ವೆಚ್ಚ ಭರಿಸುವ ಅಗತ್ಯವಿರುವುದಿಲ್ಲ. ಇಂತಹ ದೂರು ಮತ್ತು ಸಲಹೆ ಸೂಚನೆಗಳನ್ನು ಅಂಚೆ ಅಧೀಕ್ಷಕರು, ಕಾರವಾರ ವಿಭಾಗ, ಕಾರವಾರ ಇವರ ಕಾರ್ಯಾಲಯಕ್ಕೆ ಡಿ.27 ರೊಳಗಾಗಿ ತಲುಪುವಂತೆ ಕಳುಹಿಸತಕ್ಕದ್ದು. ಈ ವಿಭಾಗೀಯ ಅಂಚೆ ಅದಾಲತ್‌ನಲ್ಲಿ ಅಂಚೆ ಕಚೇರಿಗಳಿಂದ ಈಗ ಕೊಡುತ್ತಿರುವ ಸೇವೆಗಳಲ್ಲಿ ಇರುವ ಕೊರತೆಗಳನ್ನು ಮತ್ತು ಅವುಗಳನ್ನು ಸುಧಾರಿಸುವ ಸಲಹೆ ಸೂಚನೆಗಳನ್ನಷ್ಟೇ ಚರ್ಚಿಸಲಾಗುವುದು. ಇಲಾಖೆಯ ಕಾರ್ಯನೀತಿ ಧೋರಣೆಗಳ ಬಗ್ಗೆ ಸಲಹೆ ಸೂಚನೆಗಳನ್ನು ಅಂಚೆ ಅದಾಲತನಲ್ಲಿ ಚರ್ಚಿಸಲಾಗುವುದಿಲ್ಲ. ಇಂತಹ ಕಾರ್ಯನೀತಿ ಧೋರಣೆಗಳ ಬಗ್ಗೆ ಸಲಹೆ ಸೂಚನೆಗಳನ್ನು ಬೇರೆ ಯಾವುದೇ ಸಮಯದಲ್ಲಿ ಬರೆದು ತಿಳಿಸಿದ್ದಲ್ಲಿ, ಸಂಬAಧ ಪಟ್ಟ ಮೇಲಾಧಿಕಾರಿಗಳಿಗೆ ಮುಂದಿನ ಕ್ರಮಕ್ಕಾಗಿ ಕಳುಹಿಸಲಾಗುವುದು ಎಂದು ಕಾರವಾರ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next

ಕಾರವಾರ: ಹಣ, ಉಡುಗೊರೆ ಹಂಚಿಕೆ ಬಗ್ಗೆ ಹೆಚ್ಚಿನ ನಿಗಾ ವಹಿಸಿ : ವಿಶೇಷ ವೆಚ್ಚ ವೀಕ್ಷಕ ಬಿ.ಮುರಳಿ ಕುಮಾರ್

ಮತದಾರರಿಗೆ ಹಣ, ಉಡುಗೊರೆ ಮತ್ತಿತರ ಆಮಿಷಗಳನ್ನು ಒಡ್ಡುವುದರ ಕುರಿತಂತೆ ತೀವ್ರ ನಿಗಾ ವಹಿಸಬೇಕು, ಈ ಕುರಿತಂತೆ ದೂರುಗಳು ಬಂದ ...

ಕಾರವಾರ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ತಿಂಗಳಿಗೆ ಹತ್ತೂವರೆ ಸಾವಿರ: ಸೈಲ್

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನ ಗೆಲ್ಲಿಸಿದರೆ ತಿಂಗಳಿಗೆ ಹತ್ತೂವರೆ ಸಾವಿರ ಬಡ ಮಹಿಳೆಯರ ಖಾತೆಗೆ ಬರಲಿದೆ. ಈ ಅವಕಾಶವನ್ನ ...

ಭಟ್ಕಳದ ಅಂಜುಮಾನ್ ಇಂಜಿನಿಯರಿಂಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ - ಡಾ. ದಿನೇಶ್ ಗಾಂವ್ಕರ್

೨೦೨೪- ಶಿಕ್ಷಕ ಶೀರ್ಷಿಕೆ ಅಡಿಯಲ್ಲಿ ಅಂಜುಮಾನ್ ತಾಂತ್ರಿಕ ವಿದ್ಯಾಲಯದಲ್ಲಿ ಕನ್ನಡ ವೇದಿಕೆಯ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ...