ಹೊನ್ನಾವರ:ಬ್ರ್ಯಾಂಡೆಂಡ್ ನಕಲಿ ಉಡುಪು: ₹52 ಲಕ್ಷ ಮೌಲ್ಯದ ಅಂಗಿ ವಶ

Source: S.O. News Service | By MV Bhatkal | Published on 6th July 2019, 7:51 PM | Coastal News |

ಹೊನ್ನಾವರ: ಪ್ರಸಿದ್ಧ  ಕಂಪನಿಗಳ  ಹೆಸರನ್ನು ದುರ್ಬಳಕೆ ಮಾಡಿ ಕೊಂಡು ಅಕ್ರಮವಾಗಿ ಉಡುಪು ತಯಾರಿಸುತ್ತಿದ್ದ ಆರೋಪದ ಮೇಲೆ ತಾಲ್ಲೂಕಿನ ಹಳದೀಪುರ ಗ್ರಾಮದ ಕುದಬೈಲ್ ಎಂಬಲ್ಲಿ ಗಾರ್ಮೆಂಟ್ಸ್ ಫ್ಯಾಕ್ಟರಿಯೊಂದರ ಮೇಲೆ ಪೊಲೀಸರು ಗುರುವಾರ ರಾತ್ರಿ ದಾಳಿ ಮಾಡಿದ್ದಾರೆ. ವಿವಿಧ ಬ್ರ್ಯಾಂಡ್‌ಗಳ ₹ 52 ಲಕ್ಷ ಮೌಲ್ಯದ ಅಂಗಿಗಳನ್ನು ವಶಪಡಿಸಿಕೊಂಡಿದ್ದಾರೆ.
ಇಲ್ಲಿನ ಜೀವನ್ ಗಾರ್ಮೆಂಟ್ಸ್‌ನಲ್ಲಿ ಹೊಲಿಯಲಾದ ಬಟ್ಟೆಗಳಿಗೆ ಪ್ರಸಿದ್ಧ ಕಂಪನಿಗಳ ಲೋಗೋ ಹಚ್ಚಲಾಗುತ್ತಿತ್ತು. ಈ ಬಗ್ಗೆ ಬೆಂಗಳೂರಿನ ಆದಿತ್ಯ ಬಿರ್ಲಾ ಫ್ಯಾಷನ್ಸ್ ಮತ್ತು ರಿಟೇಲ್ ಸಂಸ್ಥೆಯವರು ಹೊನ್ನಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ದಾಳಿ ಮಾಡಿದ ಪೊಲೀಸರು, ಗಾರ್ಮೆಂಟ್ಸ್‌ಗೆ ಬೀಗ ಮುದ್ರೆ ಹಾಕಿದರು.
‘ಈ ಘಟಕದಲ್ಲಿ  ಒಂದೆರಡು ವರ್ಷಗಳಿಂದಲೇ ಅಲೆನ್ ಸೋಲಿ, ಲೂಯಿ ಫಿಲಿಫ್, ವ್ಯಾನ್ ಹುಸೆನ್ ಮೊದಲಾದ ಹೆಸರಿನ ನಕಲಿ ಉಡುಪು ತಯಾರಿಸ ಲಾಗುತ್ತಿದೆ.  ಈ ಮೂಲಕ ನಮ್ಮ ಕಂಪನಿಯ ಹಕ್ಕುಸ್ವಾಮ್ಯವನ್ನು ಉಲ್ಲಂಘಿಸಲಾಗಿದೆ ಎಂದು ಆದಿತ್ಯ ಬಿರ್ಲಾ ರಿಟೇಲ್ಸ್ ಕಂಪನಿಯವರು ದೂರು ನೀಡಿದ್ದರು. ಜೀವನ್ ಗಾರ್ಮೆಂಟ್ಸ್ ಮಾಲೀಕರ ವಿರುದ್ಧ ಮೋಸ ಹಾಗೂ ಹಕ್ಕುಸ್ವಾಮ್ಯ ಉಲ್ಲಂಘನೆಯ ದೂರು ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದರು.
ಡಿವೈಎಸ್‌ಪಿ ವೆಲೆಂಟೈನ್ ಡಿಸೋಜಾ ಅವರ ನಿರ್ದೇಶನದ ಮೇರೆಗೆ ಸಿಪಿಐ ಚೆಲುವರಾಜು ಹಾಗೂ ಪಿಎಸ್ಐ ಸಂತೋಷ ಕಾಯ್ಕಿಣಿ ಅವರಿದ್ದ ಪೊಲೀಸರ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.

 

Read These Next

ಬೀಫ್ ಎಕ್ಸ್‌ಪೋರ್ಟ್ ಕಂಪನಿ ಸೇರಿದಂತೆ ಪಾಕಿಸ್ತಾನಿ ಏಜೆನ್ಸಿಗಳಿಂದಲೂ ಬಿಜೆಪಿ ದೇಣಿಗೆ ತೆಗೆದುಕೊಂಡಿದೆ- ಭಟ್ಕಳದಲ್ಲಿ ಕಾಂಗ್ರೆಸ್ ಸುದ್ದಿಗೋಷ್ಠಿ

ಭಟ್ಕಳ:  ಗೋಹತ್ಯೆ ವಿರೋಧಿಸುವ ಬಿಜೆಪಿ ಬೀಫ್ ರಫ್ತು ಮಾಡುವ ಕಂಪನಿ ಸೇರಿದಂತೆ ಪಾಕಿಸ್ಥಾನಿ ಎಜೆನ್ಸಿಗಳಿಂದಲೂ ದೇಣಿಗೆ ...