ದೀಪಾವಳಿ ಹಬ್ಬಕ್ಕೆ ಬಂಪರ್ ಆಫರ್ ಭಟ್ಕಳದಲ್ಲಿ ಆನ್‍ಲೈನ್ ಮಾರಾಟವೇ ಜೋರು !

Source: S O News Service | By V. D. Bhatkal | Published on 19th November 2020, 6:01 AM | Coastal News | Special Report |

ಭಟ್ಕಳ: ದೀಪದ ಹಬ್ಬ ದೀಪಾವಳಿಯ ಸಡಗರ ಮನೆಯ ಅಂಗಳದಲ್ಲಿ ಹಾಗೆಯೇ ಉಳಿದುಕೊಂಡಿದೆ. ಮನೆಯ ಮುಂದೆ ಹೊತ್ತು ಮುಳುಗುತ್ತಿದ್ದಂತೆಯೇ ಆಕಾಶ ಬುಟ್ಟಿ ಬೆಳದಿಂಗಳನ್ನು ಚೆಲ್ಲುತ್ತಿದ್ದರೆ, ಪುಟ್ಟ ಮಕ್ಕಳು ಪಟಾಕಿ ಸಿಡಿಸುತ್ತ ಹಬ್ಬದ ಆಚರಣೆಯ ಕಾಲಾವಧಿಯನ್ನು ವಿಸ್ತರಿಸುತ್ತಲೇ ಇದ್ದಾರೆ. ಇತ್ತ ನಾವು ಖರೀದಿಯ ವಿಷಯಕ್ಕೆ ಬಂದರೆ ಪಟ್ಟಣದ ಅಂಗಡಿಗಳಿಗಿಂತ ಆನ್‍ಲೈನ್ ವ್ಯಾಪಾರ, ವಹಿವಾಟುಗಳು ಜೋರಾಗಿ ನಡೆದಿರುವುದು ಬೆಳಕಿಗೆ ಬಂದಿದೆ.

ಈಗ ಕಾಲ ಬದಲಾಗಿದೆ. ಜಗತ್ತಿನ ಆಗು ಹೋಗುಗಳು ಬೆರಳ ತುದಿಯನ್ನು ತಲುಪಿವೆ. ಇತ್ತೀಚಿನ ದಿನಗಳಲ್ಲಿ ಹಳ್ಳಿ ಹಳ್ಳಿಗಳಲ್ಲಿಯೂ ಮೊಬೈಲ್ ಫೋನ್‍ನ್ನು ಬಳಸಿ ಬಟ್ಟೆಬರೆ, ಇಲೆಕ್ಟ್ರಿಕಲ್, ಇಲೆಕ್ಟ್ರಾನಿಕ್ ಉಪಕರಣಗಳನ್ನು ಆನ್‍ನಲ್ಲಿಯೇ ಖರೀದಿಸಲಾಗುತ್ತಿದೆ. ಹಬ್ಬಹರಿದಿನಗಳ ಸಂದರ್ಭದಲ್ಲಿಯಂತೂ ಆನ್‍ಲೈನ್‍ನಲ್ಲಿ ನೀಡಲಾಗುವ ಆಫರ್‍ಗಳು ಗ್ರಾಹಕರನ್ನು ಹೆಚ್ಚು ಆಕರ್ಷಿಸುತ್ತಿವೆ. ಜನರ ಬೇಡಿಕೆಗಳಿಗನುಗುಣವಾಗಿ ಭಟ್ಕಳ ತಾಲೂಕಿನಲ್ಲಿ ಒಂದರ ಹಿಂದೊಂದರಂತೆ ಆನಲೈನ್ ಮಾರಾಟಗಳು ತಲೆ ಎತ್ತುತ್ತಲೇ ಇವೆ. ಪ್ರಸಕ್ತವಾಗಿ ಅಮೇಜಾನ್, ಫ್ಲಿಫ್‍ಕಾರ್ಟನಂತಹ ದೈತ್ಯ ಸಂಸ್ಥೆಗಳ ಜೊತೆಗೆ ಇ-ಕಾಮ್ ಎಕ್ಸಪ್ರೆಸ್, ಎಕ್ಸಪ್ರೆಸ್ ಬೀಸ್, ಬ್ಲ್ಯೂ ಡರ್ಟ್, ಡೆಲಿವರಿ, ಮಿಂತ್ರಾ ಒಂದೇ ಎರಡೇ ಭಟ್ಕಳ ಪಟ್ಟಣದ ಬೀದಿಬೀದಿಗಳಲ್ಲಿ ಆನ್‍ಲೈನ್ ಮಾರಾಟ ವಿತರಣಾ ಮಳಿಗೆಗಳು ಬಾಗಿಲು ತೆರೆದುಕೊಂಡಿವೆ. ಈ ವರ್ಷದ ದೀಪಾವಳಿಯಲ್ಲಿ ಹೆಚ್ಚಿನ ಆನ್‍ಲೈನ್ ವಿತರಣಾ ಮಳಿಗೆಗಳು ಹಗಲು, ರಾತ್ರಿ ವಿತರಣೆ ಕಾರ್ಯ ನಡೆಸಿ ಸುಸ್ತಾಗಿ ಹೋಗಿವೆ. ಒಂದೆರಡು ವಿತರಣಾ ಮಳಿಗೆಗಳು ನಿಗದಿತ ಅವಧಿಯಲ್ಲಿ ಖರೀದಿ ಸಾಮಾನುಗಳನ್ನು ಗ್ರಾಹಕರಿಸಲು ತಲುಪಿಸಲು ಹರ ಸಾಹಸ ನಡೆಸಿ, ಕೊನೆಗೆ ಬೇರೆ ಕಂಪನಿಯ ವಿತರಕರಿಗೆ ತಮ್ಮ ಕೆಲಸದ ಪಾಲನ್ನು ಹಸ್ತಾಂತರಿಸಿರುವ ಬಗ್ಗೆಯೂ ಮಾಹಿತಿ ಹೊರ ಬಿದ್ದಿದೆ. 

ದಿನಕ್ಕೆ 2000 ದಾಟಿದ ಪಾರ್ಸೆಲ್:
ಭಟ್ಕಳದಂತಹ ಚಿಕ್ಕ ತಾಲೂಕಿನಲ್ಲಿ ಜನರು ಆನ್‍ಲೈನ್ ಖರೀದಿಗೆ ಆಸಕ್ತಿ ತೋರುತ್ತಿರುವುದರ ಬಗ್ಗೆ ವಿಭಿನ್ನವಾಗಿ ತರ್ಕಿಸಲಾಗುತ್ತಿದೆ. ಕೊರೊನಾ ತಡೆ ಲಾಕ್‍ಡೌನ್‍ನಿಂದಾಗಿ ಅಂಗಡಿಗಳಲ್ಲಿ ವೈವಿಧ್ಯತೆ ಕಡಿಮೆಯಾಗಿದೆ. ಎಲ್ಲವನ್ನೂ ತಂದು ರಾಶಿ ಹಾಕಿಕೊಂಡು ಕೈ ಸುಟ್ಟುಕೊಳ್ಳಲು ಇಲ್ಲಿನ ಅಂಗಡಿಕಾರರು ತಯಾರಿಲ್ಲ. ಇಲ್ಲಿನ ದುಬೈ ಮಾರ್ಕೆಟ್ಟಿಗೂ ಮೊದಲಿನ ಜೋಶ್ ಇಲ್ಲವಾಗಿದೆ. ಭಟ್ಕಳದಂತಹ ಸೀಮಿತ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ದೊಡ್ಡ ಪ್ರಮಾಣದ ರಿಯಾಯಿತಿ ಘೋಷಿಸುವ ಧ್ಯೆರ್ಯವೂ ಅಂಗಡಿಕಾರರಿಗಿಲ್ಲ. ಇತ್ತ ಆನ್‍ಲೈನ್‍ನಲ್ಲಿ ದಿನಕ್ಕೊಂದು ಆಫರ್‍ಗಳು ಗ್ರಾಹಕರ ತಲೆಯನ್ನು ಕೆಡಿಸುತ್ತಿವೆ. ಹಬ್ಬದ ಸಂದರ್ಭದಲ್ಲಿನ ಆಫರ್‍ಗಳೇ ಬೇರೆ! ಅಲ್ಲದೇ ಇತ್ತೀಚಿನ ದಿನಗಳಲ್ಲಿ ಆನ್‍ಲೈನ್ ಮಾರಾಟ ಮಳಿಗೆಗಳು ಗ್ರಾಹಕರ ನಂಬಿಕೆಯನ್ನು ಉಳಿಸಿಕೊಳ್ಳುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತ ಬಂದಿವೆ. ಬಂದ ವಸ್ತುಗಳು ನಿರೀಕ್ಷೆಗೆ ವ್ಯತಿರಿಕ್ತವಾಗಿದ್ದರೆ ಅಥವಾ ಗುಣಮಟ್ಟದ ಲೆಕ್ಕತಪ್ಪಿದರೆ ಆ ಕ್ಷಣವೇ ಸರಕುಗಳನ್ನು ಹಿಂದಿರುಗಿಸಿ, ಹಣವನ್ನು ವಾಪಸ್ಸು ಪಡೆಯಲು ಅವಕಾಶಗಳು ನೀಡಲಾಗುತ್ತಿದೆ. ಇದರಿಂದ ಗ್ರಾಹಕರು ಆನ್‍ಲೈನ್ ಖರೀದಿಯತ್ತ ವಾಲುತ್ತಿದ್ದಾರೆ. ಸಾಮಾನ್ಯವಾಗಿ ಇಲ್ಲಿನ ಪ್ರಮುಖ ಆನ್‍ಲೈನ್ ಮಾರಾಟ ವಿತರಣಾ ಮಳಿಗೆಗಳು ದಿನವೊಂದಕ್ಕೆ ಸರಾಸರಿ 500ರಷ್ಟು ಸರಕುಗಳನ್ನು ವಿತರಿಸುತ್ತ ಬಂದಿದ್ದರೆ, ಈ ಬಾರಿ ದೀಪಾವಳಿಗೆ ಹಬ್ಬಕ್ಕೆ 10-15 ದಿನಗಳಿರುವಂತೆಯೇ ಆನ್‍ಲೈನ್ ಮಳಿಗೆಗಳು ಭರ್ಜರಿ ಆಫರ್‍ಗಳೊಂದಿಗೆ 4 ಪಟ್ಟು ಹೆಚ್ಚು ವ್ಯಾಪಾರ ನಡೆಸಿವೆ. ಅಮೆಜಾನ್, ಫ್ಲಿಫ್‍ಕಾರ್ಟನಂತಹ ವಿತರಣಾ ಮಳಿಗೆಗಳಲ್ಲಿ ದಿನವೊಂದಕ್ಕೆ ಬಂದು ಬೀಳುವ ಪಾರ್ಸೆಲ್‍ಗಳು 2000ನ್ನು ದಾಟಿವೆ. ಈಗಿನ ಪೀಳಿಗೆಯ ಆನ್‍ಲೈನ್ ಕಸರತ್ತುಗಳನ್ನು ನೋಡಿದರೆ ಮುಂದಿನ ದಿನಗಳಲ್ಲಿ ಸ್ಥಳೀಯ ಅಂಗಡಿಕಾರರ ಮುಂದೆ ಸವಾಲುಗಳು ಗುಡ್ಡವಾಗಿ ಬಿದ್ದುಕೊಂಡರೂ ಅಚ್ಚರಿಪಡುವಂತದ್ದೇನಿಲ್ಲ. 

Read These Next

ನಳೀನಕುಮಾರ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ : ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶಕುಮಾರ.

ಮಂಗಳೂರು : ಕಾಂಗ್ರೆಸ್ ಈಗ ತಿಥಿ ಪಾರ್ಟಿ ಆಗ್ತಾ ಇದೆ ಎಂದ ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ...

ಕಾರವಾರ: ಮತದಾರರ ಪಟ್ಟಿ ಪ್ರಕಟ

77ನೇ ವಿಧಾನಸಭಾ ಕ್ಷೇತ್ರ ಕಾರವಾರ ತಾಲೂಕಿನ ಮತದಾರ ಪಟ್ಟಿಯ ಅರ್ಹತಾ ದಿನಾಂಕವಾದ ಜನವರಿ 1 ನ್ನು ಇಟ್ಟುಕೊಂಡು ವಿಶೇಷ ಸಂಕ್ಷಿಪ್ತ ...

ಕಾರವಾರ: ದಿಶಾ ಸಭೆಯಲ್ಲಿ ಅಧಿಕಾರಿಗಳಿಗೆ ಸಂಸದ ಅನಂತಕುಮಾರ ಹೆಗಡೆ ಸೂಚನೆ ಪರಸ್ಪರ ಸಮನ್ವಯತೆ ಮೂಲಕ ಪ್ರಗತಿ ಸಾಧಿಸಿ

ವಿವಿಧ ಇಲಾಖೆಯ ಅಧಿಕಾರಿಗಳು ಪರಸ್ಪರ ಸಮನ್ವಯ ಮಾಡಿಕೊಂಡು ಕೇಂದ್ರ ಸರಕಾರದ ವಿವಿಧ ಯೋಜನೆಗಳನ್ನು ಅರ್ಹ ಫಲನುಭವಿಗಳಿಗೆ ತಲುಪಿಸಿ ಶೇ. ...

ಭಟ್ಕಳ ಅಂಜುಮನ್ ಇಂಜಿನೀಯರಿಂಗ್ ಕಾಲೇಜಿನಲ್ಲಿ ಸಂಶೋಧನೆ ಮತ್ತು ಉದ್ಯಮ ಕೇಂದ್ರ ಉದ್ಘಾಟನೆ

ತಾಲೂಕಿನ ಅಂಜುಮನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂಡ್ ಮ್ಯಾನೇಜ್‍ಮೆಂಟ್ ಕಾಲೇಜಿನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ...

ಕರ್ನಾಟಕದಲ್ಲಿ ಕೊರೊನಾ ತಡೆಗೆ ಸರಕಾರದ ರಾತ್ರಿ ಕಫ್ರ್ಯೂ; ಭಟ್ಕಳದಲ್ಲಿ ಮದುವೆ ಕಾರ್ಯಕ್ರಮಗಳ ಮೇಲೆ ಕರಿನೆರಳು

ದೂರದ ಸೌದಿಅರೇಬಿಯಾ ಸರಕಾರ ಈಗಾಗಲೇ ಅಂತರಾಷ್ಟ್ರೀಯ ವಿಮಾನ ಹಾರಾಟಕ್ಕೆ ನಿಷೇಧ ಹೇರಿರುವುದರ ನಡುವೆಯೇ, ಕರ್ನಾಟಕ ಸರಕಾರ ಹೊಸ ವರ್ಷ ...

ಭಟ್ಕಳ: ಜಿಲ್ಲೆಯ ದೊಡ್ಡ ಪಂಚಾಯತ ಹಿರಿಮೆಯ ಶಿರಾಲಿಯಲ್ಲಿ 2 ಕುಟುಂಬದ ನಡುವಿನ ರಾಜಕೀಯ ಕಾಳಗಕ್ಕೆ ಕೊನೆ ಇಲ್ಲ !

ಉತ್ತರಕನ್ನಡ ಜಿಲ್ಲೆಯಲ್ಲಿ 35 ಸದಸ್ಯರು ಇರುವ ಶಿರಾಲಿ ಗ್ರಾಮ ಪಂಚಾಯತ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಗ್ರಾಮ ಪಂಚಾಯತ ಎಂಬ ...

ಭಟ್ಕಳ: ಉತ್ತರಕನ್ನಡಕ್ಕೆ ದಂಡೆತ್ತಿ ಬಂದವರು ಇನ್ನೂ ದಡ ಸೇರಲೇ ಇಲ್ಲ; ದುಡಿದುಡಿದು ದಣಿವಾದರೂ ದುಂಡಗಾಗಲೇ ಇಲ್ಲ !

ಇದು ಕಾಡಿನ ನಡುವಿನ ಮನುಷ್ಯರ ರೋಧನ ! ರಾಜರ ದಂಡಿನೊಂದಿಗೆ ದಂಡೆತ್ತಿ ಬಂದ ಮರಾಠಿಗರು ಕಾಡಿನಲ್ಲಿಯೇ ತಲೆ ಮರೆಸಿಕೊಂಡು ಶತಮಾನಗಳೇ ...

ಉತ್ತರಕನ್ನಡ ಕಾಂಗ್ರೆಸ್‍ನಲ್ಲಿ ಧೂಳೆಬ್ಬಿಸಿದ ಡಿಕೆಶಿ ನಡೆ; ಕುಮಟಾ, ಶಿರಸಿಗೆ ಹೊಸ ಅಭ್ಯರ್ಥಿ ಸಾಧ್ಯತೆ ; ದೇಶಪಾಂಡೆ ನಿಗೂಢ ಹೆಜ್ಜೆ

ನಿವಾರ್, ಬುರೆವಿಯಂತಹ ಚಂಡಮಾರುತಗಳು ದೇಶದ ವಿವಿಧ ರಾಜ್ಯಗಳಲ್ಲಿ ಸದ್ದು ಮಾಡುತ್ತಿದ್ದರೂ ಉತ್ತರಕನ್ನಡ ಜಿಲ್ಲೆಗೆ ಅಂತಹ ಹಾನಿಯೇನೂ ...

ಭಟ್ಕಳ ಹೆಬಳೆಯಲ್ಲಿ ಕಸ, ತ್ಯಾಜ್ಯ ಸಂಗ್ರಹಕ್ಕೆ ತಡೆ; ಊರೆಲ್ಲ ದುರ್ವಾಸನೆ; ಜಾಗ, ಹಣವಿದ್ದರೂ ಯೋಜನೆ ಇಲ್ಲ !

ತಾಲೂಕಿನ ಹೆಬಳೆ ಪಂಚಾಯತ ಪ್ರದೇಶದಲ್ಲಿ ಮನೆ ಮನೆಯ ಕಸ, ತ್ಯಾಜ್ಯಗಳನ್ನು ಎತ್ತಿಕೊಂಡು ಊರ ನಡುವಿನ ಖಾಲಿ ಪ್ರದೇಶದಲ್ಲಿ ಸಂಗ್ರಹಿಸಿ ...