ಚೀನಾದಲ್ಲಿ ನ್ಯುಮೋನಿಯಾ ಸೋಂಕು ಹಾವಳಿ ಹಿನ್ನೆಲೆ ಆಸ್ಪತ್ರೆಗಳ ಸನ್ನದ್ಧತೆಯನ್ನು ತಕ್ಷಣ ಪುನರ್‌ಪರಿಶೀಲಿಸಿ; ರಾಜ್ಯಗಳಿಗೆ ಕೇಂದ್ರದ ಸೂಚನೆ

Source: Vb | By I.G. Bhatkali | Published on 27th November 2023, 7:06 AM | National News |

ಹೊಸದಿಲ್ಲಿ: ಉತ್ತರ ಚೀನಾದಲ್ಲಿ ಮಕ್ಕಳಲ್ಲಿ ನ್ಯುಮೋನಿಯಾ ಕಾಯಿಲೆ ಉಲ್ಬಣಗೊಂಡಿದೆ ಎಂಬ ಇತ್ತೀಚಿನ ವರದಿಗಳ ಹಿನ್ನೆಲೆಯಲ್ಲಿ ಸಾರ್ವಜನಿಕ ಆರೋಗ್ಯ ರಕ್ಷಣೆ ಸನ್ನದ್ಧತೆಯನ್ನು ತಕ್ಷಣ ಪುನರ್‌ಪರಿಶೀಲಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.

ಮುನ್ನೆಚ್ಚರಿಕೆಯ ಕ್ರಮವಾಗಿ ಉಸಿರಾಟದ ಕಾಯಿಲೆಗಳ ವಿರುದ್ದ ಸಿದ್ದತಾ ಕ್ರಮಗಳನ್ನು ಪೂರ್ವಭಾವಿಯಾಗಿ ಪರಿಶೀಲಿಸಲು ಸಚಿವಾಲಯವು ನಿರ್ಧರಿಸಿದೆ ಎಂದು ರವಿವಾರ ಹೊರಡಿಸಲಾದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ರಸ್ತುತ ಕಾಡುತ್ತಿರುವ ಇನ್‌ಫ್ಲುಯೆಂಝಾ ಕಾಯಿಲೆ ಮತ್ತು ಚಳಿಗಾಲ ಉಸಿರಾಟ ರೋಗಗಳ ಪ್ರಕರಣಗಳು ಹೆಚ್ಚಲು ಕಾರಣವಾಗುತ್ತದೆ ಎನ್ನುವುದನ್ನು ಮುಖ್ಯವಾಗಿ ಗಮನಿಸಬೇಕು. ಸರಕಾರವು ಪರಿಸ್ಥಿತಿಯ ಮೇಲೆ ನಿಕಟ ನಿಗಾಯಿರಿಸಿದೆ ಮತ್ತು ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ಕೇಂದ್ರ ಆರೋಗ್ಯ ಕಾರ್ಯದರ್ಶಿಗಳು ರವಿವಾರ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದಿರುವ ಪತ್ರದಲ್ಲಿ, ಹಾಸಿಗೆಗಳು, ಇನ್‌ಫುಯೆಂಜಾಕ್ಕೆ ಔಷಧಿಗಳು ಮತ್ತು ಲಸಿಕೆಗಳು, ವೈದ್ಯಕೀಯ ಆಮ್ಲಜನಕ, ಆ್ಯಂಟಿಬಯಾಟಿಕ್ ಗಳು, ವ್ಯಕ್ತಿಗತ ರಕ್ಷಣಾ ಸಾಧನಗಳು, ಪರೀಕ್ಷಾ ಕಿಟ್ಗಳು ಮತ್ತು ರಿಏಜೆಂಟ್‌ಗಳ ಲಭ್ಯತೆ, ಆಕ್ಸಿಜನ್ ಸ್ಥಾವರಗಳು ಮತ್ತು ವೆಂಟಿಲೇಟರ್‌ಗಳ ಕಾರ್ಯನಿರ್ವಹಣೆ ಹಾಗೂ ಸೋಂಕು ನಿಯಂತ್ರಣ ವ್ಯವಸ್ಥೆಗಳಂತಹ ಸಾರ್ವಜನಿಕ ಆರೋಗ್ಯಮತ್ತು ಆಸ್ಪತ್ರೆ ಸನ್ನದ್ಧತೆಯನ್ನು ತಕ್ಷಣ ಪುನರ್‌ಪರಿಶೀಲಿಸುವಂತೆ ಸೂಚಿಸಿದ್ದಾರೆ.

 

ಕೋವಿಡ್ ಸಂದರ್ಭದಲ್ಲಿ ಪರಿಷ್ಠತ ಕಣ್ಣಾವಲು ಕಾರ್ಯತಂತ್ರಕ್ಕಾಗಿ ಈ ವರ್ಷದ ಆರಂಭದಲ್ಲಿ ಹೊರಡಿಸಲಾಗಿ ದ್ದ ಕಾರ್ಯಾಚರಣೆ ಮಾರ್ಗಸೂಚಿಗಳನ್ನು ಅನುಷ್ಠಾನಿಸುವಂತೆ ರಾಜ್ಯಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇನ್‌ಫುಯೆಂಜಾ ರೀತಿಯ ಕಾಯಿಲೆಗಳು (ಐಐಎಲ್) ಮತ್ತು ತೀವ್ರ ಉಸಿರಾಟದ ಕಾಯಿಲೆಗಳ(ಎಸ್‌ಎಆರ್‌ಐ) ಪ್ರಕರಣಗಳಲ್ಲಿ ಉಸಿರಾಟ ರೋಗಕಾರಕಗಳ ಮೇಲೆ ಸಮಗ್ರ ನಿಗಾಕ್ಕೆ ಮಾರ್ಗಸೂಚಿಗಳು ಆದ್ಯತೆ ನೀಡಿವೆ. ವಿಶೇಷವಾಗಿ ಮಕ್ಕಳಲ್ಲಿ ಮತ್ತು ಹದಿಹರೆಯದವರಲ್ಲಿ ಐಎಲ್‌ಐ ಮತ್ತು ಎಸ್‌ಎಆರ್‌ಐ ಲಕ್ಷಣಗಳ ಮೇಲೆ ಸಮಗ್ರ ರೋಗ ಕಣ್ಣಾವಲು ಯೋಜನೆ (ಐಡಿಎಸ್‌ಪಿ)ಯ ಜಿಲ್ಲಾ ಮತ್ತು ರಾಜ್ಯ ಕಣ್ಣಾವಲು ಘಟಕಗಳಿಂದ ನಿಕಟ ಮೇಲ್ವಿಚಾರಣೆಯನ್ನು ಖಚಿತ ಪಡಿಸಿಕೊಳ್ಳುವಂತೆಯೂ ರಾಜ್ಯಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಐಎಲ್‌ಐ/ಎಸ್‌ಎಆರ್‌ಐ ಡೇಟಾಗಳನ್ನು ಐಡಿಎಸ್‌ಪಿ-ಐಎಚ್ ಐಪಿ ಪೋರ್ಟಲ್‌ನಲ್ಲಿ ಅಪ್‌ ಲೋಡ್ ಮಾಡುವುದು ಅಗತ್ಯವಾಗಿ ದೆ. ಎಸ್‌ಎಆರ್‌ಐ ಪೀಡಿತ ರೋಗಿಗಳ, ವಿಶೇಷವಾಗಿ ಮಕ್ಕಳು ಮತ್ತು ಹದಿಹರೆಯದವರ ಮೂಗು ಮತ್ತು ಗಂಟಲು ಸ್ವಾಬ್ ಮಾದರಿಗಳನ್ನು ಉಸಿರಾಟದ ರೋಗಕಾರಕಗಳ ಪರೀಕ್ಷೆಗಾಗಿ ವೈರಸ್ ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯಗಳಿಗೆ ಕಳುಹಿಸುವಂತೆಯೂ ರಾಜ್ಯಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ.

Read These Next

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...