ಮೂಡಬಿದ್ರಿ:ಮೂರು ಹೆಣ್ಣುಮಕ್ಕಳ ತಾಯಿಗೆ ಮನೆ ನಿರ್ಮಿಸಲು ನೆರವಿಗೆ ಮನವಿ

Source: Irshad Mudabidri | By Arshad Koppa | Published on 12th June 2017, 7:37 AM | Coastal News | Special Report | Guest Editorial |

ಮೂಡುಬಿದ್ರಿ, ಜೂನ್ ೧೨: ಮೂಡಬಿದ್ರೆಯ ಕೋಟೆಬಾಗಿಲು ಪ್ರದೇಶದ ನಿವಾಸಿಯಾಗಿರುವ ಖೈರುನ್ನೀಸಾರವರಿಗೆ ಮೂವರು ಹೆಣ್ಣು ಮಕ್ಕಳು. ಆದರೆ ಹುಟ್ಟಿದ ಮೂರೂ ಮಕ್ಕಳು ಹೆಣ್ಣಾದವು ಎಂಬ ಕಾರಣವನ್ನೇ ನೀಡಿ ಈಕೆಯ ಪತಿ ಹೇಳದೇ ಕೇಳದೇ ಸಂಸಾರವನ್ನು ತ್ಯಜಿಸಿ ನಾಪತ್ತೆಯಾಗಿ ಕೆಲವೇ ವರ್ಷಗಳಾಗಿವೆ. ಆತ ಹಿಂದಿರುಗಿ ಬರುವ ಯಾವ ಸೂಚನೆಗಳೂ ಸಧ್ಯಕ್ಕೆ ಕಾಣುತ್ತಿಲ್ಲ. 

ಪತಿಯ ಆಸರೆಯಿಲ್ಲದೇ ಈಕೆ ತನ್ನ ಮೂವರೂ ಮಕ್ಕಳನ್ನು ಓದಿಸಲು ಅಕ್ಕಪಕ್ಕದ ಮನೆಗಳಲ್ಲಿ ಮನೆಕೆಲಸ ಮಾಡಿಕೊಂಡು ದಿನದೂಡುತ್ತಿದ್ದಾರೆ. ಕೋಟೆಬಾಗಿಲಿನಲ್ಲಿರುವ ಪುಟ್ಟ ನಿವೇಶನವೇ ಅವರ ಸಕಲ ಆಸ್ತಿಯಾಗಿದ್ದು ತನ್ನ ಮಕ್ಕಳು ಉತ್ತಮ ಜೀವನ ಸಾಗಿಸಬೇಕೆಂಬ ಬಯಕೆಯಿಂದ ಅವರನ್ನು ಎಲ್ಲಿಯೂ ಕೆಲಸಕ್ಕೆ ಕಳುಹಿಸದೇ ಶಾಲೆಗೆ ಕಳುಹಿಸುತ್ತಿದ್ದಾರೆ. ಈ ನಿವೇಶನದಲ್ಲಿ ಕಷ್ಟಪಟ್ಟು, ಸಾಲ ಮಾಡಿ ಮುರುಕು ಮನೆಯೊಂದನ್ನು ನಿರ್ಮಿಸಿದ್ದಾರೆ. ಆದರೆ ಹಣದ ಮುಗ್ಗಟ್ಟಿನಿಂದ ಅರ್ದಂಬರ್ಧ ಕಟ್ಟಿರುವ ಈ ಮನೆಯನ್ನು ಮನೆಯೆಂದೇ ಹೇಳಲು ಸಾಧ್ಯವಾಗುತ್ತಿಲ್ಲ. ಕೆಳಗಿನ ಚಿತ್ರಗಳಲ್ಲಿ ಇದನ್ನು ಸ್ವತಃ ನೋಡಬಹುದು.

ಈ ಪವಿತ್ರ ರಮಧಾನ್ ತಿಂಗಳಲ್ಲಿ ಈ ಬಡ ಮಹಿಳೆಯ ಮನೆ ಉಳಿಸಿಕೊಳ್ಳಲು ಸಹಾಯ ಮಾಡಲು ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ. ಈಕೆಯ ಮನೆಯನ್ನು ಸ್ವತಃ ನೋಡಿ ಈಕೆ ನಿಜವಾಗಿಯೂ ನೆರವು ಪಡೆಯಲು ಅರ್ಹಳು ಎಂದು ಮೂಡಬಿದ್ರೆಯ ನಿವಾಸಿ ಜನಾಬ್ ಮಕ್ಬೂಲ್ ಹುಸೇನ್ ರವರು ಖಚಿತಪಡಿಸಿದ್ದಾರೆ. ದಾನಿಗಳು ತೆರೆದ ಹೃದಯದಿಂದ ಈಕೆಗೆ ಸಾಧ್ಯವಾದಷ್ಟು ಮಟ್ಟಿಗೆ ನೆರವು ನೀಡುವಂತೆ ಪಾರ್ಥಿಸುತ್ತೇವೆ.

Bank account details:
Mrs. Kairunnisa 
State bank of India 
Moodbidri-574227
SB -A/C no.  3069 2151 083
IFSC code: SBIN0005623

ಹೆಚ್ಚಿನ ವಿವರಗಳಿಗೆ: 
ಜನಾಬ್. ಮಕ್ಬೂಲ್ ಹುಸೇನ್. 0091 - 98 45 25  2874.

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...