ಭಟ್ಕಳದಲ್ಲಿ ಸಚಿವ ಮಂಕಾಳ್ ವೈದ್ಯರ ನೂತನ ಕಾರ್ಯಾಲಯ ಉದ್ಘಾಟನೆ:ಪತ್ರಿಕಾ ವಿತರಕನ ಮಕ್ಕಳ ಕೈಯಲ್ಲಿ ದೀಪ ಬೆಳಗಿಸಿ ಸಚಿವ

Source: so news | By MV Bhatkal | Published on 24th September 2023, 7:56 PM | Coastal News |

ಭಟ್ಕಳ: ಜಿಲ್ಲಾ ಉಸ್ತುವಾರಿ  ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ್ ಎಸ್ ವೈದ್ಯರ ಭಟ್ಕಳದ ನೂತನ ಕಾರ್ಯಾಲಯವು(ಕಚೇರಿ) ತಾಲೂಕಿನ ಅಂಜುಮನ್ ಕಾಲೇಜು ರಸ್ತೆಯಲ್ಲಿ ಸಚಿವ ಮಂಕಾಳ್ ವೈದ್ಯ ಉದ್ಘಾತಿಸಿದರು. 
ಕಾರ್ಯಾಲಯದ ಉದ್ಘಾಟನೆ ವೇಳೆ ಕಾರ್ಯಕ್ರಮಕ್ಕೆ ಬಂದ ಪತ್ರಿಕಾ ವಿತರಕನೋರ್ವನ ಮಕ್ಕಳ ಕೈಯಲ್ಲಿ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು. 


ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ಸಚಿವ ಮಂಕಾಳ್ ವೈದ್ಯ 4 ತಿಂಗಳ ಬಳಿಕ ಭಟ್ಕಳದಲ್ಲಿ ನೂತನ ಕಾರ್ಯಾಲಯ ತೆರೆಯಲಾಗಿದೆ. ಶಾಸಕನಾಗಿ ಸಚಿವನಾದ ಬಳಿಕ ನನ್ನ ಕ್ಷೇತ್ರ ಜನತೆ ತೊಂದರೆಯಾಗದಂತೆ ಈ ಹಿಂದೆ ನನ್ನ ಮನೆಯಲ್ಲೇ ಎಲ್ಲ ನನ್ನ ಜನತೆಗೆ ಸ್ಪಂದಿಸಿದ್ದೇನೆ. ಇನ್ನು ಮುಂದಿನ ದಿನಗಳಲ್ಲಿ ಜಿಲ್ಲೆಯ ಜನರು ನನ್ನ ಕಚೇರಿಗೆ ಬಂದು ಅವರ ಕೆಲಸ ಮಾಡಿಕೊಂಡು ಹೋಗಲು ಎಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದ ಅವರು ಈಗಾಗಲೇ ಹೊನ್ನಾವರ ಮತ್ತು ಬೆಂಗಳೂರಿನಲ್ಲಿ ಕಚೇರಿ ತೆರೆಯಲಾಗಿದ್ದು ಕಾರವಾರದಲ್ಲಿ ಕಚೇರಿ ಕೆಲಸ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಕಚೇರಿ ತೆರೆಯಲಾಗುತ್ತದೆ. ಜನತೆಗೆ ಅನುಕೂಲವಾಗುವಂತೆ ಆಯಾ ಸ್ಥಳದಲ್ಲಿ ಕಚೇರಿ ತೆರೆಯಲಾಗಿದೆ. ನನ್ನ ಕಚೇರಿ ಯಲ್ಲಿ ನಾನು ಇಲ್ಲದೆ ಇದ್ದರೂ ಕೂಡ ಇಲ್ಲಿ ಕೆಲಸ ಆಗುವಂತೆ ಮಾಡಿದ್ದೇನೆ. ಒಂದೊಮ್ಮೆ ಪಿಎ.ಅಥವಾ ಪಿಎಸ್ ಹತ್ತಿರ ಕೆಲಸ ಆಗದೆ ಇದ್ದಲ್ಲಿ ನನ್ನ ಗಮನಕ್ಕೆ ತಂದು ಕೆಲಸ ಆಗುವಂತೆ ಮಾಡುತ್ತೇನೆ ಎಂದರು. ಬೆಳ್ಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕಚೇರಿಯಲ್ಲಿ ಕೆಲಸ ನಡೆಯಲಿದ್ದು, ನಾನು   ಕಚೇರಿಯಲ್ಲಿ ಲಭ್ಯವಿರುವ ದಿನವನ್ನು ಮುಂಚಿತವಾಗಿ ತೇಲಿಸುತ್ತೇನೆ ಎಂದ ಅವರು ತಿಂಗಳಲ್ಲಿ ಒಂದು ದಿನ ಕಾರವಾರದಲ್ಲಿ ತಿಂಗಳಿಗೆ ನಾಲ್ಕು ದಿನ ಬೆಂಗಳೂರಿನ ಕಚೇರಿಯಲ್ಲಿ ಹಾಗೂ ವಾರದಲ್ಲಿ ಒಂದು ದಿನ ಭಟ್ಕಳ ಹೊನ್ನಾವರದಲ್ಲಿ ಹಾಗು ನನ್ನ ಮನೆಯಲ್ಲಿಯೂ ಕೂಡ ಜನತೆಗೆ ಸಿಗಳಿದ್ದೇನೆ. ಆದರೆ ಜನತೆಯಲ್ಲಿ ಬಳಿ ಕೋರಿಕೊಳ್ಳುದೇನೆಂದರೆ ನನ್ನ ಆಪ್ತ ಸಹಾಯಕರ ಬಳಿ ಕೆಲಸ ಆಗದೆ ಇದ್ದಲ್ಲಿ ಮಾತ್ರ ನನ್ನ ಬಳಿ ಬರುವಂತೆ ವಿನಂತಿ ಮಾಡಿಕೊಳ್ಳುತ್ತೇನೆ ಯಾಕೆಂದರೆ ನನ್ನ ಎಲ್ಲಾ ಕೆಲಸವನ್ನು ಮಾಡಲು  ಅವರ ಬಳಿ ಅವಕಾಶ ಇದೆ ಅದೆ ರೀತಿ ಜನತೆಗೆ ಸಹಾಯವಾಗಲೆಂದು ಭಟ್ಕಳ ಹೊನ್ನಾವರ ಕಾರವಾರ ಹಾಗೂ ಬೆಂಗಳೂರಿನಲ್ಲಿ ಒಟ್ಟು ನಾಲ್ಕು ದೂರವಾಣಿ ಸಂಖ್ಯೆ ನೀಡಿದ್ದು ಯಾರಿಗೆ ಏನೇ ಸಮಸ್ಯೆಯಾದಲ್ಲಿ ದೂರವಾಣಿ ಸಂಖ್ಯೆಗೆ ಕೆರೆ ಮಾಡಿ ಸಮಸ್ಯೆ ಪರಿಹರಿಸಿಕೊಳ್ಳ ಬಹುದಾಗಿದ್ದು ಇದು 24 ಗಂಟೆಗಳ ಕಾಲ ಚಾಲ್ತಿಯಲ್ಲಿರುತ್ತದೆ ಎಂದರು. 
ಈ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಸಚಿವರಿಗೆ ಶುಭಾಶಯ ಕೋರಿದರು

 

 

Read These Next

ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ರಾಸಾಯನಿಕ ಬಳಕೆ ಕುರಿತು ವ್ಯಾಪಕವಾಗಿ ಪರಿಶೀಲಿಸಿ : ಜಿಲ್ಲಾಧಿಕಾರಿ

ಕಾರವಾರ :ಜಿಲ್ಲೆಯಲ್ಲಿನ ಆಹಾರ ತಯಾರಿಕಾ ಘಟಕಗಳು, ಬೀದಿ ಬದಿ ವ್ಯಾಪಾರಿಗಳು ತಯಾರಿಸುವ ಆಹಾರ ಪದಾರ್ಥಗಳಲ್ಲಿ ಸಾರ್ವಜನಿಕರ ಆರೋಗ್ಯದ ...