ಮಂಗಳೂರು: ಮೀನಿಗೂ ತಟ್ಟಿದ ಬೆಲೆ ಏರಿಕೆ, ಮಾಂಸಹಾರಿಗಳು ಕಂಗಾಲು

Source: Vb | By I.G. Bhatkali | Published on 19th June 2023, 8:16 AM | Coastal News | State News |

ಮಂಗಳೂರು: ದಿನದಿಂದ ದಿನಕ್ಕೆ ಕೋಳಿ, ಮೀನು, ಮೊಟ್ಟೆಗಳಿಗೆ ಬೆಲೆ ಏರಿಕೆಯಾಗುತ್ತಿದ್ದು, ಜನರು ತತ್ತರಿಸಿದ್ದಾರೆ. ಮಳೆಗಾಲದಲ್ಲಿ ಮೀನಿನ ದರ ಹೆಚ್ಚಳವಾಗುವುದು ಸಹಜವಾ ಗಿದ್ದು, ತಾಜಾ ಮೀನು ಸಿಗದ ಕಾರಣ ಖರೀದಿಸಲು ಜನ ಹಿಂದೇಟು ಹಾಕುತ್ತಿದ್ದಾರೆ.

ಮೀನಿನ ದರ ಹೆಚ್ಚಳ: ಹಸಿ ಮೀನು ಮಾರುಕಟ್ಟೆಯಲ್ಲಿ ಮಾಂಜಿ ಮೀನು ಕೆ.ಜಿ.ಗೆ 900 ರೂ.ಗಿಂತ ಹೆಚ್ಚಿದೆ. ಬೊಲ್ಲೆಂಜೀರ್ ಮೀನು ಕೆ.ಜಿ.ಗೆ 250 ರೂ., ಸಣ್ಣಗಾತ್ರದ ಸಿಗಡಿ ಕೆ.ಜಿ. ಗೆ 250 ರೂ., ದೊಡ್ಡಗಾತ್ರದ ಸಿಗಡಿ ಕೆ.ಜಿ.ಗೆ 450 ರೂ., ತೊರಕೆ ಮೀನು ಪೀಸ್‌ಗೆ 250 ರೂ., ಡಿಸ್ಕೊ ಮೀನು ಕೆ.ಜಿ.ಗೆ 200 ರೂ., ಮುರು ಮೀನು ಕೆ.ಜಿ.ಗೆ 200 ರೂ., ಮಾದಿಮಾಲ್ (ರಾಣಿ ಮೀನು) ಕೆ.ಜಿ.ಗೆ 200 ರೂ., ಕಾನೆ ಮೀನು ಕೆ.ಜಿ.ಗೆ 350 ರೂ., ತೇಡೆ ಮೀನು ಕೆ.ಜಿ.ಗೆ 250 ರಿಂದ 500 ರೂ. ವರೆಗೆ ಇದ್ದು, ಬೊಂಡಾಸ್ ಕೆ.ಜಿ.ಗೆ 200 ರಿಂದ 400 ರೂ., ಕೇರಳದ ದೊಡ್ಡಗಾತ್ರದ ಬೂತಾಯಿ ಮೀನು ಕೆ.ಜಿ.ಗೆ 300 ರೂ.ಗೆ ಮಾರಾಟವಾಗುತ್ತಿದೆ.

ಒಣ ಮೀನಿಗೂ ಏರಿದ ದರ: ಮೀನುಗಾರಿಕೆ ರಜೆ : ಅವಧಿಯಾಗಿರುವುದರಿಂದ ಬೋಟ್‌ಗಳು ಸಮುದ್ರಕ್ಕೆ ಇಳಿಯುದಿಲ್ಲ. ಮೀನು ಕೂಡ ತಾಜಾ ಸಿಗದ ಕಾರಣ, ದಿನಗಳ ಹಿಂದೆ ಐಸ್ ಪ್ಯಾಕ್ ಮಾಡಿ ಇಟ್ಟಿರುವಿದರಿಂದ ಜನರು ಒಣ ಮೀನಿಗೆ ಮುಗಿಬೀಳುತ್ತಿದ್ದಾರೆ. ಸದ್ಯ ಒಣ ಮೀನು ಮಾರುಕಟ್ಟೆಯಲ್ಲಿ ಬಲ್ಯಾರ್ ಕೆ.ಜಿ. ಗೆ 600 ರೂ., ಸೊರಕೆ ಕೆ.ಜಿ.ಗೆ 400 ರೂ., ನಂಗ್ ಮೀನು ಕೆ.ಜಿ.ಗೆ 250 ರೂ., ಬೂತಾಯಿ ಕೆ.ಜಿ.ಗೆ 250 ರೂ., ಸಣ್ಣ ಕೊಲತ್ತರು ಮೀನಿಗೆ 280 ರೂ., ದೊಡ್ಡಕೊಲತ್ತರು ಮೀನಿಗೆ 400 ರೂ., ಹಾಗೆಯೇ ಬಂಗುಡೆ ಕೆ.ಜಿ.ಗೆ 320 ರೂ, ಕಲ್ಲೂರು ಕೆ.ಜಿ.ಗೆ 320 ರೂ., ಮಾಂಜಿ ಕೆ.ಜಿ.ಗೆ 400 ರೂ., ಕುರ್ಚಿ ಕೆ.ಜಿ.ಗೆ 190 ರೂ., ಸಿಗಡಿ ಕೆ.ಜಿ.ಗೆ 380 ರಿಂದ 500 ರೂ. ವರೆಗೆ ದರ ಇದೆ.

ಕುರಿ, ಕೋಳಿ, ಮೊಟ್ಟೆ: ಬಾಯ್ಸ‌ ಇಡೀ ಕೋಳಿ ಕೆ.ಜಿ.ಗೆ 185 ರೂ., ಚರ್ಮ ಸಹಿತ ಕೋಳಿ ಕೆ.ಜಿ.ಗೆ 250 ರೂ., ಚರ್ಮ ರಹಿತ ಕೋಳಿ ಕೆ.ಜಿ.ಗೆ 290 ರೂ. ಇದ್ದು, ಟೈಸನ್ ಇಡೀ ಕೋಳಿ ಕೆ.ಜಿ.ಗೆ 170 ರೂ., ಕೋಳಿ ಮಾಂಸಕ್ಕೆ 230 ರೂ. ಇದೆ. ಸಾಮಾನ್ಯವಾಗಿ 5 ರೂ.ಇದ್ದ ಮೊಟ್ಟೆಗೆ ಈಗ 6.10ರೂ.ಗಳಲ್ಲಿ ಮಾರಾಟವಾಗುತ್ತಿದ್ದು ಕೆಲವೆಡೆ 7 ರೂ.ಗೂ ಮಾರಾಟವಾಗುತ್ತಿದೆ. ಇನ್ನೂ ಕುರಿ ಮಾಂಸದ ದರವಂತೂ ಗಗನಕ್ಕೇರಿದ್ದು, ಬನ್ನೂರು ಮಟನ್ ಕೆ.ಜಿ.ಗೆ 600ರೂ.ಗೆ ಮಾರಾಟವಾಗುತ್ತಿದೆ.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಬಿಜೆಪಿ ಮುಖಂಡನಿಗೆ ಪೆನ್‌ಡ್ರೈವ್ ನೀಡಿದ್ದೆ; ಪ್ರಜ್ವಲ್ ಕಾರು ಚಾಲಕನಿಂದ ಹೇಳಿಕೆ

ಪ್ರಜ್ವ ರೇವಣ್ಣರದ್ದು ಎನ್ನಲಾದ ಅಶ್ಲೀಲ ವೀಡಿಯೊ ಪೆನ್ ಡ್ರೈವ್ ಬಿಜೆಪಿ ಮುಖಂಡರೂ ಆಗಿರುವ ವಕೀಲ ದೇವರಾಜೇಗೌಡ ಬಿಟ್ಟು ಬೇರೆ ಯಾರಿಗೂ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಅವಧಿ ಉಲ್ಲೇಖಿಸದೇ ಪ್ರಜ್ವಲ್ ರೇವಣ್ಣ ಜೆಡಿಎಸ್‌ನಿಂದ ಅಮಾನತು

ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಪ್ರಕರಣ ಸಂಬಂಧ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ರೇವಣ್ಣ, ಪ್ರಜ್ವಲ್ ಉಚ್ಚಾಟನೆಗೆ ಜೆಡಿಎಸ್ ಶಾಸಕರ ಪಟ್ಟು

ರಾಜ್ಯದ ಜನತೆಯ ಮುಂದೆ ತಲೆ ತಗ್ಗಿಸುವಂತಹ ಕೆಲಸ ಮಾಡಿದವರನ್ನು ರಾಕ್ಷದಿಂದ ಉಚ್ಚಾಟನೆ ಮಾಡಿ ಪಕ್ಷದ ಘನತೆಯನ್ನು ಉಳಿಸಬೇಕಿದೆ ಎಂದು ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ: ಕುಮಾರಸ್ವಾಮಿ

ಜೆಡಿಎಸ್ ಸಂಸದ ಪ್ರಜಿ ಕುಮಾರಸ್ವಾಮಿ ಡ್ರೈವ್ ಪ್ರಕರಣದಲ್ಲಿ ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ' ಎಂದು ಮಾಧ್ಯಮಗಳ ಮುಂದೆ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ತ್ವರಿತಗತಿಯಲ್ಲಿ ತನಿಖೆ ನಡೆಸಿ, ವರದಿ ಸಲ್ಲಿಸಲು ಸೂಚನೆ: ಪರಮೇಶ್ವ‌ರ್

ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಿ, ವರದಿ ಸಲ್ಲಿಸುವಂತೆ ...