ಮಂಗಳೂರು: ಕರಾವಳಿಯಲ್ಲಿ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿರುವ ಶೋಭಾ ಕರಂದ್ಲಾಜೆ ಮತ್ತು ನಳಿನ್ ಕುಮಾರ್ ರನ್ನು ಬಂಧಿಸಿ- ಎಸ್.ಡಿ.ಪಿ.ಐ

Source: sdpi | By Arshad Koppa | Published on 11th July 2017, 8:43 AM | Coastal News | Special Report | Guest Editorial |

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ತಿಂಗಳಿನಿಂದಲೂ ಪ್ರಕ್ಷುಬ್ಧ ವಾತಾವರಣವಿದ್ದು 2 ಅಮಾಯಕ ಯುವಕರ ಕೊಲೆ ಮತ್ತು 7 ಚೂರಿ ಇರಿತ ಪ್ರಕರಣಗಳು ನಡೆದಿರುತ್ತದೆ. ಕಾನೂನು ಸುವ್ಯವಸ್ಥೆಯ ದೃಷ್ಠಿಯಿಂದ ಇಲ್ಲಿ ನಿರಂತರವಾಗಿ ಸೆಕ್ಷನ್ 144 ಜಾರಿಯಲ್ಲಿದ್ದರೂ ಸಹ ಶರತ್ ಕೊಲೆಯನ್ನು ಖಂಡಿಸುವ ನೆಪದಲ್ಲಿ ಬಿ.ಜೆ.ಪಿ ಸಂಸದರಾದ ಶೋಭಾ ಮತ್ತು ನಳಿನ್ ಕುಮಾರ್ ರವರ ನೇತೃತ್ವದಲ್ಲಿ ಬಿ.ಸಿ.ರೋಡಿನಲ್ಲಿ ಸಾವಿರಾರು ಜನರನ್ನು ಸೇರಿಸಿ ಪ್ರಕ್ಷುಬ್ಧವಾದ ವಾತಾವರಣವನ್ನು ಸೃಷ್ಠಿಸಿ ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿರುತ್ತಾರೆ ಹಾಗೂ ಸೂತಕದ ವಾತಾವರಣದ ನಡುವೆಯು ಕುಣ ದು ಕುಪ್ಪಳಿಸಿರುವಂತಹದ್ದು ಸತ್ತ ಶರತ್ ರವರಿಗೆ ಮಾಡಿರುವ ಅವಮಾನವಾಗಿರುತ್ತದೆ. ಈ ಸಂದರ್ಭದಲ್ಲಿ ಇಬ್ಬರೂ ಸಂಸದರ ಮೇಲೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ಇಲ್ಲಿ ಗಮನಾರ್ಹವಾಗಿದೆ. 
ಶರತ್ ಕೊಲೆ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸಬೇಕಾಗಿರುವುದು ಜಿಲ್ಲೆಯ ಪೋಲಿಸರ ಕರ್ತವ್ಯವಾಗಿದ್ದು ಅದನ್ನು ಜಿಲ್ಲೆಯ ಸಮಸ್ತ ನಾಗರೀಕರು ಆಗ್ರಹಿಸುತ್ತಾರೆ. ಆದರೆ ಪ್ರಕರಣವು ತನಿಖೆಯ ಹಂತದಲ್ಲಿರುವಾಗಲೇ ಜವಾಬ್ದಾರಿಯುತ ಸ್ಥಾನದಲ್ಲಿರುವ ಬಿಜೆಪಿ ಸಂಸದರು ಕೊಲೆಯ ಆರೋಪವನ್ನು ಎಸ್.ಡಿ.ಪಿ.ಐ ಮತ್ತು ಪಿಎಫ್‍ಐ ಸಂಘಟನೆಯ ಮೇಲೆ ಹೊರಿಸಲು ಹೊರಟಿರುವುದು ಸರಿಯಲ್ಲ. ಇದು ಪೋಲಿಸರನ್ನು ದಿಕ್ಕು ತಪ್ಪಿಸುವ ಹುನ್ನಾರವಾಗಿರುತ್ತದೆ ಮತ್ತು ಕೊಲೆಯ ಪ್ರಕರಣದಲ್ಲಿ ಅಮಾಯಕರನ್ನು ಸಿಲುಕಿಸುವ ಪ್ರಯತ್ನವಾಗಿರುತ್ತದೆ. 
ಈ ಹಿಂದೆಯೂ ಕೂಡಾ ಸಂಘಪರಿವಾರದ ಕಿಡಿಗೇಡಿಗಳು ನಡೆಸಿರುವ ಕಾರ್ತಿಕ್ ರಾಜ್ ಎಂಬ ಯುವಕನ ಹತ್ಯೆಯ ಸಂದರ್ಭದಲ್ಲಿ ಹಾಗೂ ಶಿವಮೊಗ್ಗದ ಯುವಕನ ಹತ್ಯೆಯ ಸಂದರ್ಭದಲ್ಲಿ ಇದೇ ರೀತಿಯ ಆರೊಪವನ್ನು ಹೊರಿಸಿ ನಂತರ ಪೋಲಿಸ್ ತನಿಖೆಯಿಂದ ಈ ಕೊಲೆಗಳು ಕುಟುಂಬ ಕಲಹದಿಂದ ನಡೆದಿರುವಂತಹದ್ದು ಎಂದು ಸಾಬೀತಾಗಿರುತ್ತದೆ. ಈ ಕೊಲೆಯು ಅದೇ ರೀತಿ ನಡೆದಿರಬಹುದು. ಅದನ್ನು ತನಿಖೆ ನಡೆಸಲು ಪೋಲಿಸರಿಗೆ ಸಮಯವಕಾಶ ನೀಡಬೇಕಾದವರೇ ಈ ರೀತಿಯ ಬೇಜವಾಬ್ದಾರಿತನದ ಹೇಳಿಕೆಯನ್ನು ನೀಡಿ ಪ್ರಕ್ಷುಬ್ಧವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯನ್ನು ಹೊತ್ತಿ ಉರಿಯುವಂತೆ ಪ್ರೇರೆಪಿಸುತ್ತಿದ್ದಾರೆ. 
ಶೋಭಾ ಮತ್ತು ನಳಿನ್ ಕುಮಾರ್‍ರವರು ದೇಶದ ಗೃಹಮಂತ್ರಿ ರಾಜನಾಥ್ ಸಿಂಗ್ ರವರಿಗೆ ಬರೆದಿರುವ ಪತ್ರದಲ್ಲಿ ಸಂಘಪರಿವಾರದ ಕಾರ್ಯಕರ್ತರನ್ನು ಕೊಂದಿರುವುದಾಗಿ ಆರೋಪಿಸಿರುವ 23 ಪ್ರಕರಣಗಳನ್ನು ಎನ್.ಐ.ಎ ತನಿಖೆ ನಡೆಸುವಂತೆ ಆಗ್ರಹಿಸಿರುತ್ತಾರೆ. ಇದರಲ್ಲಿ ಕುಟುಂಬ ಕಲಹದ್ದು ಮತ್ತು ವ್ಯೆಯಕ್ತಿಕ ದ್ವೇಷದ ನೆಲೆಯಲ್ಲೂ ನಡೆದಿರುವ ಪ್ರಕರಣಗಳನ್ನು ಕೂಡಾ ಸೇರಿಸಿರುವುದು ನಾಚಿಕೆಗೇಡಿನ ವಿಚಾರವಾಗಿದೆ. ಹಾಗೂ ತನ್ನ ಪತ್ರದಲ್ಲಿ ಸಂಘಪರಿವಾರದಿಂದಲೇ ಕೊಲೆಗೀಡಾಗಿರುವ ಹರೀಶ್ ಪೂಜಾರಿ, ಪ್ರವೀಣ್ ಪೂಜಾರಿ, ಕೃಷ್ಣಯ್ಯ ಪಾಟಾಳಿ, ವಿನಯಕುಮಾರ್ ಬಾಳಿಗಾ, ಮುಸ್ತಫಾ ಕಾವೂರು, ಅಶ್ರಫ್ ಕಲಾಯಿ, ಜಲೀಲ್ ಕರೋಪಾಡಿ, ಸಫ್ವಾನ್ ಪಟ್ಲ, ನಾಸಿರ ಸಜಿಪ ಈ ಎಲ್ಲಾ ಅಮಾಯಕರ ಕೊಲೆಗಳನ್ನು ಉಲ್ಲೇಖಿಸದೆ ಇರುವಂತಹದ್ದು ಸಂಸದರ ದ್ವಿಮುಖ ಧೋರಣೆ ಮತ್ತು ತಮ್ಮೊಳಗೆ ಅಡಗಿರುವ ವರ್ಣಾಶ್ರಮ ಪದ್ಧತಿಯ ಹಿಂದುತ್ವದ ಮುಖವಾಡವನ್ನು ಎತ್ತಿ ತೋರಿಸುವುದರೊಂದಿಗೆ ತಾವು ಪ್ರಜಾಸತ್ತಾತ್ಮಕತೆಯ ವಿರೋಧಿಗಳು ಎಂಬುವುದನ್ನು ಸಾಬೀತು ಪಡಿಸುತ್ತದೆ. 
ಕಳೆದ ನಾಲ್ಕು ವರ್ಷಗಳಲ್ಲಿ ಆತ್ಮಹತ್ಯೆಗಳು, ಸರಕಾರಿ ಉದ್ಯೋಗಿಗಳ ಸಾವುಗಳಿಗೆ ಕೋಮುಬಣ್ಣ ಮತ್ತು ರಾಜಕೀಯ ಬಣ್ಣ ಹಚ್ಚಿ ಅರಾಜಕತೆ ಸೃಷ್ಠಿಸುವುದರಲ್ಲಿ ಆರ್.ಎಸ್.ಎಸ್- ಬಿಜೆಪಿ ಪರಿವಾರ ನಿರಂತರವಾಗಿ ಯತ್ನಿಸುತ್ತಿದೆ. ಸೂತಕದ ಮನೆಯಲ್ಲಿ ರಾಜಕೀಯ ಮಾಡುತ್ತಿರುವ ಈ ನೀಚ ರಾಜಕಾರಣ ಗಳನ್ನು ಕಾನೂನಿನ ಅಡಿಯಲ್ಲಿ ತರುವವರೆಗೂ ಇಲ್ಲಿ ಕೋಮುಧ್ವೇಷಗಳು ಕೊನೆಗೊಳ್ಳಲು ಸಾದ್ಯವಿಲ್ಲ. ಆದ್ದರಿಂದ ಇಂತಹವರ ವಿರುದ್ದ ಸೂಕ್ತವಾದ ಕ್ರಮಕೈಗೊಳ್ಳುವುದು ಅನಿವಾರ್ಯವಾಗಿರುತ್ತದೆ ಎಂಬುವುದನ್ನು ಅರ್ಥೆಸಿಕೊಂಡು ಮಾನ್ಯ ಲೋಕಸಭಾ ಸಭಾಪತಿಯವರು ಮತ್ತು ರಾಷ್ಟ್ರೀಯ ಚುನಾವಣಾ ಆಯೋಗ ಶೋಭಾ ಕರಂದ್ಲಾಜೆ ಮತ್ತು ನಳಿನ್ ಕುಮಾರ್ ಕಟೀಲ್‍ರವರ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಬೇಕಾಗಿದೆ. ಕೋಮು ಪ್ರಚೋದನೆ ಹಾಗೂ ರಾಜ್ಯದಲ್ಲಿ ಅರಾಜಕತೆಯನ್ನು ಸೃಷ್ಠಿಸುತ್ತಿರುವ ಬಿಜೆಪಿ ಸಂಸದರು, ಶಾಸಕರು ಮತ್ತು ಸಂಘಪರಿವಾರದ ನಾಯಕರಾದ ಕಲ್ಲಡ್ಕ ಪ್ರಭಾಕರ್ ಭಟ್, ಶರಣ್ ಪಂಪ್‍ವೆಲ್, ಜಗದೀಶ್ ಶೇಣವ ಮೊದಲಾದವರ ಮೇಲೆ ಕೇಸು ದಾಖಲಿಸಿ ಜೈಲಿಗಟ್ಟಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ದಕ್ಷಿಣ ಕನ್ನಡ ಜಿಲ್ಲಾಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆಯವರು ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ. 

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...